ಸಿಂಗನಳ್ಳಿಯಲ್ಲಿ ಅಡಿಕೆ ತೋಟ ನಾಶ ಪಡಿಸಿದ ದುರುಳರು, 240 ಅಡಿಕೆ ಗಿಡಗಳನ್ನು ಕಡಿದು ಹಾಕಿದ ದುಷ್ಟರು..!

ಮುಂಡಗೋಡ ತಾಲೂಕಿನ ನಂದೀಪುರ ಗ್ರಾಮದಲ್ಲಿ ದುಷ್ಕರ್ಮಿಗಳು ಹೀನ ಕೃತ್ಯವೆಸಗಿದ್ದಾರೆ. ರೈತರೋರ್ವರ ಅಡಿಕೆ ತೋಟಕ್ಕೆ ನುಗ್ಗಿ ಬರೋಬ್ಬರಿ 240 ಅಡಿಕೆ ಗಿಡಗಳನ್ನು ಕಡಿದು ಹಾಕಿದ್ದಾರೆ.

ನಂದಿಪುರ ಗ್ರಾಮದ ರತ್ನಾ ಬಸವರಾಜ ಓಣಿಕೇರಿ ಎಂಬುವವರಿಗೆ ಸೇರಿದ ಮುಂಡಗೋಡ ತಾಲೂಕಿನ ಕಾತೂರ ಪಂಚಾಯತ ವ್ಯಾಪ್ತಿಯ ಸಿಂಗನಳ್ಳಿ ಗ್ರಾಮದ ಸ.ನಂ:35ಅ ರಲ್ಲಿ 3-19-00 ಜಮೀನಿನಲ್ಲಿ, ಅಂದಾಜು 1800 ಅಡಿಕೆ ಸಸಿಗಳನ್ನು ನೆಡಲಾಗಿದೆ. ಅವು ಸುಮಾರು 3 ವರ್ಷ ಗಿಡಗಳಾಗಿ ಬೆಳೆದಿವೆ.

ಹೀಗಿರೋವಾಗ, ದಿನಾಂಕ 7-5-2025 ರಂದು ಸದರ ತೋಟದಲ್ಲಿರುವ 240 ಅಡಿಕೆ ಗಿಡಗಳನ್ನು ಯಾರೋ ಕಡಿದು, ನಾಶ ಪಡಿಸಿ ಹೋಗಿದ್ದಾರೆ. ಹೀಗಾಗಿ, ಈ‌ ಕುರಿತು ಮುಂಡಗೋಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರು ದಾಖಲಿಸಿಕೊಂಡ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

error: Content is protected !!