Home ಉತ್ತರ ಕನ್ನಡ ಮುಂಡಗೋಡ ಸುದ್ದಿ

Category: ಮುಂಡಗೋಡ ಸುದ್ದಿ

Post
ತಟ್ಟಿಹಳ್ಳಿ ಶಿವಾನಂದನ ಹತ್ಯೆಗೆ ಸಜ್ಜಾಗಿದ್ದವನ ಹೆಸರು ಶಿವರಾಜ್.. ಅಷ್ಟಕ್ಕೂ ಆತ 3ನೇ ಹೆಂಡತಿಯ ಮೊದಲನೇ ಗಂಡನ ಮಗ..!

ತಟ್ಟಿಹಳ್ಳಿ ಶಿವಾನಂದನ ಹತ್ಯೆಗೆ ಸಜ್ಜಾಗಿದ್ದವನ ಹೆಸರು ಶಿವರಾಜ್.. ಅಷ್ಟಕ್ಕೂ ಆತ 3ನೇ ಹೆಂಡತಿಯ ಮೊದಲನೇ ಗಂಡನ ಮಗ..!

ಮುಂಡಗೋಡ ತಾಲೂಕಿನ ತಟ್ಟಿಹಳ್ಳಿಯಲ್ಲಿ ಗುರುವಾರ  ಸಂಜೆ ನಡೆದ ಭೀಕರ ಹತ್ಯೆ ಯತ್ನ ಕೇಸಿನ ಅಸಲೀಯತ್ತು ಬಟಾಬಯಲಾಗಿದೆ. ಅಂದಹಾಗೆ, ಅಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದವನ ಹೆಸರು ಶಿವಾನಂದ ರಾಮಣ್ಣ ಗುಡಿಯಾಳ, ವಯಸ್ಸು 48 ವರ್ಷ. ಅಷ್ಟಕ್ಕೂ, ಹಾಗೆ ರಕ್ತದ ಮಡುವಿನಲ್ಲಿ ಬೀಳುವಂತೆ ಕತ್ತಿಗೆ ಬಲವಾಗಿ ಮಚ್ಚಿನಿಂದ ಕತ್ತರಿಸಿದ್ದವನ ಹೆಸರು ಶಿವರಾಜ್ ಕಲಕಟ್ಟಿ..!       ಅನುಮಾನದ ಪಿಶಾಚಿ..! ಅಸಲು, ಮುಂಡಗೋಡ ತಾಲೂಕಿನ ತಟ್ಟಿಹಳ್ಳಿ ಗ್ರಾಮದ ಲಾರಿಚಾಲಕ ಶಿವಾನಂದ ರಾಮಣ್ಣ ಗುಡಿಯಾಳ(48) ಈ ಹಿಂದೆ ಎರಡೆರಡು ಮದುವೆಯಾಗಿದ್ದ. ಆದ್ರೆ, ಇಬ್ಬರು...

Post
ತಟ್ಟಿಹಳ್ಳಿಯಲ್ಲಿ ಮಗನಿಂದಲೇ ತಂದೆಯ ಭೀಕರ ಹತ್ಯೆಗೆ ಯತ್ನ..? ಕಂದಲಿಯಿಂದ ಕುತ್ತಿಗೆಗೆ ಕೊಯ್ದ ಶಿವರಾಜ್ ಪರಾರಿ..!

ತಟ್ಟಿಹಳ್ಳಿಯಲ್ಲಿ ಮಗನಿಂದಲೇ ತಂದೆಯ ಭೀಕರ ಹತ್ಯೆಗೆ ಯತ್ನ..? ಕಂದಲಿಯಿಂದ ಕುತ್ತಿಗೆಗೆ ಕೊಯ್ದ ಶಿವರಾಜ್ ಪರಾರಿ..!

