Home ದುಮ್ಮಾನ

Category: ದುಮ್ಮಾನ

Post
ಮುಂಡಗೋಡ ಪಟ್ಟಣದ ಮೂರು ಶಿಶು ಪಾಲನ ಕೇಂದ್ರ ಮುಚ್ಚುವ ಆತಂಕ, ಪೋಷಕರಿಂದ ಮನವಿ ಸಲ್ಲಿಸಲು ನಿರ್ಧಾರ..!

ಮುಂಡಗೋಡ ಪಟ್ಟಣದ ಮೂರು ಶಿಶು ಪಾಲನ ಕೇಂದ್ರ ಮುಚ್ಚುವ ಆತಂಕ, ಪೋಷಕರಿಂದ ಮನವಿ ಸಲ್ಲಿಸಲು ನಿರ್ಧಾರ..!

ಮುಂಡಗೋಡ ಪಟ್ಟಣದ ಮೂರು ಸ್ಥಳಗಳಲ್ಲಿ ಕಳೆದ ಎರಡು ವರ್ಷಗಳಿಂದ ಕಾರ್ಯನಿರ್ವಹಿಸ್ತಿದ್ದ ಶಿಶು ಪಾಲನ ಕೇಂದ್ರಗಳನ್ನು ಮುಚ್ಚಲಾಗ್ತಿದೆಯಾ..? ಕಾರ್ಮಿಕ ಇಲಾಖೆಯಿಂದ ಕಾರ್ಮಿಕರ ಮಕ್ಕಳಿಗಾಗಿ ತೆರೆದಿರೋ ಶಿಶು ಪಾಲನ ಕೇಂದ್ರಗಳನ್ನು  ಸದ್ಯ ಮುಚ್ಚಲಾಗ್ತಿದೆ ಅನ್ನೋ ಸುದ್ದಿ ತಿಳಿದು ಅಲ್ಲಿನ ಪೋಷಕರು ಆತಂಕಗೊಂಡಿದ್ದಾರೆ. ಹೀಗಾಗಿ, ಪೋಷಕರು ಶಿಶು ಪಾಲನ ಕೇಂದ್ರ ಮುಚ್ಚದಂತೆ ತಹಶೀಲ್ದಾರರಿಗೆ ಮನವಿ ಅರ್ಪಿಸಿದ್ದಾರೆ. ಜಿಲ್ಲೆ ಸೇರಿದಂತ ರಾಜ್ಯದ ಕೆಲವೆಡೆ ಶಿಶು ಪಾಲನ ಕೇಂದ್ರಗಳನ್ನು ಮುಚ್ಚಲಾಗುತ್ತಿದ್ದು, ಅದೇ ಭಯ ಇದೀಗ ಮುಂಡಗೋಡಿನ ಸುಭಾಷನಗರ, ಲಂಬಾಣಿ ತಾಂಡಾ ನಂ.3 ಹಾಗೂ ಗಣೇಶನಗರದ...

Post
ಶಿಗ್ಗಾವಿ ವಾರ್ಡ್ ನಂ.21 ರ ಜಯನಗರದಲ್ಲಿ ಸಮಸ್ಯೆಗಳದ್ದೇ ಕಾರುಬಾರು, ಅಧ್ಯಕ್ಷೆ ಮೇಡಮ್ಮು ಕೊಂಚ ಕಣ್ಣೆತ್ತಿ ನೋಡಿ ತಾಯಿ..!

ಶಿಗ್ಗಾವಿ ವಾರ್ಡ್ ನಂ.21 ರ ಜಯನಗರದಲ್ಲಿ ಸಮಸ್ಯೆಗಳದ್ದೇ ಕಾರುಬಾರು, ಅಧ್ಯಕ್ಷೆ ಮೇಡಮ್ಮು ಕೊಂಚ ಕಣ್ಣೆತ್ತಿ ನೋಡಿ ತಾಯಿ..!

