ಕಾಮೆಡಿ ಕಿಲಾಡಿಯ ಹಾಸ್ಯ ಕಲಾವಿದ, ರಾಕೇಶ್ ಪೂಜಾರಿ ಇನ್ನಿಲ್ಲ..!

ಕನ್ನಡ ಕಿರುತೆರೆಯ ಪ್ರತಿಭಾವಂತ ಹಾಸ್ಯ ಕಲಾವಿದ, ಕಾಮೆಡಿ ಕಿಲಾಡಿಗಳು ಕಾರ್ಯಕ್ರಮದ ಮೂಲಕ ಇಡೀ ರಾಜ್ಯಕ್ಕೆ ಚಿರಪರಿಚಿತರಾಗಿದ್ದ ರಾಕೇಶ್ ಪೂಜಾರಿ ಉಡುಪಿಯಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಬಂದಿದ್ದ ರಾಕೇಶ್ ಪೂಜಾರಿಗೆ ಬಿಪಿ ಲೋ ಆಗಿತ್ತು. ತಕ್ಷಣವೇ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದ್ರೂ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ ಅನ್ನೊ ಮಾಹಿತಿ ಲಭ್ಯವಾಗಿದೆ.

ಅಷ್ಟಕ್ಕೂ ರಾಕೇಶ್ ಪೂಜಾರಿ ಯಾರು..?
ರಾಕೇಶ್ ಪೂಜಾರಿ ಮೂಲತಃ ಉಡುಪಿಯವರು. ತಮ್ಮದೇ ಆದ ವಿಶಿಷ್ಟ ಮ್ಯಾನರಿಸಂ ಹೊಂದಿದ್ದ ರಾಕೇಶ್ ಪೂಜಾರಿ ಪ್ರತಿಭಾವಂತ ಕಲಾವಿದ. ಕಳೆದ ಕೆಲವು ವರ್ಷಗಳಿಂದ ರಾಕೇಶ್ ಪೂಜಾರಿ ರಂಗಭೂಮಿಯಲ್ಲಿ ಸಕ್ರಿಯರಾಗಿದ್ದರು. ‘ಕಾಮಿಡಿ ಕಿಲಾಡಿಗಳು’ ರಿಯಾಲಿಟಿ ಶೋನಿಂದ ರಾಕೇಶ್ ಪೂಜಾರಿ ಕನ್ನಡಿಗರ ಮನೆ ಮಾತಾದರು. ‘ಕಾಮಿಡಿ ಕಿಲಾಡಿಗಳು ಸೀಸನ್ 3’ ಕಾರ್ಯಕ್ರಮದಲ್ಲಿ ಸ್ಪರ್ಧಿಸಿ, ವಿವಿಧ ಅವತಾರಗಳನ್ನ ತಾಳಿ ಕನ್ನಡ ವೀಕ್ಷಕರನ್ನ ನಗೆಗಡಲಲ್ಲಿ ತೇಲಿಸಿದವರು ರಾಕೇಶ್ ಪೂಜಾರಿ. ಕನ್ನಡಿಗರು ಹಾಗೂ ತೀರ್ಪುಗಾರರ ಮನಗೆದ್ದ ರಾಕೇಶ್ ಪೂಜಾರಿ 2020ರಲ್ಲಿ ‘ಕಾಮಿಡಿ ಕಿಲಾಡಿಗಳು ಸೀಸನ್‌ 3’ ಕಾರ್ಯಕ್ರಮದಲ್ಲಿ ವಿನ್ನರ್ ಆದರು. ಅಂದು ರಾಕೇಶ್ ಪೂಜಾರಿಗೆ ವಿನ್ನರ್‌ ಟ್ರೋಫಿ ಹಾಗೂ 8 ಲಕ್ಷ ರೂಪಾಯಿ ಬಹುಮಾನ ಹಣ ಲಭಿಸಿತ್ತು.

ಪಾಕಿಸ್ತಾನದ 700 ಡ್ರೋನ್, ಕೆಲವು ಜೆಟ್ ಗಳು ಧ್ವಂಸ ; ಭಾರತದ ಎಲ್ಲ ಪೈಲಟ್ ಗಳು ಸುರಕ್ಷಿತ : ಡಿಜಿಎಂಒ

ಕಾಮಿಡಿ ಕಿಲಾಡಿಗಳು’ ಬಳಿಕ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ ‘ಹಿಟ್ಲರ್ ಕಲ್ಯಾಣ’ ಧಾರಾವಾಹಿಯಲ್ಲೂ ರಾಕೇಶ್ ಪೂಜಾರಿ ಅಭಿನಯಿಸಿದ್ದರು. ಕನ್ನಡದ ‘ಪೈಲ್ವಾನ್’, ‘ಇದು ಎಂಥಾ ಲೋಕವಯ್ಯ’ ಸಿನಿಮಾಗಳಲ್ಲಿ ರಾಕೇಶ್ ಪೂಜಾರಿ ನಟಿಸಿದ್ದಾರೆ. ತುಳು ಭಾಷೆಯ ‘ಪೆಟ್ಕಮ್ಮಿ’, ‘ಅಮ್ಮೆರ್ ಪೊಲೀಸ್‌’ ಸಿನಿಮಾಗಳಲ್ಲೂ ರಾಕೇಶ್ ಪೂಜಾರಿ ಮಿಂಚಿದ್ದಾರೆ.

error: Content is protected !!