ತಡಸ ತಾಯವ್ವನ ಸನ್ನಿಧಿಯಲ್ಲಿ ಬೆಂಕಿ ಹಚ್ಚಿಕೊಂಡಿದ್ದ ಯುವಕ ಚಿಕಿತ್ಸೆ ಫಲಿಸದೇ ಸಾವು..!  ಪ್ರೀತಿ ನಿರಾಕರಿಸಿದ್ದಕ್ಕೆ ಪ್ರಾಣ ಕಳೆದುಕೊಂಡನಾ ಪ್ರೇಮಿ..?

ಮುಂಡಗೋಡ ತಾಲೂಕಿನ ವಡಗಟ್ಟಾ ಸಮೀಪದ ತಾಯವ್ವನ ದೇವಸ್ಥಾನದ ಹತ್ತಿರ,
ಪೆಟ್ರೊಲ್ ಸುರಿದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ಪಾಗಲ್ ಪ್ರೇಮಿ ಮೃತಪಟ್ಟಿದ್ದಾನೆ ಅನ್ನೋ ಮಾಹಿತಿ ಲಭ್ಯವಾಗಿದೆ. ಹುಬ್ಬಳ್ಳಿಯ ಕಿಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಹಡುಗ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ.

ಅಂದಹಾಗೆ, ನಿನ್ನೆ ಅಂದ್ರೆ ಶುಕ್ರವಾರ ಮದ್ಉಅನ ಮುಂಡಗೋಡ ತಾಲೂಕಿನ ವಡಗಟ್ಟಾ ಸಮೀಪದ ತಾಯವ್ವನ ದೇವಸ್ಥಾನದ ಹತ್ತಿರ ನಡೆಯಬಾರದ ಘಟನೆಯೊಂದು ನಡೆದಿತ್ತು. ಪ್ರೀತ್ಸೆ ಪ್ರೀತ್ಸೆ ಅಂತಾ ಪ್ರಾಣ ತಿಂದ ಯುವಕನೋರ್ವ ಆ ಯುವತಿಯ ಕಣ್ಣೇದುರೇ ಪೆಟ್ರೊಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ. ಹುಬ್ಬಳ್ಳಿ ತಾಲೂಕಿನ ಬೆಳಗಲಿ ಗ್ರಾಮದ ಪ್ರವೀಣ್ ಬೆಟದೂರ್ ಎಂಬುವವ ತನ್ನ‌ ಪ್ರೇಯಸಿಯ ಎದುರೇ ಪೆಟ್ರೊಲ್ ಸುರಿದು ಬೆಂಕಿ ಹಚ್ಚಿಕೊಂಡಿದ್ದ. ಹೀಗಾಗಿ, ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಗೆ ದಾಖಲಿಸಲಾಗಿತ್ತು. ಆದ್ರೆ, ಚಿಕಿತ್ಸೆ ಫಲಿಸದೇ ಪ್ರವೀಣ್ ಸಾವನ್ನಪ್ಪಿದ್ದಾನೆ.

ತಡಸ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

error: Content is protected !!