Home ಎಡಿಟರ್ ಸ್ಪೀಕ್ಸ್

Category: ಎಡಿಟರ್ ಸ್ಪೀಕ್ಸ್

Post
ಇಂದೂರು ಸೊಸೈಟಿ ಚುನಾವಣೆ: ಭರ್ಜರಿ ಗೆಲುವು ಸಾಧಿಸಿದ ಕಾಂಗ್ರೆಸ್ ಬೆಂಬಲಿತರು..!  ರೈತ ಒಕ್ಕೂಟಕ್ಕೆ ಮೂರು ಸ್ಥಾನಗಳು ಮಾತ್ರ..!

ಇಂದೂರು ಸೊಸೈಟಿ ಚುನಾವಣೆ: ಭರ್ಜರಿ ಗೆಲುವು ಸಾಧಿಸಿದ ಕಾಂಗ್ರೆಸ್ ಬೆಂಬಲಿತರು..! ರೈತ ಒಕ್ಕೂಟಕ್ಕೆ ಮೂರು ಸ್ಥಾನಗಳು ಮಾತ್ರ..!

ಮುಂಡಗೋಡ ತಾಲೂಕಿನ ಇಂದೂರು ಸೊಸೈಟಿ ಚುನಾವಣೆ ಫಲಿತಾಂಶ ಹೊರಬಿದ್ದಿದೆ‌. ತಾಲೂಕಿನಲ್ಲೇ ಭಾರೀ ಸದ್ದು ಮಾಡಿದ್ದ, ಜಿದ್ದಾಜಿದ್ದಿಗೆ ಕಾರಣವಾಗಿದ್ದ ಈ ಚುನಾವಣೆ, ನಿಜಕ್ಕೂ ಯಾರೂ ನಿರೀಕ್ಷಿಸದ ಅಚ್ಚರಿ ಫಲಿತಾಂಶ ನೀಡಿದೆ. ಕಾಂಗ್ರೆಸ್ ನ ಪ್ರಭಾವಿ ಮುಖಂಡ, ಶಿವರಾಮ್ ಹೆಬ್ಬಾರರ ಪರಮಾಪ್ತ, ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ರವಿಗೌಡ ಪಾಟೀಲರ ಸೋಲಿನೊಂದಿಗೆ ಭಾರೀ ಅಚ್ಚರಿಗೆ ಕಾರಣವಾಗಿದೆ. ಅಸಲು, ತೀವ್ರ ತುರುಸು ಪಡೆದಿದ್ದ ಇಂದೂರು ಸೊಸೈಟಿ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ “ಮಹಾದಂಡನಾಯಕ” ರವಿಗೌಡ ಪಾಟೀಲ್ ಸೋಲು ಕಂಡಿದ್ದರೂ, ಇನ್ನುಳಿದ ಬಹುತೇಕ ಕಾಂಗ್ರೆಸ್...

Post
ಬಿಜೆಪಿಯಿಂದ ಉಚ್ಚಾಟನೆ ಮಾತು..! ಹೆಬ್ಬಾರ್ ಅಂಗಳದಲ್ಲಿ ಸಂಭ್ರಮವೋ ಸಂಭ್ರಮ..!!

ಬಿಜೆಪಿಯಿಂದ ಉಚ್ಚಾಟನೆ ಮಾತು..! ಹೆಬ್ಬಾರ್ ಅಂಗಳದಲ್ಲಿ ಸಂಭ್ರಮವೋ ಸಂಭ್ರಮ..!!