ಮುಂಡಗೋಡ ತಾಲೂಕಿನ ತಟ್ಟಿಹಳ್ಳಿಯಲ್ಲಿ ವ್ಯಕ್ತಿಯೋರ್ವನ ಮೇಲೆ ಆತನ ಮಗನಿಂದಲೇ ಭೀಕರ ಹತ್ಯೆಗೆ ಯತ್ನ ನಡೆದಿದೆ. ಪರಿಣಾಮ ವ್ಯಕ್ತಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾನೆ. ಹಲ್ಲೆ ನಡೆಸಿದ ಶಿವರಾಜ ಪರಾರಿಯಾಗಿದ್ದಾನೆ‌. ಇನ್ನು ನಾಗಮ್ಮ ಎಂಬುವವಳನ್ನು ಪೊಲೀಸ್ರು ವಶಕ್ಕೆ ಪಡೆದಿದ್ದಾರೆ‌. ಶಿವಾನಂದ (47) ಎಂಬುವವನ ಮೇಲೆ ಭೀಕರ ಹತ್ಯೆಗೆ ಯತ್ನ ನಡೆದಿದೆ. ಮಗನಿಂದಲೇ ಕಂದಲಿಯಿಂದ ಹಿಂದಿನಿಂದ ಬಂದು ಕುತ್ತಿಗೆಗೆ ಮಾರಣಾಂತಿಕ ಹಲ್ಲೆ ನಡೆದಿದೆ ಎನ್ನಲಾಗಿದ್ದು, ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಹತ್ಯೆಗೆ ಯತ್ನ ನಡೆದಿದೆ. ಸದ್ಯ ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದ...

Post
ಕಾತೂರು ನಾಗನೂರು ರಸ್ತೆಯಲ್ಲಿ ಬೈಕುಗಳ ನಡುವೆ ಮುಖಾಮುಕಿ ಡಿಕ್ಕಿ, ಇಬ್ಬರಿಗೆ ಗಾಯ

ಕಾತೂರು ನಾಗನೂರು ರಸ್ತೆಯಲ್ಲಿ ಬೈಕುಗಳ ನಡುವೆ ಮುಖಾಮುಕಿ ಡಿಕ್ಕಿ, ಇಬ್ಬರಿಗೆ ಗಾಯ

ಮುಂಡಗೋಡ ತಾಲೂಕಿನ ಕಾತೂರು ಬಳಿ ಬೈಕುಗಳ‌ ನಡುವೆ ಮುಖಾಮುಕಿ ಡಿಕ್ಕಿಯಾಗಿದೆ‌. ಪರಿಣಾಮ ಇಬ್ಬರೂ ಬೈಕ್ ಸವಾರರಿಗೆ ಗಾಯವಾಗಿದೆ. ಕಾತೂರು- ನಾಗನೂರು ರಸ್ತೆಯಲ್ಲಿ ಘಟನೆ ನಡೆದಿದ್ದು, ಬೈಕ್ ಗಳ ನಡುವೆ ಡಿಕ್ಕಿಯಲ್ಲಿ ಇಬ್ಬರಿಗೂ ಗಾಯವಾಗಿದೆ. ಗಾಯಾಳುಗಳನ್ನು ಮುಂಡಗೋಡ ತಾಲೂಕಾಸ್ಪತ್ರೆಗೆ ರವಾನಿಸಲಾಗಿದೆ. ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Post
ಮುಂಡಗೋಡ ಪಟ್ಟಣದ ಯಲ್ಲಾಪುರ ರಸ್ತೆಯಲ್ಲಿ ಕಬ್ಬು ತುಂಬಿದ ಟ್ರಾಕ್ಟರ್ ಪಲ್ಟಿ, ತಪ್ಪಿದ ಭಾರೀ ಅನಾಹುತ..!

ಮುಂಡಗೋಡ ಪಟ್ಟಣದ ಯಲ್ಲಾಪುರ ರಸ್ತೆಯಲ್ಲಿ ಕಬ್ಬು ತುಂಬಿದ ಟ್ರಾಕ್ಟರ್ ಪಲ್ಟಿ, ತಪ್ಪಿದ ಭಾರೀ ಅನಾಹುತ..!

