ಮುಂಡಗೋಡ ತಾಲೂಕಿನಲ್ಲಿ ಒಳಗೊಳಗೇ ಒಂದಿಷ್ಟು ರಾಜಕೀಯ ಮೇಲಾಟಗಳು ಜಾರಿಯಲ್ಲಿವೆ. ದಿಢೀರ್ ಎಂಬಂತೆ ಚಿಗಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಪುಷ್ಪಾ ಕಲ್ಮೇಶ್ ಗೋಸಾವಿ ಗೋಳೋ ಅಂತಾ ಕಣ್ಣೀರು ಹಾಕ್ತಾ, ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದಾರೆ‌. ಬಿಜೆಪಿ ಮುಖಂಡ ಎಲ್ಟಿ ಪಾಟೀಲರ ನಿವಾಸದಲ್ಲಿ ಬಿಜೆಪಿ ಮಂಡಲಾಧ್ಯಕ್ಷ ಮಂಜುನಾಥ ಪಾಟೀಲರ ಸಮ್ಮುಖದಲ್ಲಿ ಕಮಲ ಮುಡಿದಿದ್ದಾರೆ. ಹೀಗಾಗಿ, ಚಿಗಳ್ಳಿ ಗ್ರಾಮ ಪಂಚಾಯತಿಯಲ್ಲಿ ಈಗ ಅಧ್ಯಕ್ಷರ ಬದಲಾವಣೆಯ ಗುಮ್ಮ ಬಹುತೇಕ ತಣ್ಣಗಾಗುವ ಲಕ್ಷಣಗಳಿವೆ.

ಅಸಲು, 13 ಸದಸ್ಯ ಬಲದ ಚಿಗಳ್ಳಿ ಗ್ರಾಮ ಪಂಚಾಯತಿಯಲ್ಲಿ ಕಾಂಗ್ರೆಸ್ ಬೆಂಬಲಿತ 8 ಸದಸ್ಯರಿದ್ದಾರೆ. ಬಿಜೆಪಿ ಬೆಂಬಲಿತ ಐವರು ಸದಸ್ಯರು ಗೆದ್ದು ಬಂದಿದ್ದಾರೆ. ಹೀಗಾಗಿ, ಸಹಜವಾಗೇ ಕಾಂಗ್ರೆಸ್ಸಿನ ಪುಷ್ಪಾ ಕಲ್ಮೇಶ್ ಗೋಸಾವಿ ಒಂದು ವರ್ಷದ ಹಿಂದೆ, ಅಧ್ಯಕ್ಷ ಪದವಿ ಗಿಟ್ಟಿಸಿಕೊಂಡಿದ್ದರು. ಆದ್ರೆ, ಅದ್ಯಾಕೋ ಏನೋ ಕಾಂಗ್ರೆಸ್ಸಿನ ಕೆಲವ್ರಿಗೆ ಪುಷ್ಪಾ ಮೇಡಮ್ಮು ಅಧ್ಯಕ್ಷ ಗಾದಿಯಲ್ಲಿರೋದು ಬೇಡವಾಗಿತ್ತಂತೆ.

ಮಾನಸಿಕ ಹಿಂಸೆ ಕೊಟ್ರಾ..?
ಹೀಗಾಗಿನೇ ನಂಗೆ ತುಂಬಾ ಹರ್ಯಾಷ್ಮೆಂಟ್ ಮಾಡ್ತಿದಾರೆ. ರಾಜೀನಾಮೆ ಕೊಡಿ ಅಂತಾ ನಿತ್ಯವೂ ಮಾನಸಿಕ ಹಿಂಸೆ ಕೊಡ್ತಿದಾರೆ ಅಂತಾ ಕೆಲ ಕಾಂಗ್ರೆಸ್ ನಾಯಕರ ವಿರುದ್ಧ ಅಧ್ಯಕ್ಷೆ ಪುಷ್ಪಾ ಆರೋಪಿಸಿದ್ರು. ಪಬ್ಲಿಕ್ ಫಸ್ಟ್ ಎದುರು ಗೋಳೋ ಅಂತ ಕಣ್ಣೀರು ಹಾಕಿದ್ರು.

ಎಲ್ಟಿ ಪಾಟೀಲ್ ಅಭಯ..!
ಅಂದಹಾಗೆ, ಚಿಗಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಬಿಜೆಪಿ ಸೇರ್ಪಡೆಯ ಹಿಂದೆ, ಬಿಜೆಪಿ ಮುಖಂಡ ಹಾಗೂ ಚಿಗಳ್ಳಿ ಭಾಗದ ಪ್ರಭಾವಿ ನಾಯಕ ಎಲ್ಟಿ ಪಾಟೀಲರ “ಅಭಯ” ಕೆಲಸ ಮಾಡಿದೆ. ನಾವಿದ್ದೇವೆ ಭಯ ಬೇಡ ಅನ್ನೋ ಭರವಸೆ, ಅಧ್ಯಕ್ಷರ ಬದಲಾವಣೆ “ಹಾದಿಗೆ” ನಾದಿ ಹಾಡಿದೆ. ಹೀಗಾಗಿ, ಖುದ್ದು ಎಲ್ಟಿ ಪಾಟೀಲರೇ ಅಧ್ಯಕ್ಷೆ ಪುಷ್ಪಾರವರನ್ನು ಪಕ್ಷಕ್ಕೆ ಬರಮಾಡೊಂಡ್ರು.

error: Content is protected !!