ಶಿಗ್ಗಾವಿ: SCP, TSP ಯೋಜನೆ ಫಲಾನುಭವಿಗಳ ಆಯ್ಕೆಯಲ್ಲಿ ಅಧಿಕಾರಿಗಳ ಪಕ್ಷಪಾತ, ರೈತರ ಆಕ್ರೋಶ..!

ಶಿಗ್ಗಾವಿ ತಾಲೂಕಿನಲ್ಲಿ ಪಶು ಇಲಾಖೆ ಅಧಿಕಾರಿಗಳಿಂದ ತಾರತಮ್ಯವಾಯ್ತಾ..? SCP ಹಾಗೂ TSP ಯೋಜನೆಯಡಿ ಹಸುಗಳನ್ನು ನೀಡುವಾಗ ಫಲಾನುಭವಿಗಳ ಆಯ್ಕೆಯಲ್ಲಿ ಯಪರಾತಪರಾ ಮಾಡಿದ್ದಾರಾ..? ಹಾಗಂತ ಶಿಗ್ಗಾವಿಯ ಅನ್ನದಾತರು ಆರೋಪಿಸಿದ್ದಾರೆ.

ಶಿಗ್ಗಾವಿ ತಾಲೂಕಿನಲ್ಲಿ 2022-23 ನೇ ಸಾಲಿನ SCP ಹಾಗೂ TSP ಯೋಜನೆ ಅಡಿಯಲ್ಲಿ ಫಲಾನುಭವಿಗಳ ಆಯ್ಕೆ ಸರಿಯಾಗಿಲ್ಲ. ಕೆಲ ಅಧಿಕಾರಿಗಳು ತಮಗೆ ಬೇಕಾದವರಿಗಷ್ಟೆ ಮಾನ್ಯತೆ ನೀಡಿ ಹಸುಗಳನ್ನ ಮಂಜೂರಿಸಲು ಆಯ್ಕೆ‌ಮಾಡಿದ್ದಾರೆ. ಹಸುಗಳನ್ನು ನಿಡುವಲ್ಲಿ ಪಕ್ಷಪಾತ ಮಾಡಿದ್ದಾರೆ ಎಂದು ರೈತರು ತಾಲೂಕಾ ಪಶು ಆಸ್ಪತ್ರೆಯ ಅಧಿಕಾರಿಗಳಿಗೆ ಮನವಿ ಅರ್ಪಿಸಿದ್ರು.

ಅರ್ಹರಿಗೆ ಸಿಗಲಿ..!
ಇನ್ನು ತಾಲೂಕಿನಲ್ಲಿ ಸಾಕಷ್ಟು ಜನ ಅರ್ಹರು ಇದ್ದಾರೆ. ಹೈನುಗಾರಿಕೆಯನ್ನು ನಂಬಿ ಬದುಕುತ್ತಿದ್ದಾರೆ. ಹೀಗಾಗಿ, ಅರ್ಹರಿಗೆ ಹಸುಗಳನ್ನು ನೀಡಬೇಕು ಅಂದಾಗ ಮಾತ್ರ ಯೋಜನೆ ಸದುಪಯೋಗ ಆಗತ್ತೆ. ಹೀಗಾಗಿ, ಅಧಿಕಾರಿಗಳು ಮತ್ತೊಮ್ಮೆ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆಯನ್ನು ಮಾಡಲಿ ಅಂತಾ ರೈತರು ಮನವಿಯಲ್ಲಿ ಆಗ್ರಹಿಸಿದ್ದಾರೆ.

ಈ ಸಂದರ್ಭದಲ್ಲಿ ಕಬನೂರು ಬೆಳಗಳಿ, ಹಿರೇಮಣಕಟ್ಟಿ, ಮುಗಳಿ ಹಾಗೂ ಹಲವು ಗ್ರಾಮಗಳ ರೈತರು ಭಾಗಿಯಾಗಿದ್ರು.

ವರದಿ:ಮಂಜು ಪಾಟೀಲ್, ಶಿಗ್ಗಾವಿ

error: Content is protected !!