ಕಾರವಾರ: ಕಾರವಾರ ಜಿಲ್ಲೆಯಲ್ಲಿ ಆತಂಕ ಶುರುವಾಗಿದೆ. ಕಾರವಾರದ ಶಿರವಾಡ ಸಮೀಪದ ಜಾಂಬಾ ಗ್ರಾಮದ ಐದು ಕಿಲೋಮಿಟರ್ ವ್ಯಾಪ್ತಿಯಲ್ಲಿ ನಿರ್ಬಂಧಿತ ಸ್ಯಾಟಲೈಟ್ ಫೋನ್ ಆಕ್ಟಿವ್ ಆಗಿದೆ.
ಯಾವಾಗಿಂದ..?
ಕಳೆದ ಸೋವವಾರದಿಂದ ಸತತ ಟ್ರ್ಯಾಕ್ ಆಗುತ್ತಿರುವ ನಿರ್ಬಂಧಿತ ಸ್ಯಾಟಲೈಟ್ ಫೋನ್ ಸಂಬಂಧ, ಕೇಂದ್ರ ಆಂತರಿಕ ಭದ್ರತಾ ವಿಭಾಗ(ಐಎಸ್‌ಡಿ) ವಿಭಾಗದಿಂದ ತನಿಖೆ ಶುರುವಾಗಿದೆ.
ಟ್ರ್ಯಾಕ್ ಆದ ಹಿನ್ನಲೆಯಲ್ಲಿ ಆಂತರಿಕ ಭದ್ರತಾ ವಿಭಾಗ(ಐಎಸ್‌ಡಿ), ಅರಣ್ಯ ಇಲಾಖೆ ಸ್ಥಳೀಯ ಪೊಲೀಸರೊಳಗೊಂಡ ಐದು ಜನರ ತಂಡ ಜಾಂಬಾ ಗ್ರಾಮ ವ್ಯಾಪ್ತಿಯ ಅರಣ್ಯ ದಲ್ಲಿ ಕೂಮಿಂಗ್ ಕಾರ್ಯಾಚರಣೆ ನಡೆಸುತ್ತಿದೆ.
ಎಲ್ಲೇಲ್ಲಿ ಆಕ್ಟಿವ್..?
ಈವರೆಗೆ ಜಿಲ್ಲೆಯ ಕಾರವಾರ, ಯಲ್ಲಾಪುರ, ಸಿದ್ದಾಪುರ ಭಾಗದಲ್ಲಿ ಹತ್ತಕ್ಕೂ ಹೆಚ್ಚು ಬಾರಿ ನಿರ್ಬಂಧಿತ ಸ್ಯಾಟಲೈಟ್ ಪೋನ್ ಆಕ್ಟಿವ್ ಅಗಿದೆ.
ಕೈಗಾ ಅಣುಸ್ಥಾವರ, ನೌಕಾನೆಲೆ ಭದ್ರತೆ ದೃಷ್ಟಿಯಿಂದ ಕೇಂದ್ರ ಆಂತರಿಕ ಭದ್ರತಾ ವಿಭಾಗ(ಐಎಸ್‌ಡಿ) ಹೆಚ್ಚಿನ ತನಿಖೆ ಶುರು ಮಾಡಿದೆ.