ಮುಂಡಗೋಡ ತಾಲೂಕಿನ ಶಿಂಗನಳ್ಳಿಯಲ್ಲಿ ಬೆಳ್ಳಂ ಬೆಳಿಗ್ಗೆ ಅಡಿಕೆ ಕಳ್ಳರು ಕರಾಮತ್ತು ತೋರಿಸಿದ್ದಾರೆ. ಮನೆಯ ಅಂಗಳದಲ್ಲಿ ರಾಶಿ ಮಾಡಿದ್ದ ಸುಮಾರು 8 ಕ್ವಿಂಟಾಲ್ ಅಡಿಕೆಯನ್ನು ಅನಾಮತ್ತಾಗಿ ಕದ್ದೊಯ್ದಿದ್ದಾರೆ. ಹಾಗೆ ಕದ್ದು ಒಯ್ದಿರೋ ಅಡಿಕೆಯ ಅಂದಾಜು ಮೌಲ್ಯ ಏನಿಲ್ಲವೆಂದ್ರೂ ಮೂರೂವರೇ ಲಕ್ಷಕ್ಕೂ ಹೆಚ್ಚು. ಹೀಗಾಗಿ , ಈ ಭಾಗದ ಜನ ಕಂಗಾಲಾಗಿದ್ದಾರೆ.
ಅಂದಹಾಗೆ, ಸಿಂಗನಳ್ಳಿಯ ರೈತ ಪ್ರಭು ಪಾಟೀಲ್ ಎಂಬುವವರ ಅಡಿಕೆ ಕಳ್ಳತನವಾಗಿದೆ. ಇವರ ಮನೆ ಪಕ್ಕದಲ್ಲೇ ಕಣ ಮಾಡಿ ಅಡಿಕೆ ಒಣಗಲು ಇಡಲಾಗಿತ್ತು. ಇದನ್ನು ಗಮನಿಸಿರೋ ಅಡಿಕೆ ಕಳ್ಳರು ರಸ್ತೆ ಪಕ್ಕದಲ್ಲೇ ವಾಹನ ನಿಲ್ಲಿಸಿ ಅಡಿಕೆ ಕದ್ದೊಯ್ದಿದ್ದಾರೆ. ಖಾಲಿ ಚೀಲಗಳನ್ನು ಅಲ್ಲೇ ಬಿಟ್ಟು ಹೋಗಿದ್ದಾರೆ.
ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.