ಯಲ್ಲಾಪುರ ಬಿಜೆಪಿ ಶಾಸಕ ಶಿವರಾಮ್ ಹೆಬ್ಬಾರ್ ಅಕ್ಷರಶಃ ಸಂಭ್ರಮಿಸಲು ತುದಿಗಾಲ ಮೇಲೆ ನಿಂತಿದ್ದಾರೆ. ಇನ್ನೇನು ಬಿಜೆಪಿಯಿಂದ ಉಚ್ಚಾಟನೆಯೋ ಅಥವಾ ಇನ್ಯಾವುದೋ ಕಠಿಣ ಕ್ರಮದ ಮಾತು ಹೊರಬಿದ್ದ ಗಳಿಗೆಯಿಂದ ಹೆಬ್ಬಾರ್ ಪಡಸಾಲೆಯಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ‌. ಯಾಕಂದ್ರೆ, ಇಲ್ಲಿ ರೋಗಿ ಬಯಸಿದ್ದು, ಡಾಕ್ಟರ್ ಹೇಳಿದ್ದು, ಎರಡೂ ಒಂದೇಯಾಗುವ ಸಮಯ ಬಹುತೇಕ ಹತ್ತಿರವಾಗಿದೆ ಅಂತಲೇ ಹೆಬ್ಬಾರ್ ಬಳಗದಲ್ಲಿ ಚರ್ಚೆಯಾಗ್ತಿದೆ. STS ಹಾಗೂ ಹೆಬ್ಬಾರ್ ಮೇಲೆ ಕ್ರಮ..! ಅಸಲು, ವಿಜಯಪುರ ಶಾಸಕ, ಬಿಜೆಪಿಯ ಫೈಯರ್ ಬ್ರ್ಯಾಂಡ್ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ...

Post
ಹಾಡಹಗಲೇ ಮುಂಡಗೋಡಿನಲ್ಲಿ ನಡೀತು ಬೆಚ್ಚಿ ಬೀಳಿಸೋ ಅಟ್ಯಾಕ್..! ಏನಾಗ್ತಿದೆ ಮುಂಡಗೋಡಿನಲ್ಲಿ..?  ಯಾರ ಭಯವೂ ಇಲ್ಲದೇ ಹೋಯ್ತಾ..?

ಹಾಡಹಗಲೇ ಮುಂಡಗೋಡಿನಲ್ಲಿ ನಡೀತು ಬೆಚ್ಚಿ ಬೀಳಿಸೋ ಅಟ್ಯಾಕ್..! ಏನಾಗ್ತಿದೆ ಮುಂಡಗೋಡಿನಲ್ಲಿ..? ಯಾರ ಭಯವೂ ಇಲ್ಲದೇ ಹೋಯ್ತಾ..?

 ಮುಂಡಗೋಡಿನಲ್ಲಿ ಅದ್ಯಾಕೋ ಏನೋ ನಡೆಯಬಾರದ ಘಟನೆಗಳು ನಡೆದು ಹೋಗ್ತಿವೆ. ಹಾಡಹಗಲೇ ಜನನೀ ಬೀಡ ಪ್ರದೇಶಗಳಲ್ಲಿ ಭಯಾನಕ ವೆಂಬಂತ ಘಟನೆಗಳೂ ಜಾರಿಯಲ್ಲಿವೆ. ‌ಇಲ್ಲಿ, ಯಾವ ಹೊತ್ತಿನಲ್ಲಿ ಯಾರ ಮಾಂಗಲ್ಯ ಸರ ಅದ್ಯಾರ ಕಿತ್ತುಕೊಳ್ತಾರೋ ಯಾರಿಗೂ ಅರ್ಥವಾಗದ ಹಾಗಾಗಿದೆ. ನಿಜ ಅಂದ್ರೆ ಒಡವೆಗಳನ್ನು ಹಾಕೊಂಡು ಹೊರಗಡೆ ತಿರುಗಾಡಲೂ ಮಹಿಳೆಯರು ಹೆದರುವಂತಾಗಿದೆ. ಕಳ್ಳಕಾಕರಿಗೆ ಸೇಫಿಯಸ್ಟ್ ಜಾಗ..? ಸರಗಳ್ಳತ‌ನ, ಬೈಕ್ ಕಳ್ಳತನ, ಮನೆಗಳ್ಳತನಗಳು ನಿತ್ಯದ ಭಯವಾಗಿದೆ. ಇದೇಲ್ಲ ಯಾಕೆ ಆಗ್ತಿದೆಯೋ ಯಾರಿಗೂ ಗೊತ್ತಿಲ್ಲ. ಘಟನೆ ನಡೆದು ಎರಡು ದಿನ ಚರ್ಚೆ ಆಗತ್ತೆ...

Post
“ಅಣಬೆ ಪಲ್ಯ, ಬಿಸಿ ರೊಟ್ಟಿ ಮಾಡಿ ಇಡ್ರಿ, ಬಂದು ಉಣ್ತಿನಿ” ಅಂತ ಹೇಳಿ ಹೋದ ಹುಡುಗ ಹೆಣವಾಗಿ ಬಿಟ್ಟ..!  ಪಾಳಾ ಯುವಕನ ಆತ್ಮಹತ್ಯೆ ಹಿಂದೆ ಹಲವು ಅನುಮಾನ..?

