ಬಾರದ ಮಳೆಗಾಗಿ ಕಲಕೇರಿ ಗ್ರಾಮದ ಮಹಿಳೆಯರ ವಿಶೇಷ ಆಚರಣೆ, ಹುಯ್ಯೋ ಹುಯ್ಯೋ ಮಳೆರಾಯ ಅಂದ್ರು ಮಹಿಳೆಯರು..!


ಮುಂಡಗೋಡ: ಜೂನ್ ತಿಂಗಳು ಕಳೆಯುತ್ತ ಬಂದರೂ ಮಳೆರಾಯನ ಆಗಮನ ಇನ್ನೂ ಆಗಿಲ್ಲದಿರುವುದು ತಾಲೂಕಿನ ಅನ್ನದಾತರಿಗೆ ಭಾರೀ ಆತಂಕ ತಂದಿಟ್ಟಿದೆ. ಬಹುತೇಕ ಬಿತ್ತನೆ ಕಾರ್ಯಕ್ಕೆ ಮಳೆರಾಯನ ಮುನಿಸಿನಿಂದ ಭಾರೀ ಅಡಚಣೆಯಾಗಿದೆ. ಕೆಲವು ಕಡೆ ಬೀಜ ಬಿತ್ತನೆ ಕಾರ್ಯ ಮಾಡಿದ್ದರೂ ಬೀಜ ಮೊಳಕೆಯೊಡೆಯಲು ನೀರಿನ ಅಭಾವ ತಲೆದೋರಿದೆ. ಹೀಗಾಗಿ, ತಾಲೂಕಿನ ಕಲಕೇರಿಯ ಮಹಿಳೆಯರು ಮಳೆಗಾಗಿ ವಿಶೇಷ, ವಿಶಿಷ್ಟ ಕಾರ್ಯ ಮಾಡಿದ್ದಾರೆ.

ಕಪ್ಪೆಯ ಮೆರವಣಿಗೆ..!
ಯಸ್, ಕಲಕೆರಿಯ ಮಹಿಳೆಯರು ಇಂದು ಬೆಳಗಿನಿಂದ ಮಳೆಗಾಗಿ ಕಪ್ಪೆಯ ಪೂಜೆ ಮಾಡಿ ಪ್ರಾರ್ಥಿಸಿದ್ದಾರೆ‌. ಮಳೆರಾಯನಿಗೆ ಹಾಡುಗಳ ಮೂಲಕ ಗ್ರಾಮದ ತುಂಬೇಲ್ಲ ಕಪ್ಪೆಗಳನ್ನು ಹೊತ್ತು ಮೆರವಣಿಗೆ ಮಾಡಿ ಮಳೆರಾಯ ದಯೆ ತೋರು ಅಂತಾ ಪ್ರಾರ್ಥಿಸಿದ್ದಾರೆ. ಕಪ್ಪೆಗಳನ್ನು ವಿಶೇಷ ಅಲಂಕೃತ ಬುಟ್ಟಿಯಲ್ಲಿ ಹೊತ್ತ ಮಹಿಳೆಯರು ಗ್ರಾಮದ ಮನೆ ಮನೆಗಳಿಗೆ ತೆರಳಿ ಪೂಜೆ ಸಲ್ಲಿಸಿದ್ದಾರೆ. ಕಪ್ಪೆ ಹೊತ್ತ ಮಹಿಳೆಗೆ ನೀರು ಸುರಿಯೊ ಮೂಲಕ ಮಳೆರಾಯನಿಗೆ ಆಮಂತ್ರಿಸಿದ್ದಾರೆ.

ಪ್ರತೀತಿ..!
ಅಸಲು, ಉತ್ತರ ಕರ್ನಾಟಕ ಭಾಗದಲ್ಲಿ ಮಳೆ ಮುನಿಸಿಕೊಂಡರೆ, ವಿಶೇಷವಾದ ಪೂಜೆ, ಸಂಪ್ರದಾಯಗಳನ್ನು ಮಾಡುತ್ತಾರೆ. ಅದ್ರಂತೆ, ಕಪ್ಪೆ ಮೆರವಣಿಗೆ, ಕತ್ತೆಗಳ ಮದುವೆ ಸೇರಿದಂತೆ ಹಲವು ಬಗೆಯ ಕೈಂಕರ್ಯಗಳನ್ನು ಮಾಡುವ ಸಂಪ್ರದಾಯವಿದೆ. ಹೀಗಾಗಿ, ಇಂದು ಶುಕ್ರವಾರ ಕಲಕೇರಿ ಗ್ರಾಮದ ಮಹಿಳೆಯರು ವಿಶೇಷ ಪೂಜೆ ಸಲ್ಲಿಸುವ ಮೂಲಕ ಕಪ್ಪೆಗಳ‌ ಮೆರವಣಿಗೆ ಮಾಡಿದ್ದಾರೆ. ಇನ್ನಾದ್ರೂ ಮಳೆರಾಯ ಕೃಪೆ ತೋರುತ್ತಾನಾ..? ಕಾಯಬೇಕಿದೆ.

error: Content is protected !!