 ಕಬ್ಬು ತುಂಬಿದ ಟ್ರಾಕ್ಟರ್ ಟ್ರೈಲರ್ ನ ಕೊಂಡಿ ಕಳಚಿ, ಹಿಂಬದಿಗೆ ಚಲಿಸಿ ಪಲ್ಟಿಯಾದ ಘಟನೆ ಮುಂಡಗೋಡ ಪಟ್ಟಣದ ಯಲ್ಲಾಪುರ ರಸ್ತೆಯ ಪೊಸ್ಟ್ ಆಫೀಸ್ ಬಳಿ ನಡೆದಿದೆ. ರಸ್ತೆಯಲ್ಲೇ ಕಬ್ಬು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು, ಕಬ್ಬಿನ ಅಡಿ ಎರಡು ಮೂರು ಬೈಕ್ ಗಳು ಸಿಲುಕಿಕೊಂಡಿರೋ ಸಾಧ್ಯತೆ ಇದೆ ಅನ್ನೋ ಮಾಹಿತಿ ಲಭ್ಯವಾಗಿದೆ. ಅದೃಷ್ಟವಶಾತ್ ಭಾರೀ ಅನಾಹುತವೊಂದು ತಪ್ಪಿದಂತಾಗಿದೆ. ಅಂದಹಾಗೆ, ಡಬಲ್ ಟ್ರೈಲರ್ ನಲ್ಲಿ ಕಬ್ಬು ತುಂಬಿಕೊಂಡು ಸಾಗುವ ಟ್ರಾಕ್ಟರ್, ಯಲ್ಲಾಪುರ ರಸ್ತೆಯ ಮಸೀದಿ ಬಳಿಯಲ್ಲಿ ಚಲಿಸುತ್ತಿದ್ದಾಗ ಟ್ರೈಲರ್ ನ...

Post
ತಟ್ಟಿಹಳ್ಳಿ ಬಳಿ ಕಾರ್, ಟ್ರಾಕ್ಟರ್ ನಡುವೆ ಮುಖಾಮುಕಿ ಡಿಕ್ಕಿ, ಕಾರ್ ಪಲ್ಟಿ, ಮಗುವಿಗೆ ಗಾಯ..!

ತಟ್ಟಿಹಳ್ಳಿ ಬಳಿ ಕಾರ್, ಟ್ರಾಕ್ಟರ್ ನಡುವೆ ಮುಖಾಮುಕಿ ಡಿಕ್ಕಿ, ಕಾರ್ ಪಲ್ಟಿ, ಮಗುವಿಗೆ ಗಾಯ..!

 ಮುಂಡಗೋಡ ತಾಲೂಕಿನ ಟಿಬೇಟಿಯನ್ ಕಾಲೋನಿ ಸಮೀಪ, ತಟ್ಟಿಹಳ್ಳಿ ಬಳಿ ಕಾರ್ ಹಾಗೂ ಟ್ರಾಕ್ಟರ್ ನಡುವೆ ಮುಖಾಮುಕಿ ಡಿಕ್ಕಿಯಾಗಿದೆ. ಪರಿಣಾಮ ಡಿಕ್ಕಿಯ ರಭಸಕ್ಕೆ ಕಾರು ಪಲ್ಟಿಯಾಗಿದೆ. ಕಾರಲ್ಲಿದ್ದ ಒಂದು ಪುಟ್ಟ ಮಗುವಿಗೆ ಸಣ್ಣಪುಟ್ಟ ಗಾಯವಾಗಿದೆ ಅನ್ನೋ ಮಾಹಿತಿ ಲಭ್ಯವಾಗಿದೆ. ಮುಂಡಗೋಡಿನಿಂದ ಯಲ್ಲಾಪುರಕ್ಕೆ ತೆರಳುವ ಕಾರು ಹಾಗೂ ಯಲ್ಲಾಪುರ ಕಡೆಯಿಂದ ಮುಂಡಗೋಡಿನ ಕಡೆಗೆ ಬರುತ್ತಿದ್ದ ಟ್ರಾಕ್ಟರ್ ಗೆ ಮುಖಾಮುಕಿ ಡಿಕ್ಕಿಯಾಗಿದೆ. ಡಿಕ್ಕಿಯಾದ ಕಾರು ಸಿನಿಮಿಯ ರೀತಿಯಲ್ಲಿ ಪಲ್ಟಿಯಾಗಿದೆ. ಯಾವುದೇ ಪ್ರಾಣಾಪಾಯ ಆಗಿರೋ ಮಾಹಿತಿ ತಿಳಿದು ಬಂದಿಲ್ಲ. ಮುಂಡಗೋಡ ಪೊಲೀಸ್...

Post
ಜಸ್ಟ್ ಅದೊಂದು ವಾಟ್ಸಾಪ್ ಕಾಲ್, ಈ ಟಿಬೇಟಿಗನಿಂದ ಆ ವಂಚಕರು ದೋಚಿದ್ದು ಬರೋಬ್ಬರಿ 1 ಕೋಟಿ 61 ಲಕ್ಷ..!

