Home ಉತ್ತರ ಕನ್ನಡ ಕೋವಿಡ್ ಅಪಡೇಟ್ಸ್

Category: ಕೋವಿಡ್ ಅಪಡೇಟ್ಸ್

Post
ಮತ್ತೆ ಕೊರೋನಾ ಅಟ್ಟಹಾಸ, ತಾಲೂಕಿನಲ್ಲಿ ಇಂದಿನ ಪಾಸಿಟಿವ್ ಕೇಸ್ ಎಷ್ಟು..? ವಿದ್ಯಾರ್ಥಿಗಳ ಪಾಲು ಎಷ್ಟು..!

ಮತ್ತೆ ಕೊರೋನಾ ಅಟ್ಟಹಾಸ, ತಾಲೂಕಿನಲ್ಲಿ ಇಂದಿನ ಪಾಸಿಟಿವ್ ಕೇಸ್ ಎಷ್ಟು..? ವಿದ್ಯಾರ್ಥಿಗಳ ಪಾಲು ಎಷ್ಟು..!

ಮುಂಡಗೋಡ: ತಾಲೂಕಿನಲ್ಲಿ ಶುಕ್ರವಾರ ಕೊರೋನಾ ಮತ್ತೆ ಅಟ್ಟಹಾಸ ಮೆರೆದಿದೆ. ಇಂದು ಬರೋಬ್ಬರಿ 138 ಪಾಸಿಟಿವ್ ದೃಢ ಪಟ್ಟಿದೆ. ಅಚ್ಚರಿಯ ಸಂಗತಿಯೆಂದ್ರೆ, ಇಂದಿನ ಪ್ರಕರಣಗಳ ಸಂಖ್ಯೆಯಲ್ಲಿ ಬಹುಪಾಲು ವಿದ್ಯಾರ್ಥಿಗಳದ್ದೇ ಆಗಿದೆ. ಇಂದು ಪಟ್ಟಣದ ಜೂನಿಯರ್ ಕಾಲೇಜಿನಲ್ಲಿ ಅತಿಹೆಚ್ಚು ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಇದೊಂದೇ ಕಾಲೇಜಿನಲ್ಲಿ ಬರೋಬ್ಬರಿ 27 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು ಆತಂಕಕ್ಕೆ ಕಾರಣವಾಗಿದೆ. ಅದ್ರಂತೆ ಇನ್ನು ಹಲವು ಶಾಲೆಗಳು, ಕಾಲೇಜುಗಳಲ್ಲಿ ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು ಪಾಲಕರಿಗೆ ಆತಂಕ ತಂದಿಟ್ಟಿದೆ‌. ಇನ್ನು, ತಾಲೂಕಿನ ಬಹುತೇಕ ಶಾಲೆಗಳಲ್ಲಿ ಕೋವಿಡ್ ಪರೀಕ್ಷೆ...

Post
ತಾಲೂಕಿನಲ್ಲಿ ಗುರುವಾರ 64 ಜನರಿಗೆ ಕೋವಿಡ್ ಸೋಂಕು..!

ತಾಲೂಕಿನಲ್ಲಿ ಗುರುವಾರ 64 ಜನರಿಗೆ ಕೋವಿಡ್ ಸೋಂಕು..!

ಮುಂಡಗೋಡ : ತಾಲೂಕಿನಲ್ಲಿ ಗುರುವಾರ 64 ಜನರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ತಾಲೂಕಿನ ಶಾಲಾ ವಿದ್ಯಾರ್ಥಿಗಳಿಗೆ ಅತೀ ಹೆಚ್ಚು ಕೋವಿಡ್ ಸೋಂಕು ಕಾಣಿಸಿಕೊಂಡಿದೆ. ಮಳಗಿ ಪಂಚವಟಿಯ ಜವಾಹರ ನವೋದಯ ಶಾಲೆಯ 18 ವಿದ್ಯಾರ್ಥಿಗಳಿಗೆ ಮತ್ತೆ ಸೋಂಕು ದೃಢ ಪಟ್ಟಿದೆ‌. ಹೀಗಾಗಿ ಮತ್ತೆ ವಿದ್ಯಾರ್ಥಿಗಳಿಗೆ ಆತಂಕ ಶುರುವಾಗಿದೆ. ಅದ್ರಂತೆ, ತಾಲೂಕಿನ ಬಹುತೇಕ ಶಾಲಾ ಕಾಲೇಜುಗಳಲ್ಲೂ ಕೊರೊನಾ ಆತಂಕ ಶುರುವಾಗಿದೆ. ಬಡ್ಡಿಗೇರಿ ಸರಕಾರಿ ಶಾಲೆ, ಲೊಯೋಲಾ ಪಿ.ಯು. ಕಾಲೇಜು, ಕಾತೂರ ಸರಕಾರಿ ಶಾಲೆ, ಲೊಯೋಲಾ ಕೇಂದ್ರೀಯ ವಿದ್ಯಾಲಯ, ಮುರಾರ್ಜಿ ವಸತಿ...

