ಮುಂಡಗೋಡ ಹೊರ ವಲಯದ ಕಲಘಟಗಿ ರಸ್ತೆಯ ಖಬರಸ್ಥಾನ ಬಳಿ ಅಪಘಾತವಾಗಿದೆ. ಟಾಟಾ ಎಸ್ ವಾಹನ ಬೈಕ್ ಗೆ ಗುದ್ದಿದ ಪರಿಣಾಮ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡಿದ್ದಾನೆ. ಆದ್ರೆ, ಗಾಯಗೊಂಡ ಬೈಕ್ ಸವಾರ ಯಾರು, ಎಲ್ಲಿಯವನು ಅನ್ನೋ ಮಾಹಿತಿ ಇನ್ನೂ ಲಭ್ಯವಾಗಿಲ್ಲ.
ಈಗಷ್ಟೇ ಕೆಲವೇ ನಿಮಿಷಗಳ ಹಿಂದೆ ನಡೆದಿರೋ ಘಟನೆ ಇದಾಗಿದ್ದು, ಬೈಕ್ ಗೆ ಗುದ್ದಿದ ಪರಿಣಾಮ ಬೈಕ್ ಸವಾರ ಗಂಭೀರ ಗಾಯಗೊಂಡು ಬಿದ್ದು ಹೊರಳಾಡುತ್ತಿದ್ದರೂ, ಅಪಘಾತ ಪಡಿಸಿದ ಟಾಟಾ ಎಸ್ ವಾಹನದ ಚಾಲಕ, ಪರಾರಿಯಾಗಿದ್ದಾನೆ.
ದಾರಿಹೋಕರು, ಗಾಯಗೊಂಡ ಬೈಕ್ ಸವಾರನನ್ನು ಅಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ರವಾನಿಸಿದ್ದಾರೆ. ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.