ಹುಬ್ಬಳ್ಳಿ: ಪಾಪಿ ಪಾಕಿಸ್ತಾನದ ರಕ್ತ ಹರಿಸದೇ ಕದನ ವಿರಾಮ ಆಗಿರುವ ನಿರ್ಧಾರವನ್ನು ನಾವು ಒಪ್ಪುವುದಿಲ್ಲ. ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಬಗ್ಗೆ ಸಾಕಷ್ಟು ವಿಶ್ವಾಸ ಇಟ್ಟಿದ್ದೇವು. ಆದರೆ ಈಗ ನಮ್ಮ ಭರವಸೆ ಹುಸಿಯಾಗಿದೆ. ಯಾವುದೇ ಕಾರಣಕ್ಕೂ ಕದನವಿರಾಮ ನಿರ್ಧಾರವನ್ನು ಒಪ್ಪುವುದಿಲ್ಲ ಎಂದು ಶ್ರೀರಾಮಸೇನಾ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದರು.
ಯುದ್ಧ ವಿರಾಮದ ಬಗ್ಗೆ ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಅಮಾಯಕರ ಜೀವ ತೆಗೆದು ರಕ್ತ ಹರಿಸಿದ ಪಾಪಿ ಪಾಕಿಸ್ತಾನಕ್ಕೆ ತಕ್ಕ ಉತ್ತರ ಭಾರತ ಕೊಡುತ್ತದೆ ಎಂದು ನಂಬಿದ್ದೇವು. ಆದರೆ ಈಗ ಏಕಾಏಕಿ ಕದನ ವಿರಾಮ ಆಗಿರುವುದು ನಿಜಕ್ಕೂ ನಮಗೆ ನೋವನ್ನು ತಂದಿದೆ. ಈ ನಿರ್ಧಾರ ಕೈ ಬಿಟ್ಟು ಪಾಪಿ ಪಾಕಿಸ್ತಾನ ನಿರ್ನಾಮ ಮಾಡಬೇಕು ಎಂದು ಆಗ್ರಹಿಸಿದರು.
ಡೋನಾಲ್ಡ್ ಟ್ರಂಪ್ ಯಾರ ರೀ ಅವರು..? ನಮ್ಮ ನೋವು ಅವರಿಗೆ ಏನು ಗೊತ್ತು. ನಮ್ಮ ಭಾರತದ ಪ್ರತಿಕಾರದ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ, ಮಧ್ಯಸ್ಥಿಕೆ ವಹಿಸುವ ದೊಡ್ಡಸ್ಥಿಕೆ ಮಾಡುವ ಅವಶ್ಯಕತೆ ಏನಿತ್ತು..? ಎಂದು ನಿರ್ಧಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.