Home ಅನ್ನದಾತನ ಅಂಕಣ

Category: ಅನ್ನದಾತನ ಅಂಕಣ

Post
ಹಾವೇರಿಯ ನಾಗೇಂದ್ರನಮಟ್ಟಿಯ ರಾಕ್ ಸ್ಟಾರ್ ಕೊಬ್ಬರಿ ಹೋರಿ ಇನ್ನಿಲ್ಲ..!

ಹಾವೇರಿಯ ನಾಗೇಂದ್ರನಮಟ್ಟಿಯ ರಾಕ್ ಸ್ಟಾರ್ ಕೊಬ್ಬರಿ ಹೋರಿ ಇನ್ನಿಲ್ಲ..!

ಹಾವೇರಿ: ಸಹಸ್ರಾರು ಅಭಿಮಾನಿಗಳನ್ನು ಹೊಂದಿದ್ದ ಹಾವೇರಿಯ ನಾಗೇಂದ್ರನಮಟ್ಟಿಯ ಚಿಕ್ಕಪ್ಪ ಅಜ್ಜಪ್ಪ ದೊಡ್ಡ ತಳವಾರ ಅವರ ನೆಚ್ಚಿನ ರಾಕ್ ಸ್ಟಾರ್‌ ಕೊಬ್ಬರಿ ಹೋರಿ ಏ.6ರಂದು ಶನಿವಾರ ರಾತ್ರಿ 9ರ ಸುಮಾರಿಗೆ ಸಾವನ್ನಪ್ಪಿದೆ. ಅನಾರೋಗ್ಯದ ಸಮಸ್ಯೆಯಿಂದ ಹೋರಿ ಅಸುನೀಗಿದೆ. ಕಳೆದ ಹಲವಾರು ದಿನಗಳಿಂದ ನೆಲಕಟ್ಟಿದ್ದ ಹೋರಿಯನ್ನು ಜೋಪಾನವಾಗಿ ಕಾಪಾಡುತ್ತಾ ಬಂದಿದ್ದ ಹೋರಿಯ ಮಾಲೀಕ ಚಿಕ್ಕಪ್ಪ ಅವರ ಸಹೋದರರು, ಮನೆಯ ಮಂದಿ ನಿತ್ಯ ಹೋರಿಯ ಕಾಳಜಿಮಾಡುತ್ತಾ ಬಂದಿದ್ದರು. ನೂರಾರು ಹೋರಿಯ ಸ್ಪರ್ಧೆಗಳಲ್ಲಿ ಭಾಗವಹಿಸಿ ಹಲವಾರು ಬಹುಮಾನಗಳನ್ನು ಗೆಲುವು ಮೂಲಕ ತನ್ನ ಸೌಮ್ಯ...

Post
ಸಾಲಬಾಧೆ, ಇಂದೂರಿನಲ್ಲಿ ಕಳೆನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡನಾ ಅನ್ನದಾತ..? ತನ್ನ ಗದ್ದೆಯಲ್ಲೇ ಸಾವಿಗೆ ಶರಣಾದ ರೈತ

ಸಾಲಬಾಧೆ, ಇಂದೂರಿನಲ್ಲಿ ಕಳೆನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡನಾ ಅನ್ನದಾತ..? ತನ್ನ ಗದ್ದೆಯಲ್ಲೇ ಸಾವಿಗೆ ಶರಣಾದ ರೈತ

ಮುಂಡಗೋಡ ತಾಲೂಕಿನ ಇಂದೂರಿನಲ್ಲಿ ಅನ್ನದಾತನೋರ್ವ ಕಳೆನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರೋ ಘಟನೆ ನಡೆದಿದೆ. ತೀವ್ರ ಬರದ ಹಿನ್ನೆಲೆಯಲ್ಲಿ ಬೋರವೆಲ್ ನಲ್ಲಿ ಅಂತರ್ಜಲ ಬತ್ತಿಹೋದ ಕಾರಣಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರೋ ಶಂಕೆ ವ್ಯಕ್ತವಾಗಿದೆ. ಇಂದೂರು ಗ್ರಾಮದ ಬಾಬಾಜಾನ್ ದಾವಲಸಾಬ್ ಹುಬ್ಬಳ್ಳಿ(65) ಎಂಬುವ ರೈತನೇ ಆತ್ಮಹತ್ಯೆ ಮಾಡಿಕೊಂಡಿದ್ದು, ಗದ್ದೆಯಲ್ಲೇ ಸಾವಿಗೆ ಶರಣಾಗಿದ್ದಾನೆ. ಅಂದಹಾಗೆ, ಎರಡು ಎಕರೆ ಜಮೀನು ಹೊಂದಿರೋ ರೈತನಿಗೆ ಸಹಕಾರಿ ಬ್ಯಾಂಕ್ ಸೇರಿದಂತೆ ಖಾಸಗಿಯಾಗಿಯೂ ಸಾಲ ಮಾಡಿಕೊಂಡಿದ್ದ. ಸುಮಾರು 4 ಲಕ್ಷ ರೂ. ಸಾಲ ಮಾಡಿಕೊಂಡಿದ್ದ ರೈತನಿಗೆ ತೀವ್ರ...