Post
ತಾಲೂಕಿನಲ್ಲಿ ಇಂದು 45 ಪಾಸಿಟಿವ್ ಕೇಸ್..! ಮೊರಾರ್ಜಿ ಶಾಲೆಯಲ್ಲಿ 11 ವಿದ್ಯಾರ್ಥಿಗಳಿಗೆ ಸೋಂಕು..!

ತಾಲೂಕಿನಲ್ಲಿ ಇಂದು 45 ಪಾಸಿಟಿವ್ ಕೇಸ್..! ಮೊರಾರ್ಜಿ ಶಾಲೆಯಲ್ಲಿ 11 ವಿದ್ಯಾರ್ಥಿಗಳಿಗೆ ಸೋಂಕು..!

ಮುಂಡಗೋಡ: ತಾಲೂಕಿನಲ್ಲಿ ಇಂದು ಸೋಮವಾರ ಮತ್ತೆ ಕೊರೋನಾ ಅಟ್ಟಹಾಸ ಮೆರೆದಿದೆ. ತಾಲೂಕಿನಲ್ಲಿ ಇಂದು ಒಟ್ಟೂ 45 ಹೊಸ ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು, ಕರಗಿನಕೊಪ್ಪದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ 11 ವಿದ್ಯಾರ್ಥಿಗಳಲ್ಲಿ ಕೋವಿಡ್ ಹೆಮ್ಮಾರಿ ವಕ್ಕರಿಸಿದೆ. ಹೀಗಾಗಿ, ಮತ್ತೆ ತಾಲೂಕಿನಲ್ಲಿ ಪಾಲಕರಿಗೆ ಆತಂಕ ಶುರುವಾಗಿದೆ. ಅದ್ರಂತೆ ತಾಲೂಕಿನ ಟಿಬೇಟಿಯನ್ ಕಾಲೋನಿಯಲ್ಲಿ, ಕೋಡಂಬಿ, ಪಾಳಾ, ಇಂದೂರು, ನಂದಿಕಟ್ಟಾ, ಅಟ್ಟಣಗಿ, ಸೇರಿದಂತೆ ಮುಂಡಗೋಡ ಪಟ್ಟಣದಲ್ಲಿಯೂ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಇನ್ನು ಲೊಯೊಲಾ ಶಿಕ್ಷಣ ಕೇಂದ್ರದ ಇಬ್ಬರು ವಿದ್ಯಾರ್ಥಿಗಳಿಗೆ ಇಂದು ಮತ್ತೆ...

Post
ವಿದ್ಯಾರ್ಥಿಗಳಿಗೂ ಕಾಡ್ತಿದೆ ಕೊರೋನಾ..!! ಮುಂಡಗೋಡ ತಾಲೂಕಿನಲ್ಲಿ ಇಂದು 53 ಪಾಸಿಟಿವ್, ವಿದ್ಯಾರ್ಥಿಗಳಲ್ಲೇ ಹೆಚ್ಚು ಸೋಂಕು..!

ವಿದ್ಯಾರ್ಥಿಗಳಿಗೂ ಕಾಡ್ತಿದೆ ಕೊರೋನಾ..!! ಮುಂಡಗೋಡ ತಾಲೂಕಿನಲ್ಲಿ ಇಂದು 53 ಪಾಸಿಟಿವ್, ವಿದ್ಯಾರ್ಥಿಗಳಲ್ಲೇ ಹೆಚ್ಚು ಸೋಂಕು..!

