ಮುಂಡಗೋಡ ತಾಲೂಕಿನ ಹುಲಿಹೊಂಡ, ಬಸಾಪುರ, ನಂದಿಕಟ್ಟಾ ಭಾಗದಲ್ಲಿ ಕಾಡಾನೆಗಳು ಹಿಂಡು ದಾಂಗುಡಿ ಇಟ್ಟಿದೆ. ಕಾಡಂಚಿನ ಗ್ರಾಮಗಳ ರೈತರ ಗದ್ದೆಗಳು, ತೋಟಗಳಿಗೆ ದಾಳಿ ಮಾಡಿ ಬೆಳೆ ನಾಶ ಮಾಡಿವೆ.

ಶನಿವಾರ ರಾತ್ರಿ ಹುಲಿಹೊಂಡ ಗ್ರಾಮದ ಕಾಡಂಚಿನ ಗದ್ದೆ ತೋಟಗಳಿಗೆ ದಾಳಿ ಮಾಡಿರೋ ಗಜರಾಜನ ಹಿಂಡು, ರೈತರ ಅಡಿಕೆ ಗಿಡ, ಕಬ್ಬು, ಬಾಳೆ ಫಸಲನ್ನು ತಿಂದು, ತುಳಿದು ಹಾನಿಮಾಡಿವೆ.

ಹುಲಿಹೊಂಡ ಗ್ರಾಮದ ನಾಗಪ್ಪ ಅಲ್ಲಾಪುರ, ರಾಜು ಕಂಬಾರ, ಮಂಜುನಾಥ್ ರಾಯ್ಕರ್, ಈಶ್ವರ ಅಲ್ಲಾಪುರ ಎಂಬುವ ರೈತರ ಕಬ್ಬಿನ ಬೆಳೆ ಹಾಳು ಮಾಡಿವೆ.

ಅದ್ರಂತೆ, ರಾಜು ವೆಂಕಪ್ಪ ಹರಿಕೇರಿ ಎಂಬುವವರ ಅಡಿಕೆ ತೋಟದಲ್ಲಿ 10 ಸಸಿಗಳನ್ನು ನೆಲಸಮ ಮಾಡಿವೆ. ಹಾಗೇ ಉಳುವಪ್ಪ ಯಲ್ಲಪ್ಪ ಅಲ್ಲಾಪುರ ಎಂಬುವವರ ಅಡಿಕೆ ತೋಟಕ್ಕೆ ನುಗ್ಗಿ 40 ರಿಂದ 50 ಅಡಿಕೆ ಸಸಿಗಳನ್ನು ನೆಲಸಮ ಮಾಡಿವೆ. ಆದ್ರೆ ಇಷ್ಟೇಲ್ಲ ಆದ್ರೂ ಅರಣ್ಯ ಅಧಿಕಾರಿಗಳು ಮಾತ್ರ ಯಾರೂ ಇತ್ತ ಸುಳಿದೇ ಇಲ್ಲ ಅಂತಿದಾರೆ ಅನ್ನದಾತರು.

error: Content is protected !!