Post
ನಂದಿಕಟ್ಟಾ, ಹುಲಿಹೊಂಡ ಭಾಗದಲ್ಲಿ ಕಾಡಾನೆಗಳ ಹಿಂಡು, ರೈತರ ತೋಟ, ಗದ್ದೆಗಳಲ್ಲಿ ಹಾನಿ..!

ನಂದಿಕಟ್ಟಾ, ಹುಲಿಹೊಂಡ ಭಾಗದಲ್ಲಿ ಕಾಡಾನೆಗಳ ಹಿಂಡು, ರೈತರ ತೋಟ, ಗದ್ದೆಗಳಲ್ಲಿ ಹಾನಿ..!

 ಮುಂಡಗೋಡ ತಾಲೂಕಿನ ಹುಲಿಹೊಂಡ, ಬಸಾಪುರ, ನಂದಿಕಟ್ಟಾ ಭಾಗದಲ್ಲಿ ಕಾಡಾನೆಗಳು ಹಿಂಡು ದಾಂಗುಡಿ ಇಟ್ಟಿದೆ. ಕಾಡಂಚಿನ ಗ್ರಾಮಗಳ ರೈತರ ಗದ್ದೆಗಳು, ತೋಟಗಳಿಗೆ ದಾಳಿ ಮಾಡಿ ಬೆಳೆ ನಾಶ ಮಾಡಿವೆ. ಶನಿವಾರ ರಾತ್ರಿ ಹುಲಿಹೊಂಡ ಗ್ರಾಮದ ಕಾಡಂಚಿನ ಗದ್ದೆ ತೋಟಗಳಿಗೆ ದಾಳಿ ಮಾಡಿರೋ ಗಜರಾಜನ ಹಿಂಡು, ರೈತರ ಅಡಿಕೆ ಗಿಡ, ಕಬ್ಬು, ಬಾಳೆ ಫಸಲನ್ನು ತಿಂದು, ತುಳಿದು ಹಾನಿಮಾಡಿವೆ. ಹುಲಿಹೊಂಡ ಗ್ರಾಮದ ನಾಗಪ್ಪ ಅಲ್ಲಾಪುರ, ರಾಜು ಕಂಬಾರ, ಮಂಜುನಾಥ್ ರಾಯ್ಕರ್, ಈಶ್ವರ ಅಲ್ಲಾಪುರ ಎಂಬುವ ರೈತರ ಕಬ್ಬಿನ ಬೆಳೆ...

Post
ಕರಡಿ ದಾಳಿಯಿಂದ ಸತ್ತ ರೈತನ ಕುಟುಂಬಕ್ಕೆ 15 ಲಕ್ಷ ಪರಿಹಾರದ ಚೆಕ್ ವಿತರಣೆ, ಅರಣ್ಯ ಅಧಿಕಾರಿಗಳ ಜವಾಬ್ದಾರಿಗೆ ಸಾರ್ವಜನಿಕರ ಸಲಾಂ..!

ಕರಡಿ ದಾಳಿಯಿಂದ ಸತ್ತ ರೈತನ ಕುಟುಂಬಕ್ಕೆ 15 ಲಕ್ಷ ಪರಿಹಾರದ ಚೆಕ್ ವಿತರಣೆ, ಅರಣ್ಯ ಅಧಿಕಾರಿಗಳ ಜವಾಬ್ದಾರಿಗೆ ಸಾರ್ವಜನಿಕರ ಸಲಾಂ..!

