ಮುಂಡಗೋಡ: ತಾಲೂಕಿನ ಬೆಡಸಗಾಂವ ವ್ಯವಸಾಯ ಸೇವಾ ಸಹಕಾರಿ ಸಂಘದ ಚುನಾವಣೆ ಮುಗಿದಿದೆ. ಇನ್ನೇನು ಚುನಾವಣೆಯ ಮತ ಎಣಿಕೆ ಕಾರ್ಯ ಮಾತ್ರ ಬಾಕಿ ಉಳಿದಿದೆ. ಹೀಗಿರೋವಾಗಲೇ ಧಾರವಾಡ ಹೈಕೋರ್ಟ್ ಪೀಠ ಚುನಾವಣೆಯ ಮತ ಎಣಿಕೆ ಕಾರ್ಯಕ್ಕೆ ತಡೆಯಾಜ್ಞೆ ನೀಡಿದೆ.
ಏನಾಯ್ತು..?
ಅಂದಹಾಗೆ, ಈಗ ತಾಲೂಕಿನೆಲ್ಲೆಡೆ ವ್ಯವಸಾಯ ಸೇವಾ ಸಹಕಾರಿ ಸಂಘಗಳ ಚುನಾವಣೆ ನಡೀತಿದೆ. ಇಡೀ ತಾಲೂಕಿನಲ್ಲಿ ಈ ಚುನಾವಣೆ ಅನ್ನೋದು ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ಜಿದ್ದಾಜಿದ್ದಿಗೆ ಸಾಕ್ಷಿಯಾಗಿದೆ. ಈ ಕಾರಣಕ್ಕಾಗಿ, ಹೇಗಾದ್ರೂ ಸರಿ ಅಧಿಕಾರದ ಚುಕ್ಕಾಣಿ ನಮ್ಮ ಸುಪರ್ದಿಯಲ್ಲೇ ಇರಬೇಕು ಅಂತ ಎರಡೂ ರಾಜಕೀಯ ಪಕ್ಷಗಳು ಮುಗಿಬಿದ್ದಿವೆ. ಹೀಗಾಗಿ, ಬೆಡಸಗಾಂವ ವ್ಯವಸಾಯ ಸೇವಾ ಸಹಕಾರಿ ಸಂಘದ ಚುನಾವಣೆ ಮಂಗಳವಾರ ಬೆಳಗ್ಗೆ 9 ರಿಂದ ಸಂಜೆ 4 ಗಂಟೆಯ ವರೆಗೂ ನಡೆಯಿತು. ನಂತರ ಮತ ಎಣಿಕೆ ಕಾರ್ಯವನ್ನು ನಡೆಸಬೇಕಿತ್ತು. ಆದರೆ ಮತದಾನದ ಅನರ್ಹತೆಯಾದಿಯಲ್ಲಿನ ರೈತರು ಹಾಗೂ ಸಂಘದ ಸದಸ್ಯರು ಒಟ್ಟು ಹತ್ತೊಂಬತ್ತು ಜನರು ನಮಗೆ ಮತದಾನದ ಹಕ್ಕು ಬೇಕು ಎಂದು ಧಾರವಾಡ ಹೈಕೋರ್ಟ ಮೇಟ್ಟಿಲೇರಿದ್ದರು.
ಹೀಗಾಗಿ ನ್ಯಾಯಾಲಯವೂ 19ಜನರಿಗೆ ಮತದಾನದ ಅವಕಾಶ ನೀಡಬೇಕು ಹಾಗೂ ಮುಂದಿನ ಆದೇಶದ ವರೆಗೂ ಮತ ಎಣಿಕೆಯನ್ನು ಮಾಡಬಾರದು ಅಂತ ಆದೇಶ ನೀಡಿದೆ. ಇದರಿಂದ ಸಂಜೆ ನಾಲ್ಕು ಗಂಟೆಯ ನಂತರ ನಡೆಯಬೇಕಿದ್ದ ಮತ ಎಣಿಕೆ ಕಾರ್ಯ ತಡೆಯಾಗಿದ್ದು ಬೀಗಿ ಭದ್ರತೆಯಲ್ಲಿ ಮತಪೆಟ್ಟಿಗೆಯನ್ನು ಇಡಲಾಯಿತು.