“ಅಣಬೆ ಪಲ್ಯ, ಬಿಸಿ ರೊಟ್ಟಿ ಮಾಡಿ ಇಡ್ರಿ, ಬಂದು ಉಣ್ತಿನಿ” ಅಂತ ಹೇಳಿ ಹೋದ ಹುಡುಗ ಹೆಣವಾಗಿ ಬಿಟ್ಟ..! ಪಾಳಾ ಯುವಕನ ಆತ್ಮಹತ್ಯೆ ಹಿಂದೆ ಹಲವು ಅನುಮಾನ..?

ಮುಂಡಗೋಡ ತಾಲೂಕಿನ ಪಾಳಾದ ಹುಡುಗ ರವಿ ಅಕ್ಕಸಾಲಿ ಸಾವಿನ ಹಿಂದೆ ಅನುಮಾನ ಇದೆಯಾ..? ಹುಡೇಲಕೊಪ್ಪದ ಮಾವಿನ ಗಿಡದಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದ ರವಿಯ ಸಾವಿನ ಸುತ್ತ ಹತ್ತಾರು ಪ್ರಶ್ನೆಗಳು ಎದ್ದಿವೆ. ವಯಸ್ಸಲ್ಲದ ವಯಸ್ಸಲ್ಲಿ ಆತನಿಗೆ ಆತ್ಮಹತ್ಯೆ ಮಾಡಿಕೊಳ್ಳುವಂತಹ ದರ್ದಾದ್ರೂ ಏನಿತ್ತು ಅನ್ನೋದು ಕೆಲವರ ಪ್ರಶ್ನೆ..! ಅಣಬೆ ತಂದಿದ್ದ..! ಅಸಲು, ನಿನ್ನೆ ಇಡೀ ದಿನವೂ ಲವಲವಿಕೆಯಿಂದಲೇ ಇದ್ದ ರವಿ, ಮದ್ಯಾನ ಮನೆಗೆ ಕಾಡಿನಿಂದ ತಾಜಾ ಮಶರೂಮ್ (ಅಣಬೆ) ತಂದಿದ್ದ. ನಿಮಗೆ ಗೊತ್ತಿರಲಿ, ಉತ್ತರ ಕನ್ನಡದ ಕಾಡಲ್ಲಿ ಈ...

Post
ರಾಜೀನಾಮೆ ಕೊಡಿ ಅಂದವ್ರಿಗೆ ಹೆಬ್ಬಾರ್ ಬೆಂಬಲಿಗರ ಖಡಕ್ ಉತ್ತರ..! ಅಷ್ಟಕ್ಕೂ ಈ ನೈತಿಕತೆ ಅದ್ಯಾರ ಸ್ವತ್ತು..?

ರಾಜೀನಾಮೆ ಕೊಡಿ ಅಂದವ್ರಿಗೆ ಹೆಬ್ಬಾರ್ ಬೆಂಬಲಿಗರ ಖಡಕ್ ಉತ್ತರ..! ಅಷ್ಟಕ್ಕೂ ಈ ನೈತಿಕತೆ ಅದ್ಯಾರ ಸ್ವತ್ತು..?