ಜಸ್ಟ್ ಅದೊಂದು ವಾಟ್ಸಾಪ್ ಕಾಲ್, ಈ ಟಿಬೇಟಿಗನಿಂದ ಆ ವಂಚಕರು ದೋಚಿದ್ದು ಬರೋಬ್ಬರಿ 1 ಕೋಟಿ 61 ಲಕ್ಷ..!

 ಮುಂಡಗೋಡ ತಾಲೂಕಿನ ಟಿಬೇಟಿಯನ್ ಕಾಲನಿಯ ಟಿಬೇಟಿಗನೊಬ್ಬ ಡಿಜಿಟಲ್ ವಂಚಕರ ಜಾಲದಲ್ಲಿ ಅನಾಮತ್ತಾಗಿ ತಗಲಾಕ್ಕೊಂಡಿದ್ದಾನೆ. ಮುಂಬೈ ಪೊಲೀಸರ ಹೆಸರಿನಲ್ಲಿ ಬಂದ ಅದೊಂದು ವಾಟ್ಸ್ ಆಪ್ ಕರೆಗೆ ಥರಗುಟ್ಟಿ, ಬರೋಬ್ಬರಿ 1.61 ಕೋಟಿ ರೂಪಾಯಿಯನ್ನು ಅನಾಮತ್ತಾಗಿ ಕಳೆದುಕೊಂಡಿದ್ದಾನೆ. ಎಲ್ಲಾ ಕಳೆದುಕೊಂಡ ಮೇಲೆ ಸೈಬರ್ ಪೊಲೀಸರ ಮೊರೆ ಹೋಗಿದ್ದಾನೆ. ಪಾಪ, ಪೊಲೀಸ್ರು ಅದೇಷ್ಟೇ ಬಡಕೊಂಡ್ರೂ, ಇಂತಹ ವಂಚಕರ ಜಾಲದಲ್ಲಿ ನಿತ್ಯವೂ ಸಿಲುಕಿ ಒದ್ದಾಡುವವರ ಸಾಲಿನಲ್ಲಿ ಮತ್ತೊಬ್ಬ ನಿವೃತ್ತ ಟಿಬೇಟಿಯನ್ ಶಿಕ್ಷಕ ಸೇರಿಕೊಂಡಿದ್ದಾನೆ. ಆತ ಕ್ಯಾಂಪ್ ನಂಬರ್ 8 ರ ನಿವಾಸಿ..!...

Post
ಹುನಗುಂದದಲ್ಲಿ ಬೆಂಕಿ ಅವಘಡ, ಸಿಲಿಂಡರ ಸ್ಪೋಟಗೊಂಡು ಹೊತ್ತಿಉರಿದ ಆಟೋ ರಿಕ್ಷಾ, ಮನೆಗೂ ಹಾನಿ..!

ಹುನಗುಂದದಲ್ಲಿ ಬೆಂಕಿ ಅವಘಡ, ಸಿಲಿಂಡರ ಸ್ಪೋಟಗೊಂಡು ಹೊತ್ತಿಉರಿದ ಆಟೋ ರಿಕ್ಷಾ, ಮನೆಗೂ ಹಾನಿ..!

 ಮುಂಡಗೋಡ ತಾಲೂಕಿನ ಹುನಗುಂದದಲ್ಲಿ ಭಾರೀ ಬೆಂಕಿ ಅವಘಡವಾಗಿದೆ. ಮನೆ ಮುಂದೆ ನಿಲ್ಲಿಸಿಟ್ಟಿದ್ದ ಆಟೋದ ಸಿಲಿಂಡರ್ ಸ್ಪೋಟವಾಗಿ ಬೆಂಕಿಯಿಂದ ಹೊತ್ತಿಉರಿದಿದೆ. ಮನೆಗೂ ಬೆಂಕಿ ತಗುಲಿ ಹಾನಿಯಾಗಿದೆ. ವೀರಭದ್ರಪ್ಪ ಹಡಪದ್ ಎಂಬುವವರಿಗೆ ಸೇರಿದ ಆಟೋ ರಿಕ್ಷಾಗೆ ಮಂಗಳವಾರ ಬೆಳಿಗ್ಗೆ ಸಿಲಿಂಡರ್ ಸ್ಫೋಟಗೊಂಡು ಬೆಂಕಿ ತಗುಲಿದೆ. ಬೆಂಕಿಯ ರಭಸಕ್ಕೆ ಧಗ ಧಗನೇ ಹೊತ್ತಿ ಉರಿದಿದೆ, ಮನೆಗೂ ಬೆಂಕಿ ತಗುಲಿ ಅಪಾರ ಹಾನಿ ಸಂಭವಿಸಿದೆ. ಅದೃಷ್ಟವಶಾತ್ ಯಾವುದೇ ಪ್ರಣಾಪಾಯಗಳು ಸಂಭವಿಸಿಲ್ಲ.