ಮುಂಡಗೋಡ: ಕರಡಿ ದಾಳಿಯಿಂದ ಸ್ಥಳದಲ್ಲೇ ಸಾವುಕಂಡಿದ್ದ ರೈತನ ಕುಟುಂಬಕ್ಕೆ ಸರ್ಕಾರ ನೆರವಿನ ಹಸ್ತ ನೀಡಿದೆ. ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಇಲ್ಲಿನ ಅರಣ್ಯ ಅಧಿಕಾರಿಗಳು ನೊಂದ ಕುಟುಂಬಕ್ಕೆ ಪರಿಹಾರದ ಆಸರೆ ಒದಗಿಸುವಲ್ಲಿ ಜವಾಬ್ದಾರಿ ಮೆರೆದಿದ್ದಾರೆ. ಹೀಗಾಗಿ, ಅರಣ್ಯ ಇಲಾಖೆ ಅಧಿಕಾರಿಗಳಿಗೆ ಒಂದು ಹ್ಯಾಟ್ಸ್ ಅಪ್.. ಅಂದಹಾಗೆ, ಕರಡಿ ದಾಳಿಯಿಂದ ಮುಂಡಗೋಡ ತಾಲೂಕಿನ ಮರಗಡಿ ಗೌಳಿದಡ್ಡಿಯ ಜಿಮ್ಮು ವಾಘು ತೋರವತ್ ಎಂಬುವ ರೈತ ಭೀಕರ ಸಾವು ಕಂಡಿದ್ದ‌. ಹೀಗಾಗಿ, ಅಕ್ಷರಶಃ ನಲುಗಿ ಹೋಗಿದ್ದ ಕುಟುಂಬಕ್ಕೆ ಅರಣ್ಯ ಇಲಾಖೆಯಿಂದ 15...

Post
ಬಾರದ ಮಳೆಗಾಗಿ ಕಲಕೇರಿ ಗ್ರಾಮದ ಮಹಿಳೆಯರ ವಿಶೇಷ ಆಚರಣೆ, ಹುಯ್ಯೋ ಹುಯ್ಯೋ ಮಳೆರಾಯ ಅಂದ್ರು ಮಹಿಳೆಯರು..!

ಬಾರದ ಮಳೆಗಾಗಿ ಕಲಕೇರಿ ಗ್ರಾಮದ ಮಹಿಳೆಯರ ವಿಶೇಷ ಆಚರಣೆ, ಹುಯ್ಯೋ ಹುಯ್ಯೋ ಮಳೆರಾಯ ಅಂದ್ರು ಮಹಿಳೆಯರು..!

 ಮುಂಡಗೋಡ: ಜೂನ್ ತಿಂಗಳು ಕಳೆಯುತ್ತ ಬಂದರೂ ಮಳೆರಾಯನ ಆಗಮನ ಇನ್ನೂ ಆಗಿಲ್ಲದಿರುವುದು ತಾಲೂಕಿನ ಅನ್ನದಾತರಿಗೆ ಭಾರೀ ಆತಂಕ ತಂದಿಟ್ಟಿದೆ. ಬಹುತೇಕ ಬಿತ್ತನೆ ಕಾರ್ಯಕ್ಕೆ ಮಳೆರಾಯನ ಮುನಿಸಿನಿಂದ ಭಾರೀ ಅಡಚಣೆಯಾಗಿದೆ. ಕೆಲವು ಕಡೆ ಬೀಜ ಬಿತ್ತನೆ ಕಾರ್ಯ ಮಾಡಿದ್ದರೂ ಬೀಜ ಮೊಳಕೆಯೊಡೆಯಲು ನೀರಿನ ಅಭಾವ ತಲೆದೋರಿದೆ. ಹೀಗಾಗಿ, ತಾಲೂಕಿನ ಕಲಕೇರಿಯ ಮಹಿಳೆಯರು ಮಳೆಗಾಗಿ ವಿಶೇಷ, ವಿಶಿಷ್ಟ ಕಾರ್ಯ ಮಾಡಿದ್ದಾರೆ. ಕಪ್ಪೆಯ ಮೆರವಣಿಗೆ..! ಯಸ್, ಕಲಕೆರಿಯ ಮಹಿಳೆಯರು ಇಂದು ಬೆಳಗಿನಿಂದ ಮಳೆಗಾಗಿ ಕಪ್ಪೆಯ ಪೂಜೆ ಮಾಡಿ ಪ್ರಾರ್ಥಿಸಿದ್ದಾರೆ‌. ಮಳೆರಾಯನಿಗೆ...