ಲೋಕಸಭಾ ಚುನಾವಣೆ ಮುಗಿದ ಬೆನ್ನಲ್ಲೇ ಯಲ್ಲಾಪುರ ಮುಂಡಗೋಡ ವಿಧಾನಸಭಾ ಕ್ಷೇತ್ರದಲ್ಲಿ ರಾಜಕೀಯ ಮೇಲಾಟಗಳು, ಒದರಾಟಗಳ ಪರ್ವ ಶುರುವಾಗಿದೆ. ರೆಬೆಲ್ ಶಾಸಕ ಶಿವರಾಮ್ ಹೆಬ್ಬಾರ್ ವಿರುದ್ಧ ಮುಗಿಬಿದ್ದಿರೋ ಬಿಜೆಪಿ ಪಾಳಯ, ರಾಜೀನಾಮೆ ಬೀಸಾಕುವಂತೆ ಕಂಡ ಕಂಡಲ್ಲಿ ಕಹಳೆ ಮೊಳಗಿಸಿದೆ. ಮೊನ್ನೆ ಜೂನ್ 11 ರಂದು ಮುಂಡಗೋಡಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದ ಬಿಜೆಪಿ ಮುಂಡಗೋಡ ಮಂಡಳಕ್ಕೆ ಗುರುವಾರ, ಹೆಬ್ಬಾರ್ ಬೆಂಬಲಿಗರು ಠಕ್ಕರ್ ಕೊಟ್ಟಿದ್ದಾರೆ. ಪತ್ರಿಕಾಗೋಷ್ಟಿಯ ಮೂಲಕವೇ ಪ್ರತ್ಯುತ್ತರ ನೀಡಿದ್ದಾರೆ. ನೈತಿಕತೆಯ ಪಾಠ ಮಾಡಿದ್ದಾರೆ. ಬಿಜೆಪಿ, ಪತ್ರಿಕಾಗೋಷ್ಠಿ ಮತ್ತು ಎಚ್ಚರಿಕೆ..! ಅಂದಹಾಗೆ, ಜೂನ್...

Post
ಪಕ್ಷಿಧಾಮದಲ್ಲಿ ಕಳ್ಳರ ಪಾಲಾಗಿದ್ದ ಶ್ರೀಗಂಧದಮರ ಎರಡಲ್ಲ ಕಣ್ರಿ; ಬರೋಬ್ಬರಿ ಐದು..!? ಅಷ್ಟಕ್ಕೂ ಈ ಮಸಲತ್ತಿನ ಸೂತ್ರದಾರಿಗಳು ಯಾರ್ಯಾರು ಗೊತ್ತಾ..?

ಪಕ್ಷಿಧಾಮದಲ್ಲಿ ಕಳ್ಳರ ಪಾಲಾಗಿದ್ದ ಶ್ರೀಗಂಧದಮರ ಎರಡಲ್ಲ ಕಣ್ರಿ; ಬರೋಬ್ಬರಿ ಐದು..!? ಅಷ್ಟಕ್ಕೂ ಈ ಮಸಲತ್ತಿನ ಸೂತ್ರದಾರಿಗಳು ಯಾರ್ಯಾರು ಗೊತ್ತಾ..?

  ಅತ್ತಿವೇರಿ ಪಕ್ಷಿಧಾಮದಲ್ಲಿ ಶ್ರೀಗಂಧದ ಮರ ಕಳ್ಳತನ ಪ್ರಕರಣ ನಾವೇಲ್ಲ ಅಂದುಕೊಂಡಷ್ಟು ಸುಲಭವಾಗಿಲ್ಲ ಅನಿಸ್ತಿದೆ. ಮೇಲ್ನೋಟಕ್ಕೆ ಹೇಳೋದಾದ್ರೆ ಇಲ್ಲಿನ ಅಧಿಕಾರಿಗಳೇ ಇಲಾಖೆಯ ಕಣ್ಣಿಗೆ ಮಣ್ಣೆರೆಚಿದ್ದು ಬಹುತೇಕ ನಿಚ್ಚಳವಾದಂತಾಗಿದೆ. ಯಾಕಂದ್ರೆ, ನಾವು ನಿನ್ನೆ ತಮ್ಮೇದುರು ಬಯಲು ಮಾಡಿದ್ದ ಶ್ರೀಗಂಧದ ಮರಗಳ್ಳತನ ಕೇಸಿನಲ್ಲಿ ನಮಗೆ ಕೆವಲ ಎರಡೇ ಶ್ರೀಗಂಧದ ಮರ ದೋಚಿದ್ದಾರೆ ಅನ್ನೋ ಮಾಹಿತಿಯಿತ್ತು. ಆದ್ರೆ, ಅಲ್ಲಿನ ಅಸಲೀಯತ್ತೇ ಬೇರೆಯದ್ದಿದೆ. ಎರಡಲ್ಲ, ಬರೋಬ್ಬರಿ ಐದು..? ಅಸಲು, ಕರ್ನಾಟಕದ ವಿಖ್ಯಾತ ಅತ್ತಿವೇರಿ ಪಕ್ಷಿಧಾಮದಲ್ಲಿ ಅಧಿಕಾರಿಗಳ ಕಣ್ಣಾಮುಚ್ಚಾಲೆ ಆಟದಲ್ಲಿ ಬಲಿಯಾಗಿದ್ದು ಕೇವಲ...