ಶಿಗ್ಗಾವಿ: ಪುರಸಭೆ, ವಾರ್ಡ್‌ ನಂ.21 ರ ಜನ ರೋಸಿ ಹೋಗಿದ್ದಾರೆ. ಇಲ್ಲಿ ಆಡಳಿತ ವ್ಯವಸ್ಥೆ ಅನ್ನೋದು ಇದೆಯೊ ಇಲ್ಲವೋ ಅಂತಾ ನಿತ್ಯವೂ ಹಿಡಿಶಾಪ ಹಾಕ್ತಿದಾರೆ. ಯಾಕಂದ್ರೆ, ಈ ವಾರ್ಡಿನ ರಸ್ತೆಗಳು ಇವತ್ತು ನಡೆದಾಡಲೂ ಆಗದ ಸ್ಥಿತಿಯಲ್ಲಿವೆ. ಚರಂಡಿ ವ್ಯವಸ್ಥೆ ಅನ್ನೋದು ಗಬ್ಬೇದ್ದು ಹೋಗಿದೆ. ಈ ಕಾರಣಕ್ಕಾಗಿ ಈ ವಾರ್ಡಿನ ಜನರಿಗೆ ಸಾಂಕ್ರಾಮಿಕ ರೋಗಗಳ ಭೀತಿ ಶುರುವಾಗಿದೆ. ಹೀಗಾಗಿನೇ ಇಲ್ಲಿನ ಜನ ನಮ್ಮ ಕಡೆ ಗಮನವಹಿಸಿ ಅಂತಾ ಪುರಸಭೆಗೆ ಮನವಿ ಪತ್ರ ಸಲ್ಲಿಸಿದ್ದಾರೆ. ಅಂದಹಾಗೆ, ಇದು ಸಿಎಂ ತವರುಕ್ಷೇತ್ರ..!...

Post
ಇಂದೂರು ಗ್ರಾ.ಪಂಚಾಯತಿಯಲ್ಲಿ ಪಿಡಿಓ ಮೇಡಂ ಕಚೇರಿಗೆ ಬರೋ ಟೈಮಿಂಗ್ ಎಷ್ಟು..? ಸೂಚನಾ ಫಲಕವನ್ನಾದ್ರೂ ಹಾಕಿ‌ ಮೇಡಂ..!

ಇಂದೂರು ಗ್ರಾ.ಪಂಚಾಯತಿಯಲ್ಲಿ ಪಿಡಿಓ ಮೇಡಂ ಕಚೇರಿಗೆ ಬರೋ ಟೈಮಿಂಗ್ ಎಷ್ಟು..? ಸೂಚನಾ ಫಲಕವನ್ನಾದ್ರೂ ಹಾಕಿ‌ ಮೇಡಂ..!

ಮುಂಡಗೋಡ ತಾಲೂಕಿನಲ್ಲಿ ಬಹುಶಃ ಇಂದೂರು ಗ್ರಾಮ ಪಂಚಾಯತಿಯ ಪಿಡಿಓ ಮೇಡಂ ನಷ್ಟು ಬ್ಯುಸಿ ಯಾರೂ ಇರಲಿಕ್ಕಿಲ್ವೇನೊ..? ಯಾಕಂದ್ರೆ, ಈ ಮೇಡಮ್ಮು ಇಂದೂರು ಪಂಚಾಯತಿಯಲ್ಲಿ ಸಿಗೋದೇ ಅಪರೂಪ ಅಂತಾ ಜನ ಹೇಳ್ತಿದಾರೆ. ತಮ್ಮ ಪಂಚಾಯತಿ ಅಡಿಯಲ್ಲಿ ಏನೇನೇಲ್ಲ ನಡೀತಿವೆ ಅನ್ನೊ ಕನಿಷ್ಟ ಖಬರೂ ಇಲ್ಲದಂತಾಗಿದೆ. ಯಾರ್ಯಾರು ಎಲ್ಲೇಲ್ಲಿ ಏನೇನು ಕಾಮಗಾರಿ ಮಾಡ್ತಿದಾರೆ, ಹೇಗೇ ಹೇಗೆ ನಡಿತಿವೆ ಅನ್ನೊ ಉಸಾಬರಿ ಬಹುತೇಕ ಪಿಡಿಓ ಮೇಡಂಗೆ ಇದೆಯೊ ಇಲ್ವೋ ಅರ್ಥವಾಗಬೇಕಿದೆ. ಬರೋದೇ ಮದ್ಯಾಹ್ನ..! ಅಸಲು, ಇಂದೂರು ಗ್ರಾಮ ಪಂಚಾಯತಿಗೆ ಪಿಡಿಓ ಆಗಿ...