Post
ಶಿಗ್ಗಾವಿ: SCP, TSP ಯೋಜನೆ ಫಲಾನುಭವಿಗಳ ಆಯ್ಕೆಯಲ್ಲಿ ಅಧಿಕಾರಿಗಳ ಪಕ್ಷಪಾತ, ರೈತರ ಆಕ್ರೋಶ..!

ಶಿಗ್ಗಾವಿ: SCP, TSP ಯೋಜನೆ ಫಲಾನುಭವಿಗಳ ಆಯ್ಕೆಯಲ್ಲಿ ಅಧಿಕಾರಿಗಳ ಪಕ್ಷಪಾತ, ರೈತರ ಆಕ್ರೋಶ..!

ಶಿಗ್ಗಾವಿ ತಾಲೂಕಿನಲ್ಲಿ ಪಶು ಇಲಾಖೆ ಅಧಿಕಾರಿಗಳಿಂದ ತಾರತಮ್ಯವಾಯ್ತಾ..? SCP ಹಾಗೂ TSP ಯೋಜನೆಯಡಿ ಹಸುಗಳನ್ನು ನೀಡುವಾಗ ಫಲಾನುಭವಿಗಳ ಆಯ್ಕೆಯಲ್ಲಿ ಯಪರಾತಪರಾ ಮಾಡಿದ್ದಾರಾ..? ಹಾಗಂತ ಶಿಗ್ಗಾವಿಯ ಅನ್ನದಾತರು ಆರೋಪಿಸಿದ್ದಾರೆ. ಶಿಗ್ಗಾವಿ ತಾಲೂಕಿನಲ್ಲಿ 2022-23 ನೇ ಸಾಲಿನ SCP ಹಾಗೂ TSP ಯೋಜನೆ ಅಡಿಯಲ್ಲಿ ಫಲಾನುಭವಿಗಳ ಆಯ್ಕೆ ಸರಿಯಾಗಿಲ್ಲ. ಕೆಲ ಅಧಿಕಾರಿಗಳು ತಮಗೆ ಬೇಕಾದವರಿಗಷ್ಟೆ ಮಾನ್ಯತೆ ನೀಡಿ ಹಸುಗಳನ್ನ ಮಂಜೂರಿಸಲು ಆಯ್ಕೆ‌ಮಾಡಿದ್ದಾರೆ. ಹಸುಗಳನ್ನು ನಿಡುವಲ್ಲಿ ಪಕ್ಷಪಾತ ಮಾಡಿದ್ದಾರೆ ಎಂದು ರೈತರು ತಾಲೂಕಾ ಪಶು ಆಸ್ಪತ್ರೆಯ ಅಧಿಕಾರಿಗಳಿಗೆ ಮನವಿ ಅರ್ಪಿಸಿದ್ರು. ಅರ್ಹರಿಗೆ...

Post
ಕೊಪ್ಪದಲ್ಲಿ ಆಕಸ್ಮಿಕ ಬೆಂಕಿ ಅನಾಹುತ, ಕಬ್ಬು ಬೆಂಕಿಗಾಹುತಿ..!

ಕೊಪ್ಪದಲ್ಲಿ ಆಕಸ್ಮಿಕ ಬೆಂಕಿ ಅನಾಹುತ, ಕಬ್ಬು ಬೆಂಕಿಗಾಹುತಿ..!

ಮುಂಡಗೋಡ ತಾಲೂಕಿನ ಕೊಪ್ಪ ಗ್ರಾಮದಲ್ಲಿ ಬೆಂಕಿ ಅವಘಡವಾಗಿದೆ. ಕಬ್ಬಿನ ಗದ್ದೆಗೆ ಆಕಸ್ಮಿಕ ಬೆಂಕಿ ತಗುಲಿ ಲಕ್ಷಾಂತರ ಮೌಲ್ಯದ ಕಬ್ಬು ಸುಟ್ಟು ಕರಕಲಾಗಿದೆ. ಕೊಪ್ಪ ಗ್ರಾಮದ ರೈತ ಶಿವಾಜಿ ತುಳಜಾನವರ ಹಾಗೂ ಪಕ್ಕೀರಪ್ಪಾ ತುಳಜಾನವರ ಎಂಬುವವರ ಸುಮಾರು 2-3 ಎಕರೆ ಕಬ್ಬು ಬೆಳೆ ಬೆಂಕಿಗೆ ಅಹುತಿ ಆಗಿದೆ. ಅಂದಹಾಗೆ ಇಂದು ಕಬ್ಬು ಕಟಾವು ಮಾಡುವ ಸಂದರ್ಭದಲ್ಲಿ ಆಕಸ್ಮಿಕವಾಗಿ ಬೆಂಕಿ ತಗುಲಿದೆ. ಹೀಗಾಗಿ, ಕಟಾವು ಮಾಡಿ ಇಟ್ಟಿದ್ದ ಕಬ್ಬೂ ಸೇರಿದಂತೆ ಅಪಾರ ಪ್ರಮಾಣದ ಕಬ್ಬು ಬೆಂಕಿಗಾಹುತಿಯಾಗಿದೆ. ಬೆಂಕಿ ತಗುಲಿದ ತಕ್ಷಣವೇ...