Post
ಕಾಂಗ್ರೆಸ್ ಸೇರೋ ಹಿಂದಿದೆಯಾ ಮಹಾ ಪ್ಲ್ಯಾನ್..? ಲೋಕಲ್ ಬಿಟ್ಟು ಲೋಕಸಭೆಗೆ ಜಿಗಿತಾರಾ ಶಿವರಾಮ್ ಹೆಬ್ಬಾರ್..? ಕೈ ಅಂಗಳದಲ್ಲಿ ಚರ್ಚೆ ಆಗ್ತಿರೋದಾದ್ರೂ ಏನು..?

ಕಾಂಗ್ರೆಸ್ ಸೇರೋ ಹಿಂದಿದೆಯಾ ಮಹಾ ಪ್ಲ್ಯಾನ್..? ಲೋಕಲ್ ಬಿಟ್ಟು ಲೋಕಸಭೆಗೆ ಜಿಗಿತಾರಾ ಶಿವರಾಮ್ ಹೆಬ್ಬಾರ್..? ಕೈ ಅಂಗಳದಲ್ಲಿ ಚರ್ಚೆ ಆಗ್ತಿರೋದಾದ್ರೂ ಏನು..?

ಯಲ್ಲಾಪುರ ಕ್ಷೇತ್ರದ ಬಿಜೆಪಿ ಶಾಸಕ ಶಿವರಾಮ್ ಹೆಬ್ಬಾರ್ ಕಾಂಗ್ರೆಸ್ ಸೇರೋದು ಬಹುತೇಕ ಫಿಕ್ಸು ಎಂಬುವ ಮಾಹಿತಿ ಲಭ್ಯವಾಗ್ತಿದೆ. ಆದ್ರೆ, ಈ ಬಗ್ಗೆ ಶಾಸಕ ಹೆಬ್ಬಾರರು ಯಾವುದೇ ಖಚಿತ ಮಾಹಿತಿ ನೀಡುತ್ತಿಲ್ಲ. ಬದಲಾಗಿ ಅಡ್ಡಗೋಡೆಯ ಮೇಲೆ ದೀಪ ಇಟ್ಟಂಗೆ ಮಾತಾಡ್ತಿದಾರೆ. ಸತ್ಯ ಅಂದ್ರೆ, ಹೆಬ್ಬಾರ್ ಸಾಹೇಬ್ರ ಲೆಕ್ಕಾಚಾರ ಬೇರೇಯದ್ದೇ ಇದೆಯಾ..? ಈಗಾಗಲೇ ಕೇಸರಿ ಅಂಗಳದಿಂದ ಒಂದು ಹೆಜ್ಜೆ ಹೊರಗೆ ಇಟ್ಟು ಆಗಿದೆಯಾ..? ಅಷ್ಟಕ್ಕೂ, ಕಾಂಗ್ರೆಸ್ “ಕೈ” ಹಿಡಿಯಲು ಇಟ್ಟಿರೋ ಬೇಡಿಕೆಗಳಾದ್ರೂ ಏನು..? ಅಸಲು, ಕಾಂಗ್ರೆಸ್ ಹೈಕಮಾಂಡ್ ಹೆಬ್ಬಾರ್ ಸಾಹೇಬ್ರ...

Post
ಯಲ್ಲಾಪುರ ಕ್ಷೇತ್ರದಲ್ಲಿ ಪಕ್ಷಾಂತರದ ರೂಮರ್ರು.. ಅಷ್ಟಕ್ಕೂ, ಹೆಬ್ಬಾರ್ ಸಾಹೇಬ್ರು ಮತ್ತೆ “ಘರ್ ವಾಪಸಿ” ಅಗ್ತಾರಾ..? ಏನಿದೆ ಲೆಕ್ಕಾಚಾರ..?