ಮುಂಡಗೋಡ: ತಾಲೂಕಿನಲ್ಲಿ ಮತ್ತೆ ಇಂದು ಕೊರೋನಾ ಮಹಾ ಸ್ಪೋಟಗೊಂಡಿದೆ. ತಾಲೂಕಿನಲ್ಲಿ ಇಂದು 53 ಜನರಿಗೆ ಸೋಂಕು ದೃಢಪಟ್ಟಿದೆ. ಈ ಬಾರಿ ಬಹುತೇಕ ಶಾಲಾ ಕಾಲೇಜು ವಿದ್ಯಾರ್ಥಿಗಳಲ್ಲಿ ಪಾಸಿಟಿವ್ ಪ್ರಮಾಣ ಗಣನೀಯವಾಗಿ ಏರಿದೆ. ಅದ್ರಲ್ಲೂ ಲೊಯೊಲಾ ಶಿಕ್ಷಣ ಕೇಂದ್ರದ ಪ್ರೌಢಶಾಲೆ, ಕಾಲೇಜು ವಿಭಾಗದ ಬರೋಬ್ಬರಿ 16 ವಿದ್ಯಾರ್ಥಿಗಳಲ್ಲಿ ಸೋಂಕು ದೃಢ ಪಟ್ಟಿದೆ. ಯಾವ್ಯಾವ ಶಾಲೆ, ಎಷ್ಟು ವಿದ್ಯಾರ್ಥಿಗಳು? ತಾಲೂಕಿನ ಬಡ್ಡಿಗೇರಿ ಪ್ರಾಥಮಿಕ ಶಾಲೆಯ ಮೂವರು ವಿದ್ಯಾರ್ಥಿಗಳಿಗೆ, ಮಳಗಿ ಕರ್ನಾಟಕ ಪಬ್ಲಿಕ್ ಸ್ಕೂಲ್ ನ ಐವರು, ಪಾಳಾ ಉರ್ದು ಶಾಲೆಯ...

Post
ಸಾಲಗಾಂವ್ ನಲ್ಲಿ ಕೋವಿಡ್ ಸ್ಫೋಟ, ತಾಲೂಕಿನಲ್ಲಿ ಇಂದು 24 ಪಾಸಿಟಿವ್..!

ಸಾಲಗಾಂವ್ ನಲ್ಲಿ ಕೋವಿಡ್ ಸ್ಫೋಟ, ತಾಲೂಕಿನಲ್ಲಿ ಇಂದು 24 ಪಾಸಿಟಿವ್..!

ಮುಂಡಗೋಡ: ತಾಲೂಕಿನಲ್ಲಿ ಇಂದು 24 ಜನರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ‌ ಅಂತಾ ಅರೋಗ್ಯ ಇಲಾಖೆಯ ಮೂಲಗಳು ಮಾಹಿತಿ ನೀಡಿವೆ. ಸಾಲಗಾಂವ ಗ್ರಾಮ ಒಂಚಾಯತಿ ವ್ಯಾಪ್ತಿ ಒಂದರಲ್ಲೇ ಬರೋಬ್ಬರಿ 10 ಜನರಿಗೆ ಕೋವಿಡ್ ಸೋಂಕು ದೃಢ ಪಟ್ಟಿದೆ. ಇನ್ನುಳಿದಂತೆ, ಮುಂಡಗೋಡ ಪಟ್ಟಣದಲ್ಲಿ-2, ಟಿಬೇಟಿಯನ್ ಕ್ಯಾಂಪ್ STS ಶಾಲೆಯ 5 ವಿದ್ಯಾರ್ಥಿಗಳು ಸೇರಿದಂತೆ- 6, ಕಾತೂರ- 1, ಇಂದೂರ- 2, ಪಾಳಾ- 1, ಕಲಕೇರಿ – 1, ಸಾಲಗಾಂವ್- 10 ರಾಮಾಪುರ 1 ಪ್ರಕರಣ ದೃಢಪಟ್ಟಿದೆ.

Post
ಹುನಗುಂದಕ್ಕೆ ಮತ್ತೆ ವಕ್ಕರಿಸಿದ ಕೊರೋನಾ, ಓರ್ವ ಮಹಿಳೆಗೆ ಸೋಂಕು ದೃಢ..!

ಹುನಗುಂದಕ್ಕೆ ಮತ್ತೆ ವಕ್ಕರಿಸಿದ ಕೊರೋನಾ, ಓರ್ವ ಮಹಿಳೆಗೆ ಸೋಂಕು ದೃಢ..!