Post
ಕಬ್ಬಿಗೆ 5,500 ರೂ. ಬೆಲೆ ನಿಗದಿಗೆ ಆಗ್ರಹಿಸಿ ಬೆಳಗಾವಿಯಲ್ಲಿ ನಡೆದಿದ್ದ ಅಹೋರಾತ್ರಿ ಧರಣಿ ವಾಪಸ್..!

ಕಬ್ಬಿಗೆ 5,500 ರೂ. ಬೆಲೆ ನಿಗದಿಗೆ ಆಗ್ರಹಿಸಿ ಬೆಳಗಾವಿಯಲ್ಲಿ ನಡೆದಿದ್ದ ಅಹೋರಾತ್ರಿ ಧರಣಿ ವಾಪಸ್..!

ಬೆಳಗಾವಿ: ಕಬ್ಬಿಗೆ ಸಮರ್ಪಕ ಬೆಲೆ ನಿಗದಿ ಪಡಿಸುವಂತೆ ಆಗ್ರಹಿಸಿ ಬೆಳಗಾವಿ ಡಿಸಿ ಕಚೇರಿ ಎದುರು ನಡೆಯುತ್ತಿದ್ದ ಧರಣಿ ವಾಪಸ್ ಪಡೆದಿದ್ದಾರೆ ರೈತರು. ಕಳೆದ ಎರಡು ದಿನಗಳಿಂದ ನಡೆಯುತ್ತಿದ್ದ ಅಹೋರಾತ್ರಿ ಧರಣಿಯನ್ನು ನಿನ್ನೆ ತಡರಾತ್ರಿ ವಾಪಸ್ ಪಡೆದಿದ್ದಾರೆ. ಬೆಳಗಾವಿ ಡಿಸಿ ಕಚೇರಿ ಮುಂದೆ ಪ್ರತಿಭಟನೆ ಮಾಡುತ್ತಿದ್ದ ರೈತರು, ಬೆಳಗಾವಿ ಡಿಸಿ ನಿತೇಶ್ ಪಾಟೀಲ್ ಮನವೊಲಿಸಿದ ಬಳಿಕ ವಾಪಸ್ಬ ಪಡೆದಿದ್ದಾರೆ. ಮುಖ್ಯಮಂತ್ರಿ ಮತ್ತು ಸಕ್ಕರೆ ಸಚಿವರ ನೇತೃತ್ವದಲ್ಲಿ, ಬೆಂಗಳೂರಿನಲ್ಲಿ ಇದೇ ತಿಂಗಳು 15 ರಂದು ಕಬ್ಬಿನ ದರ ನಿಗದಿಗಾಗಿ ಸಭೆ...

Post
ಮರಗಡಿಯಲ್ಲಿ ರೈತನ ಮೇಲೆ ಕರಡಿಯಿಂದ ಮಾರಣಾಂತಿಕ ದಾಳಿ, ರೈತ ಗಂಭೀರ..!

ಮರಗಡಿಯಲ್ಲಿ ರೈತನ ಮೇಲೆ ಕರಡಿಯಿಂದ ಮಾರಣಾಂತಿಕ ದಾಳಿ, ರೈತ ಗಂಭೀರ..!