ಯಲ್ಲಾಪುರ ಕ್ಷೇತ್ರದಲ್ಲಿ ಪಕ್ಷಾಂತರದ ರೂಮರ್ರು.. ಅಷ್ಟಕ್ಕೂ, ಹೆಬ್ಬಾರ್ ಸಾಹೇಬ್ರು ಮತ್ತೆ “ಘರ್ ವಾಪಸಿ” ಅಗ್ತಾರಾ..? ಏನಿದೆ ಲೆಕ್ಕಾಚಾರ..?

ಯಲ್ಲಾಪುರ ವಿಧಾನಸಭಾ ಕ್ಷೇತ್ರ ಮತ್ತೊಮ್ಮೆ ರಾಜ್ಯಮಟ್ಟದಲ್ಲಿ ಸುದ್ದಿಯಾಗ್ತಿದೆಯಾ..? ರಾಜ್ಯ ರಾಜಕಾರಣದಲ್ಲಿ ಸದ್ಯ ಯಲ್ಲಾಪುರ ಕ್ಷೇತ್ರವನ್ನು ಬಹುಶಃ ಓರೇಗಣ್ಣಿನಿಂದ ನೋಡುವಂತಹ ಊಹಾಪೋಹಗಳು ಜಾರಿಯಲ್ಲಿವೆ. ಯಾಕಂದ್ರೆ, ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದ ವಲಸಿಗರ ಟೀಂ ನಲ್ಲಿ ಕೆಲವರು ಮತ್ತೆ ಕಾಂಗ್ರೆಸ್ ಸೇರ್ಪಡೆಯಾಗೋದು ಪಕ್ಕಾ ಎನ್ನುವಂತಹ ಮಾತುಗಳು ಕೇಳಿ ಬರ್ತಿವೆ. ಅದ್ರಲ್ಲೂ ಯಲ್ಲಾಪುರ ಕ್ಷೇತ್ರದ ಬಿಜೆಪಿ ಶಾಸಕರೂ ಕಾಂಗ್ರೆಸ್ ಗೆ ಸೇರ್ತಾರೆ ಅನ್ನೋ ಸುದ್ದಿಗಳು ಹರಿದಾಡ್ತಿದೆ. ಆದ್ರೆ, ಇದೇಲ್ಲ ಜಸ್ಟ್ ರೂಮರ್ರು ಅಂತಾ ಶಾಸಕರ ಆಪ್ತ ವಲಯ ಸರಾಸಗಾಟಾಗಿ ತಳ್ಳಿ ಹಾಕ್ತಿದೆ....

Post
ಮುಂಡಗೋಡ ಠಾಣೆಯಲ್ಲಿ “ಮಂತ್ಲಿ” ಬಾಬತ್ತಿಗಾಗಿ ಬರಗೆಟ್ಟವನ ಕಳ್ಳಾಟಗಳು ಒಂದಾ..? ಎರಡಾ..? ಪಿಐ ಬರಮಪ್ಪ ಸಾಹೇಬ್ರೆ ಕೊಂಚ ಗಮನಿಸಿ..!

ಮುಂಡಗೋಡ ಠಾಣೆಯಲ್ಲಿ “ಮಂತ್ಲಿ” ಬಾಬತ್ತಿಗಾಗಿ ಬರಗೆಟ್ಟವನ ಕಳ್ಳಾಟಗಳು ಒಂದಾ..? ಎರಡಾ..? ಪಿಐ ಬರಮಪ್ಪ ಸಾಹೇಬ್ರೆ ಕೊಂಚ ಗಮನಿಸಿ..!