ಮುಂಡಗೋಡ: ತಾಲೂಕಿನ ಹುನಗುಂದದಲ್ಲಿ ಮತ್ತೆ ಕೊರೊನಾ ಎಂಟ್ರಿ ಕೊಟ್ಟಿದೆ. ಟಿಬೇಟಿಯನ್ ಕಾಲೋನಿಗೆ ಮನೆಕೆಲಸಕ್ಕೆ ಹೋಗುತ್ತಿದ್ದ ಹುನಗುಂದದ ಮಹಿಳೆಯೊಬ್ಬಳಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ ಅಂತಾ ಗ್ರಾಮ ಪಂಚಾಯತಿ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. ಇಲ್ಲಿನ ಮಹಿಳೆ ಪ್ರತಿನಿತ್ಯ ಟಿಬೇಟಿಯನ್ ಕಾಲೋನಿಗೆ ಮನೆಕೆಲಸಕ್ಕೆ ಅಂತಾ ಅಡುಗೆ ಮಾಡಲು ಹೋಗುತ್ತಿದ್ದಳು ಎನ್ನಲಾಗಿದೆ. ಹೀಗಾಗಿ, ಟಿಬೇಟಿಯನ್ ಕಾಲೋನಿಯಲ್ಲಿ ಕೋವಿಡ್ ಟೆಸ್ಟ್ ಮಾಡಿದ್ದರು. ನಂತರ ಆ ವರದಿಯಲ್ಲಿ ಮಹಿಳೆಗೆ ಕೊರೋನಾ ದೃಢ ಪಟ್ಟಿದೆ. ಹೀಗಾಗಿ, ಗ್ರಾಮ ಪಂಚಾಯತಿ ಸದಸ್ಯರುಗಳು, ಸಿಬ್ಬಂದಿಗಳು ಸೋಂಕಿತೆಯ ಮನೆಗೆ ಭೇಟಿ ನೀಡಿ...

Post
ಉತ್ತರ ಕನ್ನಡ ಜಿಲ್ಲೆಗೆ ಮತ್ತೆ ಕೊರೋನಾ ಕಂಟಕ; ಹೊಸ ಮಾರ್ಗಸೂಚಿ ಹೊರಡಿಸಿದ ಡಿಸಿ..!

ಉತ್ತರ ಕನ್ನಡ ಜಿಲ್ಲೆಗೆ ಮತ್ತೆ ಕೊರೋನಾ ಕಂಟಕ; ಹೊಸ ಮಾರ್ಗಸೂಚಿ ಹೊರಡಿಸಿದ ಡಿಸಿ..!

ಕಾರವಾರ; ಉತ್ತರ ಕನ್ನಡ ಜಿಲ್ಲೆಯಲ್ಲಿ ಮತ್ತೆ ಕೋವಿಡ್ ಪ್ರಕರಣಗಳು ಹೆಚ್ಚಳವಾಗುತ್ತಿವೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಆತಂಕ ಶುರುವಾಗಿದೆ. ಹೀಗಾಗಿ, ಜಿಲ್ಲಾಡಳಿತದಿಂದ ನೂತನ ಮಾರ್ಗಸೂಚಿ ಬಿಡುಗಡೆಯಾಗಿದ್ದು, ಜಿಲ್ಲಾಧ್ಯಂತ ಕಟ್ಟು ನಿಟ್ಟಿನ ಕ್ರಮ ವಹಿಸುವಂತೆ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಏನದು ಮಾರ್ಗಸೂಚಿ..? ಕೊರೋನಾ ಪಾಸಿಟಿವ್ ಸಂಖ್ಯೆ ಹೆಚ್ಚಳವಾಗುತ್ತಿರೋ ಹಿನ್ನೆಲೆಯಲ್ಲಿ ಜಿಲ್ಲಾಧ್ಯಂತ ಇನ್ನು ಮುಂದೆ ದೇವಾಲಯಗಳಲ್ಲಿ ಸೇವೆಗೆ ಅವಕಾಶವಿಲ್ಲ. ಕೇವಲ ದರ್ಶನಕ್ಕೆ ಮಾತ್ರ ಅವಕಾಶ ನೀಡಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಮದುವೆಗೆ 50 ಜನರಷ್ಟೇ..! ಇನ್ನು, ಮದುವೆಗಳಿಗೆ ಕೇವಲ 50 ಜನರಿಗೆ...

Post
ಇದು ಮುಂಡಗೋಡ ತಾಲೂಕಿನ ಇಂದಿನ ಕೊರೋನಾ ರಿಪೋರ್ಟ್..!

ಇದು ಮುಂಡಗೋಡ ತಾಲೂಕಿನ ಇಂದಿನ ಕೊರೋನಾ ರಿಪೋರ್ಟ್..!