 ಮುಂಡಗೋಡ: ತಾಲೂಕಿನ ಕಾತೂರು ಅರಣ್ಯ ವ್ಯಾಪ್ತಿಯಲ್ಲಿ ಅನ್ನದಾತನ ಮೇಲೆ ಕರಡಿ ದಾಳಿ ಮಾಡಿದೆ. ಮರಗಡಿ ಗ್ರಾಮದಲ್ಲಿ ಘಟನೆ ನಡೆದಿದೆ. ಫಕ್ಕಿರೇಶ ರಾಮಣ್ಣ ಗೊಲ್ಲರ್ ಎಂಬುವನ ಮೇಲೆ ಮಾರಣಾಂತಿಕ ದಾಳಿ ಮಾಡಿದೆ. ಮರಿಗಳೊಂದಿಗೆ ಆಹಾರ ಅರಸಿ ಬಂದಿದ್ದ ಕರಡಿ ರೈತನನ್ನು ನೋಡಿ ಪ್ರಾಣಭಯದಿಂದ ದಾಳಿ ಮಾಡಿದೆ ಎನ್ನಲಾಗಿದೆ. ಅಂದಹಾಗೆ, ಗದ್ದೆಯಲ್ಲಿ ಮಂಗಗಳ ಹಾವಳಿ ಕಾರಣಕ್ಕೆ ಗೋವಿನಜೋಳ ರಕ್ಷಣೆಗಾಗಿ ಕಟ್ಟಿದ್ದ ಶ್ವಾನಗಳಿಗೆ ಆಹಾರ ಕೊಡಲು ಹೋದಾಗ ಘಟನೆ ನಡೆದಿದೆ ಎನ್ನಲಾಗಿದೆ. ಹೀಗಾಗಿ ತಕ್ಷಣವೇ ಸ್ಥಳೀಯರು ರೈತನ‌ ನೆರವಿಗೆ ಬಂದಿದ್ದಾರೆ....

Post
ಸನವಳ್ಳಿ ಭಾಗದಲ್ಲಿ ಕಾಡಾನೆಗಳ ಹಿಂಡು, ಗದ್ದೆಗಳಲ್ಲಿ ಗಜರಾಜನ ಹೆಜ್ಜೆ ಗುರುತು ಪತ್ತೆ..! ಆತಂಕದಲ್ಲಿ ರೈತರು..!!

ಸನವಳ್ಳಿ ಭಾಗದಲ್ಲಿ ಕಾಡಾನೆಗಳ ಹಿಂಡು, ಗದ್ದೆಗಳಲ್ಲಿ ಗಜರಾಜನ ಹೆಜ್ಜೆ ಗುರುತು ಪತ್ತೆ..! ಆತಂಕದಲ್ಲಿ ರೈತರು..!!

 ಮುಂಡಗೋಡ: ತಾಲೂಕಿನ ಸನವಳ್ಳಿ ಭಾಗದಲ್ಲಿ ಕಾಡಾನೆಗಳ ಹಿಂಡು ಠಿಕಾಣಿ ಹೂಡಿದೆಯಾ..? ಇಂತಹದ್ದೊಂದು ಅನುಮಾನ ಈ ಭಾಗದ ರೈತರಿಗೆ ನಿದ್ದೆಗೆಡಿಸಿದೆ. ನಿನ್ನೆ ರಾತ್ರಿ ಸನವಳ್ಳಿ ಭಾಗದ ಕಾಡಂಚಿನ ಗದ್ದೆಗಳಲ್ಲಿ ಕಾಡಾನೆಗಳು ಓಡಾಡಿ ಹೋಗಿರೋ ಕುರುಹುಗಳು ಸಿಕ್ಕಿವೆ. ಸನವಳ್ಳಿಯ ಫಕ್ಕೀರಪ್ಪ ಬೋಕಿಯವರ್, ಪಕ್ಕಿರೇಶ್ ಕೆರಿಹೊಲದವರ, ರಮೇಶ್ ಅರಶೀಣಗೇರಿಯವರ ನಾಟಿ‌ ಮಾಡಿರೋ ಬತ್ತದ ಗದ್ದೆಗಳಲ್ಲಿ, ಗೋವಿನಜೋಳದ ಗದ್ದೆಗಳಲ್ಲಿ ಆನೆಗಳು ನಡೆದಾಡಿರೋ ಹೆಜ್ಜೆ ಗುರುತುಗಳು ಪತ್ತೆಯಾಗಿವೆ. ಇನ್ನು ಅಡಿಕೆ ತೋಟದಲ್ಲಿ ನುಗ್ಗಿರೋ ಆನೆಗಳು ಕೆಲವು ಅಡಿಕೆ ಗಿಡಗಳಿಗೆ ಹಾನಿ ಮಾಡಿವೆ. ಹೀಗಾಗಿ...

  • 1
  • 2
error: Content is protected !!