ಮುಂಡಗೋಡ ಪಟ್ಟಣದ ಬೆಂಡಿಗೇರಿ ಪೆಟ್ರೊಲ್ ಬಂಕ್ ಹತ್ತಿರ ಭೀಕರ ಅಪಘಾತವಾಗಿದೆ. ಪೆಟ್ರೊಲ್ ತುಂಬಿಸಿಕೊಂಡು ಬರುತ್ತಿದ್ದ ಲೂನಾ ಎಕ್ಸೆಲ್ ಬೈಕ್ ಗೆ ಡಿಕ್ಕಿಯಾಗಿದೆ. ಪರಿಣಾಮ ಲೂನಾ ಎಕ್ಸೆಲ್ ಸವಾರನ ಬಲಗಾಲು ಕಟ್ ಆಗಿದ್ದು ಗಂಭೀರ ಗಾಯವಾಗಿದೆ. ಚೌಡಳ್ಳಿಯ ಸಹದೇವ್ ಮಾಯಣ್ಣವರ (65) ಎಂಬುವವರೇ ಅಪಘಾತಕ್ಕೀಡಾಗಿದ್ದಾರೆ. ಸದ್ಯ ತಾಲೂಕಾಸ್ಪತ್ರೆಗೆ ದಾಕಲಿಸಿ ಚಿಕಿತ್ಸೆ ನೀಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಗೆ ರವಾನಿಸಲಾಗಿದೆ. ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.