ಮುಂಡಗೋಡ: ತಾಲೂಕಿನಲ್ಲಿ ಇಂದು 1 ಹೊಸ ಕೊರೋನಾ ಪಾಸಿಟಿವ್ ದೃಢಪಟ್ಟಿದೆ. ಸದ್ಯ ತಾಲೂಕಿನಲ್ಲಿ ಒಟ್ಟೂ 23 ಸಕ್ರೀಯ ಪ್ರಕರಣಗಳಿದ್ದು, ಆಸ್ಪತ್ರೆಯಲ್ಲಿ 14 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. 9 ಜನ ಸೋಂಕಿತರು ಹೋಂ ಐಸೋಲೇಶನ್ ನಲ್ಲಿದ್ದಾರೆ. ಇಂದು ಯಾವುದೇ ಸೋಂಕಿತರು ಗುಣಮುಖರಾಗಿಲ್ಲ . ಇನ್ನು, ಮುಂಡಗೋಡಿನ ಕೋವಿಡ್ ಕೇರ್ ಸೆಂಟರ್ ನಲ್ಲೂ ಯಾವುದೇ ಸೋಂಕಿತರು ದಾಖಲಾಗಿಲ್ಲ ಅಂತಾ ಮುಂಡಗೋಡ ತಹಶೀಲ್ದಾರ್ ಮಾಹಿತಿ ನೀಡಿದ್ದಾರೆ.

Post
ತಾಲೂಕಿನಲ್ಲಿಂದು 07 ಕೊರೋನಾ ಪಾಸಿಟಿವ್..!

ತಾಲೂಕಿನಲ್ಲಿಂದು 07 ಕೊರೋನಾ ಪಾಸಿಟಿವ್..!

ಮುಂಡಗೋಡ: ತಾಲೂಕಿನಲ್ಲಿ ಇಂದು 8 ಹೊಸ ಕೊರೋನಾ ಪಾಸಿಟಿವ್ ದೃಢಪಟ್ಟಿವೆ. ಸದ್ಯ ತಾಲೂಕಿನಲ್ಲಿ ಒಟ್ಟೂ 88 ಸಕ್ರೀಯ ಪ್ರಕರಣಗಳಿದ್ದು, ಆಸ್ಪತ್ರೆಯಲ್ಲಿ 35 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. 52 ಜನ ಸೋಂಕಿತರು ಹೋಂ ಐಸೋಲೇಶನ್ ನಲ್ಲಿದ್ದಾರೆ. ಯಾವುದೇ ಸೋಂಕಿತರು ಇಂದು ಗುಣಮುಖರಾಗಿಲ್ಲ. ಇನ್ನು, ಮುಂಡಗೋಡಿನ ಕೋವಿಡ್ ಕೇರ್ ಸೆಂಟರ್ ನಲ್ಲಿ ಓರ್ವ ಸೋಂಕಿತ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಂತಾ ಮುಂಡಗೋಡ ತಹಶೀಲ್ದಾರ್ ಮಾಹಿತಿ ನೀಡಿದ್ದಾರೆ

Post
ತಾಲೂಕಿನಲ್ಲಿಂದು 05 ಕೊರೋನಾ ಪಾಸಿಟಿವ್..! 2 ಸಾವು..!!

ತಾಲೂಕಿನಲ್ಲಿಂದು 05 ಕೊರೋನಾ ಪಾಸಿಟಿವ್..! 2 ಸಾವು..!!

ಮುಂಡಗೋಡ: ತಾಲೂಕಿನಲ್ಲಿ ಇಂದು 5 ಹೊಸ ಕೊರೋನಾ ಪಾಸಿಟಿವ್ ದೃಢಪಟ್ಟಿದೆ. 19 ಸೋಂಕಿತರು ಗುಣಮುಖರಾಗಿದ್ದಾರೆ. ಸದ್ಯ ತಾಲೂಕಿನಲ್ಲಿ ಒಟ್ಟೂ 84 ಸಕ್ರೀಯ ಪ್ರಕರಣಗಳಿದ್ದು, ಆಸ್ಪತ್ರೆಯಲ್ಲಿ 43 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. 41 ಜನ ಸೋಂಕಿತರು ಹೋಂ ಐಸೋಲೇಶನ್ ನಲ್ಲಿದ್ದಾರೆ. 13 ಜನ ಸೋಂಕಿತರು ಇಂದು ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಇನ್ನು, ಮುಂಡಗೋಡಿನ ಕೋವಿಡ್ ಕೇರ್ ಸೆಂಟರ್ ಖಾಲಿ ಖಾಲಿಯಾಗಿದೆ. ಇಂದು ತಾಲೂಕಿನಲ್ಲಿ ಇಬ್ಬರು ಸೋಂಕಿತರು ಮೃತಪಟ್ಟಿದ್ದು, ತಾಲೂಕಿನ ತಟ್ಟಿಹಳ್ಳಿಯ 65 ವರ್ಷದ ಓರ್ವ ಪುರುಷ ವ್ಯಕ್ತಿ, ಹಾಗೂ...

  • 1
  • 2
error: Content is protected !!