ಮುಂಡಗೋಡ ತಾಲೂಕಿನ ಚಿಗಳ್ಳಿ ಭಾಗದಲ್ಲಿ ಬಿಜೆಪಿಗೆ ಕಾಂಗ್ರೆಸ್ ಠಕ್ಕರ್ ಕೊಟ್ಟಿದೆ. ಚಿಗಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಕೆಲವೇ ಗಂಟೆಗಳಲ್ಲಿ ಕಾಂಗ್ರೆಸ್ ನಿಂದ “ಅಪರೇಶನ್ ಹಸ್ತ” ನಡೆದು ಹೋಗಿದೆ ಪರಿಣಾಮ ಹಲವು ಬಿಜೆಪಿಗರು ಅನಾಯಾಸವಾಗಿ “ಕೈ” ವಶವಾಗಿದ್ದಾರೆ.
ಚಿಗಳ್ಳಿಯ ಸಹಕಾರಿ ಧುರೀಣ, ಬಿಜೆಪಿ ಮುಖಂಡ ಅಶೋಕ ಶಿರ್ಮಾಪುರ, ಮಹಾದೇವ ಬಯಲವಾಡ, ಚಂದ್ರು ಅಜ್ಜಳ್ಳಿ, ಸಂಪತ್ ಕೆಮೋಜ್ಜಿ, ರಾಮಚಂದ್ರ ನಿಂಬಾಯಿ, ನಾಮದೇವ ಜಾಧವ, ನಾಗಣ್ಣ ಹಂಚಿನಮನಿ, ಬಾಬುರಾಯ್ ಆಲದಕಟ್ಟಿ ಸೇರಿದಂತೆ ಹಲವರು, ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ.
ಮಾಜಿ ಶಾಸಕ ವಿ.ಎಸ್.ಪಾಟೀಲ್ ಹಾಗೂ ಯುವ ನಾಯಕರು, ಕೆ.ಪಿ.ಸಿ.ಸಿ ಸದಸ್ಯ ವಿವೇಕ್ ಹೆಬ್ಬಾರ್ ಸಮ್ಮುಖದಲ್ಲಿ ಪಕ್ಷ ಸೇರ್ಪಡೆಗೊಂಡ ಮುಖಂಡರು ಅಚ್ಚರಿ ಮೂಡಿಸಿದ್ದಾರೆ.
ಈ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಹಿರೇಹಳ್ಳಿ, ನಿಕಟಪೂರ್ವ ಅಧ್ಯಕ್ಷ ಜ್ಞಾನೇಶ್ವರ ಗುಡಿಹಾಳ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ತಾಲೂಕಾಧ್ಯಕ್ಷ ರಾಜಶೇಖರ ಹಿರೇಮಠ, ಪ್ರಮುಖರಾದ ಎಚ್.ಎಮ್.ನಾಯ್ಕ, ರವಿಗೌಡ ಪಾಟೀಲ್, ಎಮ್.ಪಿ.ಕುಸೂರ, ಗುಡ್ಡಪ್ಪ ಕಾತೂರ, ನಾಗಭೂಷಣ ಹಾವಣಗಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.