Post
ಚಿಗಳ್ಳಿ ಪ್ರೌಢಶಾಲಾ ಆವರಣದಲ್ಲಿ ಡಿ.26 ರಂದು ಧರಣಿ ಸತ್ಯಾಗ್ರಹಕ್ಕೆ ವಿರೋಧ, ಮನವಿ ಅರ್ಪಣೆ..!

ಚಿಗಳ್ಳಿ ಪ್ರೌಢಶಾಲಾ ಆವರಣದಲ್ಲಿ ಡಿ.26 ರಂದು ಧರಣಿ ಸತ್ಯಾಗ್ರಹಕ್ಕೆ ವಿರೋಧ, ಮನವಿ ಅರ್ಪಣೆ..!

 ಮುಂಡಗೋಡ ತಾಲೂಕಿನ ಚಿಗಳ್ಳಿ ಪ್ರೌಢಶಾಲೆಯ ರಾದ್ಧಾಂತಗಳು ಸದ್ಯಕ್ಕೆ ನಿಲ್ಲುವ ಯಾವ ಸೂಚನೆಗಳೂ ಕಾಣುತ್ತಿಲ್ಲ. ಇನ್ನೇನು ನಾಡಿದ್ದು ಡಿಸೆಂಬರ್ 26 ರಂದು ದಲಿತ ಹಾಗೂ ರೈತ ಮುಖಂಡ ಚಿದಾನಂದ ಹರಿಜನ ಧರಣಿ ಸತ್ಯಾಗ್ರಹ ನಡೆಸುವ ಘೋಷಣೆ ಮಾಡಿದ್ದಾರೆ. ಇತ್ತಿಚೆಗಷ್ಟೆ ಹಲವು ಆರೋಪಗಳ ಹಿನ್ನೆಲೆಯಲ್ಲಿ ಅಮಾನತ್ತುಗೊಂಡಿರೋ ಶಿಕ್ಷಕ ದಾಸಪ್ಪ ಎಂಬುವವರ ಪರವಾಗಿ ಸತ್ಯಾಗ್ರಹ ಮಾಡಲು ಚಿದಾನಂದ ಹರಿಜನ್ ಮುಂದಾಗಿದ್ದು ಚಿಗಳ್ಳಿ ಕೆಲ ಗ್ರಾಮಸ್ಥರು ಹಾಗೂ SDMC ಅಧ್ಯಕ್ಷರು, ಸದಸ್ಯರಿಗೆ ಫೋಷಕರಿಗೆ ಬೇಸರ ತರಿಸಿದೆ. ಹೀಗಾಗಿ, ನಿನ್ನೆ ಅವ್ರೇಲ್ಲ ಸೇರಿಕೊಂಡು...

Post
ಇಂದೂರು ಸೊಸೈಟಿಯ ನೂತನ ಕಛೇರಿ ಕಟ್ಟಡದ ಉದ್ಘಾಟನೆ ನೆರವೇರಿಸಿದ ಶಾಸಕ ಶಿವರಾಮ್ ಹೆಬ್ಬಾರ್..!

ಇಂದೂರು ಸೊಸೈಟಿಯ ನೂತನ ಕಛೇರಿ ಕಟ್ಟಡದ ಉದ್ಘಾಟನೆ ನೆರವೇರಿಸಿದ ಶಾಸಕ ಶಿವರಾಮ್ ಹೆಬ್ಬಾರ್..!