ಮುಂಡಗೋಡ ಪೊಲೀಸ್ ಠಾಣೆಗೆ ನೂತನ ಪಿಐ ಆಗಿ ಬರಮಪ್ಪ ಲೋಕಾಪುರ ಅಧಿಕಾರ ಸ್ವೀಕರಿಸಿದ್ದಾರೆ. ಜೊತೆಗೆ ತಮ್ಮ ಹೊಸ ಠಾಣೆಯ ಜವಾಬ್ದಾರಿ ಹೊತ್ತಿದ್ದಾರೆ. ಇದ್ರೊಂದಿಗೆ ಮುಂಡಗೋಡಿಗರು ಮತ್ತೊಮ್ಮೆ ಮೂಟೆ ಮೂಟೆಗಳಷ್ಟು ಭರವಸೆ ಹೊತ್ತು, ಬೆರಗುಗಣ್ಣಿನಿಂದ ಹೊಸ ಅಧಿಕಾರಿಯತ್ತ ನೋಡುತ್ತಿದ್ದಾರೆ. ಯಾಕಂದ್ರೆ, ಇತ್ತಿತ್ತಲಾಗಿ ನಮ್ಮ‌ ಮುಂಡಗೋಡ ಪೊಲೀಸ್ ಠಾಣೆ ಅನ್ನೋದು ಅದ್ಯಾರ್ಯಾರದ್ದೋ “ರಾಜೀ” ಲೆಕ್ಕಗಳ ಅಡ್ಡೆಯಾದಂತಾಗಿತ್ತು. ಹಾಗಂತ, ನಾವು ಹೇಳ್ತಿಲ್ಲ, ಅದನ್ನೇಲ್ಲ ಕಣ್ಣಾರೆ ಕಂಡಿದ್ದ ಸಾರ್ವಜನಿಕರ ಬಹುದೊಡ್ಡ ಆರೋಪವಾಗಿತ್ತು. ಹಾಗಿದ್ರೆ ಅದೀಗ, ಬದಲಾಗತ್ತಾ..? ಬದಲಾಗಬೇಕಾದ್ರೆ ಸದ್ಯ ಮುಂಡಗೋಡ ಠಾಣೆಯಲ್ಲಿ ಏನೇನು...

Post
ಮುಂಡಗೋಡಿನಲ್ಲಿ ಹಾಡಹಗಲೇ ಶಿಕ್ಷಕಿಯ ಮಾಂಗಲ್ಯ ಸರ ದೋಚಿದ ಖದೀಮರು, ಏನಾಗ್ತಿದೆ ನಮ್ಮೂರಲ್ಲಿ..? ಪೊಲೀಸರ ಭಯವೇ ಹೋಯ್ತಾ..?

ಮುಂಡಗೋಡಿನಲ್ಲಿ ಹಾಡಹಗಲೇ ಶಿಕ್ಷಕಿಯ ಮಾಂಗಲ್ಯ ಸರ ದೋಚಿದ ಖದೀಮರು, ಏನಾಗ್ತಿದೆ ನಮ್ಮೂರಲ್ಲಿ..? ಪೊಲೀಸರ ಭಯವೇ ಹೋಯ್ತಾ..?

ಮುಂಡಗೋಡ ಪಟ್ಟಣದ ಸರ್ಕಾರಿ ಮಾದರಿ ಶಾಲೆಯ ಶಿಕ್ಷಕಿಯೋರ್ವರ ಬಂಗಾರದ ಚೈನ್ ಎಗರಿಸಿದ್ದಾರೆ ಕಳ್ಳರು. ಬೈಕ್ ಮೇಲೆ ಬಂದಿದ್ದ ಇಬ್ಬರು ಏಕಾಏಕಿ ಶಿಕ್ಷಕಿಯ ಕೊರಳಲ್ಲಿದ್ದ ಮಾಂಗಲ್ಯದ ಸರ ಕಿತ್ತುಕೊಂಡು ಪರಾರಿಯಾಗಿದ್ದಾರೆ. ಕೆಲವೇ ಕ್ಷಣಗಳಲ್ಲಿ ನಡೆದು ಹೋದ ಘಟನೆಯಲ್ಲಿ, ಶಿಕ್ಷಕಿಯ ಮೂಕ ರೋಧನವಷ್ಟೇ ಬಾಕಿ ಉಳಿದಿದೆ. ಮಟ ಮಟ ಮದ್ಯಾಹ್ನವೇ..! ಅಂದಹಾಗೆ, ಶನಿವಾರ ಮದ್ಯಾಹ್ನ ಸರಿಸುಮಾರು 12- 40 ಗಂಟೆಯ ಹೊತ್ತಲ್ಲಿ, ಮಾದರಿ ಶಾಲೆಯ ದೈಹಿಕ ಶಿಕ್ಷಕಿ ಸರೋಜಾ ಮಹೇಶ್ ಬೈಂದೂರ್ ಶಾಲೆಯಿಂದ ಬಸ್ ನಿಲ್ದಾಣಕ್ಕೆ ಕಾಲ್ನಡಿಯಲ್ಲೇ ಹೊರಟಿದ್ದರು. ಈ...

  • 1
  • 2
  • 9
error: Content is protected !!