ಮುಂಡಗೋಡಿನ ಹಿರಿಯ ಮುಖಂಡ, ಸಮಾಜ ಸೇವಕ, ಸಾಯಿ ಮಂದಿರದ ಭಕ್ತ ಮಂಡಳಿಯ ಪ್ರಮುಖರಾದ ಅಶೋಕ ಗೋಕರ್ಣ ವಿಧಿವಶರಾಗಿದ್ದಾರೆ. ಅನಾರೋಗ್ಯದಿಂದ ಇಂದು ಸೋಮವಾರ ಬೆಳಗಿನ ಜಾವ ಇಹಲೋಕ ತ್ಯಜಿಸಿದ್ದಾರೆ.
ಮುಂಡಗೋಡಿನ ಬಸ್ ನಿಲ್ದಾಣದ ಹತ್ತಿರ ತಮ್ಮದೇ ಜಾಗದಲ್ಲಿ ಸಾಯಿ ಮಂದಿರ ನಿರ್ಮಿಸಿ, ಸಾಯಿ ಭಗವಾನರ ಮೂರ್ತಿ ಪ್ರತಿಷ್ಠಾಪಿಸಿದ್ದರು. ಪತ್ನಿ ಹಿರಿಯ ಆಕಾಶವಾಣಿ ಸಂಗೀತ ಕಲಾವಿದೆ ಭಾರತಿ ಗೋಕರ್ಣರವರ ಮುಖಾಂತರ ಸಾಯಿ ಮಂದಿರದಲ್ಲಿ ಪ್ರತೀ ಗುರುವಾರ ಸತ್ಸಂಗ ನಡೆಸುತ್ತಿದ್ದರು. ಹೀಗಾಗಿ, ತಾಲೂಕಿನ ಸಾಯಿ ಭಕ್ತರ ಪಾಲಿಗೆ ಭಕ್ತ ಬಂಧುಗಳಾಗಿದ್ದರು.
ಹೀಗಾಗಿ, ಅಶೋಕ ಗೋಕರ್ಣರವರ ನಿಧನಕ್ಕೆ ಮುಂಡಗೋಡಿನ ಹಲವು ಧಾರ್ಮಿಕ ಮುಖಂಡರು, ಸಾಯಿ ಭಕ್ತ ಬಳಗ ಸೇರಿದಂತೆ ಹಲವರು ಕಂಬನಿ ಮಿಡಿದಿದ್ದಾರೆ.