ಮುಂಡಗೋಡ ತಾಲೂಕಿನ ಇಂದೂರ ವಿವಿದ್ದೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ನೂತನ ಕಛೇರಿ ಕಟ್ಟಡದ ಉದ್ಘಾಟನೆ ನಡೆಯಿತು. ಶಾಸಕ ಶಿವರಾಮ್ ಹೆಬ್ಬಾರ್ ನೂತನ ಕಟ್ಟಡದ ಉದ್ಘಾಟನೆ ನೆರವೇರಿಸಿದ್ರು. ಈ ವೇಳೆ ಈ ಹಿಂದಿನ ಅವಧಿಯಲ್ಲಿ ಸಹಕಾರ ಸಂಘದ ಅಧ್ಯಕ್ಷರುಗಳಾಗಿ ಸೇವೆ ಸಲ್ಲಿಸಿದ ಮಹನೀಯರಿಗೆ ಸನ್ಮಾನಿಸಲಾಯಿತು. ಅಲ್ದೆ, ಆಡಳಿತ ಸಮಿತಿಯಿಂದ ಶಾಸಕ ಶಿವರಾಮ್ ಹೆಬ್ಬಾರ್ ರವರಿಗೆ ಸನ್ಮಾನಿಸಲಾಯಿತು. ಉದ್ಘಾಟನಾ ಸಮಾರಂಭದಲ್ಲಿ ಇಂದೂರ ಸೊಸೈಟಿಯ ಅಧ್ಯಕ್ಷ ಯಮನಪ್ಪ ಮಾರಂಬೀಡ, ಕೆಡಿಸಿಸಿ ನಿರ್ದೇಶಕ ಎಚ್.ಎಂ ನಾಯ್ಕ, ಮಾರ್ಕೆಟಿಂಗ್ ಸೊಸೈಟಿ ಅಧ್ಯಕ್ಷ...

Post
ತಡಸ ತಾಯವ್ವನ ದೇವಸ್ಥಾನ ಬಳಿ ಭೀಕರ ಕಾರು ಅಪಘಾತ, ಮುಂಡಗೋಡ ತಹಶೀಲ್ದಾರ ಕಚೇರಿಯ ಓರ್ವ ತಲಾಟಿ ಸ್ಥಳದಲ್ಲೇ ಸಾವು, ಮತ್ತಿಬ್ಬರು ಗಂಭೀರ..!

ತಡಸ ತಾಯವ್ವನ ದೇವಸ್ಥಾನ ಬಳಿ ಭೀಕರ ಕಾರು ಅಪಘಾತ, ಮುಂಡಗೋಡ ತಹಶೀಲ್ದಾರ ಕಚೇರಿಯ ಓರ್ವ ತಲಾಟಿ ಸ್ಥಳದಲ್ಲೇ ಸಾವು, ಮತ್ತಿಬ್ಬರು ಗಂಭೀರ..!

 Car Accident; ಮುಂಡಗೋಡ ತಾಲೂಕಿನ ಗಡಿಭಾಗ ತಡಸ ತಾಯವ್ವನ ದೇವಸ್ಥಾನದ ಸಮೀಪ ಭೀಕರ ಕಾರು ಅಪಘಾತವಾಗಿದೆ. ಪರಿಣಾಮ ಮುಂಡಗೋಡ ತಹಶೀಲ್ದಾರ ಕಚೇರಿ ಓರ್ವ ಗ್ರಾಮ ಲೆಕ್ಕಾಧಿಕಾರಿ ಸ್ಥಳದಲ್ಲೇ ದುರಂತ ಸಾವು ಕಂಡಿದ್ದಾರೆ. ಮತ್ತಿಬ್ಬರಿಗೆ ಗಂಭೀರ ಗಾಯವಾಗಿದೆ. ಮುಂಡಗೋಡ ತಹಶೀಲ್ದಾರ ಕಚೇರಿ ಮೂವರು ಗ್ರಾಮ ಲೆಕ್ಕಾಧಿಕಾರಿಗಳಾದ ಗೋಪಾಲ್ ಎಂ, ಗೋವಿಂದ್ ರಾಠೋಡ್ ಹಾಗೂ ಮಂಜುನಾಥ್ ಎಂಬುವವರು ಪ್ರಯಾಣಿಸುತ್ತಿದ್ದ ಕಾರು, ನಿನ್ನೆ ಸಂಜೆ ಹುಬ್ಬಳ್ಳಿಯಿಂದ ಮುಂಡಗೋಡ ಕಡೆಗೆ ಬರುತ್ತಿದ್ದಾಗ ಘಟನೆ ಸಂಭವಿಸಿದೆ‌ ನಿನ್ನೆ ರಾತ್ರಿ ನಡೆದಿರೋ ದುರಂತ ಇದಾಗಿದ್ದು,...