ಶಿರಸಿ: ರಾಜ್ಯದ ಹಲವು ಜಿಲ್ಲೆಗಳಲ್ಲಿ ಅನ್ ಲಾಕ್ 2.0 ಜಾರಿಯಾಗಿದ್ದು, ಉತ್ತರ ಕನ್ನಡ ಜಿಲ್ಲೆಯಲ್ಲಿ ಕೂಡ ಇದರ ಭಾಗವಾಗಿ ಸಾರಿಗೆ ಬಸ್ ಸಂಚಾರ ಪ್ರಾರಂಭವಾಗಿದೆ. ಜಿಲ್ಲೆಯ ವಾಯವ್ಯ ಸಾರಿಗೆ ಸಂಸ್ಥೆಯ ಮುಖ್ಯ ಘಟಕವಾದ ಶಿರಸಿಯಿಂದ ಬಸ್ ಗಳು ಕಾರ್ಯ ಆರಂಭಿಸಿವೆ.
ಉತ್ತರ ಕನ್ನಡ ಜಿಲ್ಲೆಯ ಶಿರಸಿಯಿಂದ ಈಗಾಗಲೇ ಬಸ್ ಗಳು ಸಂಚಾರವನ್ನ ಆರಂಭಿಸಿದ್ದು, ಸದ್ಯಕ್ಕೆ ಜಿಲ್ಲೆಯಿಂದ ಜಿಲ್ಲೆಗಳಿಗೆ, ತಾಲೂಕುಗಳಿಂದ ತಾಲೂಕುಗಳಿಗೆ ಮಾತ್ರ ಬಸ್ ಗಳು ಸಂಚಾರ ಪ್ರಾರಂಭಿಸಿವೆ.
ಆದ್ರೆ ಪ್ರಯಾಣಿಕರ ಕೊರತೆ ಸಾರಿಗೆ ಸಂಸ್ಥೆಯನ್ನ ಕಾಡುತ್ತಿದೆ. ಪ್ರಯಾಣಿಕರಿಲ್ಲದೆ ಬಸ್ ನಿಲ್ದಾಣಗಳು ಬಿಕೋ ಎನ್ನುತ್ತಿವೆ. ಸದ್ಯಕ್ಕೆ ಪ್ರಯಾಣಿಕರ ಸಂಖ್ಯೆಗೆ ಅನುಗುಣವಾಗಿ ಬಸ್ ಓಡಿಸಲಾಗುತ್ತಿದೆ. ಸರ್ಕಾರದ ನಿಯಮಗಳಿಗೆ ಅನುಗುಣವಾಗಿ ಬಸ್ ಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಂಡು ಬಸ್ ಗಳನ್ನ ಓಡಿಸಲಾಗುತ್ತಿದೆ.
ಇನ್ನು, ಗ್ರಾಮೀಣ ಭಾಗಗಳಿಗೆ ಬಸ್ ಸಂಚಾರವನ್ನ ಜನರ ರೆಸ್ಪಾನ್ಸ್ ನೋಡಿಕೊಂಡು ಪ್ರಾರಂಭಿಸಲಾಗುತ್ತೆ ಅಂತಾ KSRTC ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.