Post
ಸಿಂಗನಳ್ಳಿಯಲ್ಲಿ ಶಾಲಾ ವಿದ್ಯಾರ್ಥಿಗಳಿಂದ ಕುಡಿಯೊ ನೀರಿಗಾಗಿ ರಸ್ತೆ ತಡೆ..! ಅಯ್ಯೋ, ಇದು ನಾಚಿಗ್ಗೇಡಲ್ವಾ ಭಗೀರಥರೇ..?

ಸಿಂಗನಳ್ಳಿಯಲ್ಲಿ ಶಾಲಾ ವಿದ್ಯಾರ್ಥಿಗಳಿಂದ ಕುಡಿಯೊ ನೀರಿಗಾಗಿ ರಸ್ತೆ ತಡೆ..! ಅಯ್ಯೋ, ಇದು ನಾಚಿಗ್ಗೇಡಲ್ವಾ ಭಗೀರಥರೇ..?

 ಮುಂಡಗೋಡ ತಾಲೂಕಾಡಳಿತ ಅದೇನು ಕಡೆದು ಗುಡ್ಡೆ ಹಾಕ್ತಿದೆಯೋ ಒಂದೂ ಅರ್ಥ ಆಗ್ತಿಲ್ಲ. ಇಲ್ಲಿ ಜನರಿಗೆ ಬವಣೆಗಳೇ ಹಾಸು ಹೊಕ್ಕಾಗಿದೆ. ಕೋಟಿ ಕೋಟಿ ಹಣದ ಹರಿವು ಆಗ್ತಿದೆ. ಸಾಕಷ್ಟು ಅಭಿವೃದ್ಧಿಯ ಪರ್ವವೇ ತಾಲೂಕಿನಲ್ಲಿ ನಡೆದಿದೆ. ಹಾಗೆ ಹೀಗೆ ಅಂತೇಲ್ಲ‌ ಬಡಾಯಿ ಕೊಚ್ಚಿಕೊಳ್ಳುವ ಜನಪ್ರತಿನಿಧಿಗಳಿಗೆ ಇಲ್ಲಿನ ಸಮಸ್ಯೆಗಳೇ ಕಾಣುತ್ತಿಲ್ವಾ..? ಇಂತಹದ್ದೊಂದು ಅನುಮಾನ ಮೂಡುತ್ತಿದೆ. ನಿಜ ಇದು ಅಕ್ಷರಶಃ ನಮ್ಮ ತಾಲೂಕಿನ ವ್ಯವಸ್ಥೆಗೆ ಹಿಡಿದ ಕನ್ನಡಿ.. ನಾಚಿಗ್ಗೇಡು..! ಭಗೀರಥರ ತವರು..! ಯಾಕಂದ್ರೆ, ಸಾಕ್ಷಾತ್ ಭಗೀರಥರ ಅವತಾರ ಮುಂಡಗೋಡ ತಾಲೂಕಿ‌ನಲ್ಲಿ ಆಗಿಯೇ...

Post
ಸನವಳ್ಳಿಯ ಬಾಲಕನ “ಮೂಕ”ರೋಧನ, ನಾಯಿಗಳ ದಾಳಿಗೆ ತುತ್ತಾದ ತಮ್ಮನಿಗೆ ಪುಟ್ಟ ಅಣ್ಣನೇ ಆಸರೆ, ಕರುಳು ಹಿಂಡುವ ಕತೆಯಿದು..!

ಸನವಳ್ಳಿಯ ಬಾಲಕನ “ಮೂಕ”ರೋಧನ, ನಾಯಿಗಳ ದಾಳಿಗೆ ತುತ್ತಾದ ತಮ್ಮನಿಗೆ ಪುಟ್ಟ ಅಣ್ಣನೇ ಆಸರೆ, ಕರುಳು ಹಿಂಡುವ ಕತೆಯಿದು..!

