ಹಾವೇರಿ: ಸಹಸ್ರಾರು ಅಭಿಮಾನಿಗಳನ್ನು ಹೊಂದಿದ್ದ ಹಾವೇರಿಯ ನಾಗೇಂದ್ರನಮಟ್ಟಿಯ ಚಿಕ್ಕಪ್ಪ ಅಜ್ಜಪ್ಪ ದೊಡ್ಡ ತಳವಾರ ಅವರ ನೆಚ್ಚಿನ ರಾಕ್ ಸ್ಟಾರ್‌ ಕೊಬ್ಬರಿ ಹೋರಿ ಏ.6ರಂದು ಶನಿವಾರ ರಾತ್ರಿ 9ರ ಸುಮಾರಿಗೆ ಸಾವನ್ನಪ್ಪಿದೆ.

ಅನಾರೋಗ್ಯದ ಸಮಸ್ಯೆಯಿಂದ ಹೋರಿ ಅಸುನೀಗಿದೆ. ಕಳೆದ ಹಲವಾರು ದಿನಗಳಿಂದ ನೆಲಕಟ್ಟಿದ್ದ ಹೋರಿಯನ್ನು ಜೋಪಾನವಾಗಿ ಕಾಪಾಡುತ್ತಾ ಬಂದಿದ್ದ ಹೋರಿಯ ಮಾಲೀಕ ಚಿಕ್ಕಪ್ಪ ಅವರ ಸಹೋದರರು, ಮನೆಯ ಮಂದಿ ನಿತ್ಯ ಹೋರಿಯ ಕಾಳಜಿಮಾಡುತ್ತಾ ಬಂದಿದ್ದರು. ನೂರಾರು ಹೋರಿಯ ಸ್ಪರ್ಧೆಗಳಲ್ಲಿ ಭಾಗವಹಿಸಿ ಹಲವಾರು ಬಹುಮಾನಗಳನ್ನು ಗೆಲುವು ಮೂಲಕ ತನ್ನ ಸೌಮ್ಯ ಸ್ವಭಾವದಿಂದ‌ ಸಹಸ್ರಾರು ಅಭಿಮಾನಿಗಳನ್ನು ಹೊಂದಿತ್ತು. ಅಭಿಮಾನಿಗಳ ಪಾಲಿನ ಮೆಚ್ಚಿನ ಕೊಬ್ಬರಿಹೋರಿಯಾಗಿದ್ದ ರಾಕ್ ಸ್ಟಾರ್ ಹೋರಿಯ ಓಟದ ಖ್ಯಾತಿ ಹೊರರಾಜ್ಯಗಳಿಗೂ ಹಬ್ಬಿತ್ತು. ರಾಜ್ಯದ ವಿವಿಧಕಡೆಗಳಲ್ಲಿ ನಡೆಯುವ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ರಾಕ್ ಸ್ಟಾರ್ ಭಾಗವಹಿಸಿದ್ದು ವಿಶೇಷ. ರಾಕ್ ಸ್ಟಾರ್ ಹೋರಿ ಸಿನೇಮಾ ದಲ್ಲಿಯು ಸಹ ಪಾತ್ರವನ್ನು ನಿರ್ವಹಿಸಿತ್ತು. ಗ್ರಾಮೀಣ ಹಾಗೂ ಶಹರ ಪ್ರದೇಶಗಳಲ್ಲಿ ಮಹಿಳೆಯರು, ಮಕ್ಕಳು, ಎಲ್ಲಾ ವಯೋಮಾನದವರು‌ ಈ ಹೋರಿಯಲ್ಲಿ ದೈವತ್ವವನ್ನು ಕಂಡು ಪೂಜಿಸುತ್ತಿದ್ದರು. ಹೀಗಾಗಿ, ಹೋರಿ ಸಾವನ್ನಪ್ಪಿದ ಸುದ್ದಿ ತಿಳಿದು ಸಾವಿರಾರು ಅಭಿಮಾನಿಗಳ ಕಣ್ಣಿರು ಹಾಕಿದ್ದಾರೆ.

ನಾಳೆ ರವಿವಾರ ಅಂತ್ಯಕ್ರಿಯೆ
ರಾಕ್ ಸ್ಟಾರ್ ಹೋರಿಯ ಅಂತ್ಯಕ್ರಿಯೆ ಯನ್ನು ಏ.7ರಂದು ಭಾನುವಾರ ಸಂಜೆ ನಾಗೇಂದ್ರ ನಮಟ್ಟಿಯಲ್ಲಿ‌ ನೆರವೇರಿಸಲಾಗುತ್ತದೆ ಎಂದು ತಿಳಿದು ಬಂದಿದೆ. ಅಂತ್ಯಕ್ರಿಯೆ ಗೂ ಮುನ್ನ ನಗರದಲ್ಲಿ ಹೋರಿಯ ಪಾರ್ಥಿವ ಶರೀರವನ್ನು ಮೆರವಣಿಗೆ ನಡೆಸಲಾಗುತ್ತದೆ .

error: Content is protected !!