ನಿಜಕ್ಕೂ ಇದೊಂದು ಹೃದಯ ಹಿಂಡುವ ಕರುಣಾಜನಕ ಕತೆ. ಮುಂಡಗೋಡ ತಾಲೂಕಿನ ಸನವಳ್ಳಿಯ ಅದೊಬ್ಬ ಬಾಲಕನ ಮನಮಿಡಿಯುವ ಕತೆ. ಆತನ ಹೆಸ್ರು ಗುತ್ತೆಪ್ಪ.. ಈಗಿನ್ನೂ 7 ವರ್ಷದ ಬಾಲಕ. ಆತನಿಗೆ ಹಡೆದವ್ವ ಇಲ್ಲ. ತಾಯಿ ತೀರಿಕೊಂಡು ವರ್ಷ ಕಳೆದಿದೆ. ಹಡೆದ ತಂದೆಗೆ ಅದೇನಾಗಿದೆಯೋ ಗೊತ್ತಿಲ್ಲ. ಮಕ್ಕಳ ಬಗ್ಗೆ ಕ್ಯಾರೇ ಇಲ್ಲ. ಮೇಲಾಗಿ ಆ ಬಾಲಕನಿಗೆ ಮಾತೇ ಬರಲ್ಲ. ಇವನೊಬ್ಬನೇ ಅಲ್ಲ ಈತನಿಗೆ ಇನ್ನಿಬ್ಬರು ಅಣ್ಣಂದಿರು ಇದ್ದಾರೆ. ಓರ್ವ ಅಣ್ಣನ ಹೆಸ್ರು ನಾಗರಾಜ ಆತನಿಗೆ 17 ವರ್ಷ ವಯಸ್ಸು, ಮತ್ತೋರ್ವ...

Post
ಇಂದೂರಿನ ಈ ಬಡ ಕುಟುಂಬದ ಕೂಗು ಯಾರಿಗೂ ಕೇಳುತ್ತಿಲ್ಲವಾ..? ಗ್ರಾಪಂ ನಿರ್ಲಕ್ಷಕ್ಕೆ ಬಡವರ ಬದುಕೇ ತತ್ತರ..!

ಇಂದೂರಿನ ಈ ಬಡ ಕುಟುಂಬದ ಕೂಗು ಯಾರಿಗೂ ಕೇಳುತ್ತಿಲ್ಲವಾ..? ಗ್ರಾಪಂ ನಿರ್ಲಕ್ಷಕ್ಕೆ ಬಡವರ ಬದುಕೇ ತತ್ತರ..!

 ಇಂದೂರು ಗ್ರಾಮ ಪಂಚಾಯತಿಯ ನಿರ್ಲಕ್ಷಕ್ಕೆ ಇಂದೂರಿನ ಅದೊಂದು ಬಡ ಕುಟುಂಬ ಬೀದಿಗೆ ಬಿದ್ದಂತಾಗಿದೆ. ಕಳೆದ‌ ಮೂರು ವರ್ಷಗಳಿಂದ ಜೀವ ಅಂಗೈಯಲ್ಲಿ ಹಿಡಿದು ಬದುಕುತ್ತಿದೆ. ಆಗಲೋ ಈಗಲೋ ಬೀಳುವ ಮನೆಯಲ್ಲಿ ಬದುಕು ನಡೆಸುತ್ತಿದೆ. ನಿನ್ನೆ ರಾತ್ರಿಯೂ ಮಳೆಯಿಂದ ಅರ್ಧಕ್ಕರ್ದ ಗೋಡೆ ಕುಸಿದು ಬಿದ್ದಿದ್ದು ಮತ್ತಷ್ಟು ಆತಂಕದಲ್ಲಿ ಬಾಳುವಂತಾಗಿದೆ. ಹೌದು, ಇಂದೂರಿನ ಪ್ಲಾಟ್ ಏರಿಯಾದಲ್ಲಿ ಕಳೆದ ಮೂರು ವರ್ಷಗಳಿಂದ ಮನೆಯಿಲ್ಲದೇ ಮುರುಕು ಮನೆಯಲ್ಲಿ ವಾಸಿಸುತ್ತಿರೋ ಈ ಕುಟುಂಬ, ಈಗ ಅಕ್ಷರಶಃ ಆತಂಕದಲ್ಲಿದೆ. ಕಲ್ಪನಾ ಕಲಿವೀರ್ ಕಟ್ಟಿಮನಿ ಎಂಬುವ ಬಡ...

error: Content is protected !!