ಕಲಘಟಗಿ: ತಾಲೂಕಿನ ಅಸ್ತಕಟ್ಟಿ ಗ್ರಾಮದಲ್ಲಿ ಸಿಡಿಲಿಗೆ ಓರ್ವ ಯುವತಿ ಬಲಿಯಾಗಿದ್ದಾಳೆ. ಕು.ಲಕ್ಷ್ಮೀ ವಿರೂಪಾಕ್ಷಪ್ಪ ಪಾಟೀಲ್(18) ಸಿಡಿಲಿಗೆ ಬಲಿಯಾದವಳಾಗಿದ್ದಾಳೆ. ನಿನ್ನೆ ರಾತ್ರಿ ಸುರಿದ ಗುಡುಗು, ಸಿಡಿಲು, ಮಿಂಚು ಸಹಿತ ಭಾರೀ ಮಳೆಗೆ ಯುವತಿ ಬಲಿಯಾಗಿದ್ದು ದುರಂತ ಸಾವು ಕಂಡಿದ್ದಾಳೆ. ಅಂದಹಾಗೆ, ಮೃತ ಲಕ್ಷ್ಮೀ ದ್ವಿತೀಯ ಪಿಯುಸಿ ಯಲ್ಲಿ ವ್ಯಾಸಂಗ ಮಾಡುತಿದ್ದಳು. ನಿನ್ನೆ ರಾತ್ರಿ 10 ಗಂಟೆಯ ಸುಮಾರಿಗೆ ಮನೆಯ ಒಳಗೆ ಇದ್ದಾಗ, ಏಕಾಏಕಿ ಲಕ್ಷ್ಮೀಯ ಎದೆಗೆ ಸಿಡಿಲು ಬಡಿದಿದೆ ಎನ್ನಲಾಗಿದೆ. ಹೀಗಾಗಿ, ಸ್ಥಳದಲ್ಲೇ ಯುವತಿ ಸಾವನ್ನಪ್ಪಿದ್ದಾಳೆ. ಕಳೆದ ಮೂರು ತಿಂಗಳ ಹಿಂದೆ ಅನಾರೋಗ್ಯದಿಂದ ಈಕೆಯ ತಾಯಿ ಸಾವನ್ನಪ್ಪಿದ್ದಳು. ಈಗ ವಿಧಿಯು ಸಿಡಿಲಿನ ರೂಪದಲ್ಲಿ ಯುವತಿಯನ್ನು ಬಲಿ ಪಡೆದಿದೆ. ಹೀಗಾಗಿ, ಮೊದಲೇ ತೀರ್ವ ಆರ್ಥಿಕ ಸಂಕಷ್ಟದಲ್ಲಿರೋ ಕುಟುಂಬಕ್ಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಬೇಟಿ ನೀಡಿ ಪರಿಶೀಲಿಸಿದ್ದಾರೆ.
Top Stories
ಹಳಿಯಾಳದಲ್ಲಿ ಕಬ್ಬು ಬೆಳೆಗಾರರು ಮತ್ತು ಸಕ್ಕರೆ ಕಾರ್ಖಾನೆ ಪ್ರತಿನಿಧಿಗಳೊಂದಿಗೆ ಡಿಸಿ ಸಭೆ: ಪ್ರಮುಖ ನಿರ್ಣಯಗಳು
ಸಲ್ಮಾನ್ ಖಾನ್ಗೆ ಕೊಲೆ ಬೆದರಿಕೆ ಹಾಕಿದ ಆರೋಪಿ ಹಾವೇರಿಯಲ್ಲಿ ಅಂದರ್
ತೆರವಾದ ಗ್ರಾ.ಪಂ. ಸದಸ್ಯ ಸ್ಥಾನಗಳಿಗೆ ಉಪ ಚುನಾವಣೆ: ವೇಳಾಪಟ್ಟಿ ಪ್ರಕಟ, ನಾಳೆ ಬುಧವಾರದಿಂದಲೇ ಅಧಿಸೂಚನೆ..!
ಪತ್ನಿಯ ತವರು ಮನೆ ಎದುರೇ ಪೆಟ್ರೊಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ಅರವಿಂದ್ ಸಾವು..! ಅಯ್ಯೋ ಈ ಸಾವು ನ್ಯಾಯವೇ..!
ಕೊಪ್ಪ (ಇಂದೂರು)ನಲ್ಲಿ ಪತ್ನಿಯ ತವರು ಮನೆ ಎದುರೇ ಪೆಟ್ರೊಲ್ ಸುರಿದುಕೊಂಡ ಪತಿ ಆತ್ಮಹತ್ಯೆಗೆ ಯತ್ನ..! ಗಂಭೀರ ಗಾಯ, ಕಿಮ್ಸ್ ಗೆ ದಾಖಲು..!
ಮುಂಡಗೋಡ ಹಳೂರಿನ ಹೋರಿ ಹಬ್ಬ ಅರ್ದಕ್ಕೆ ಬಂದ್..!
ಚಿಗಳ್ಳಿ ಹೋರಿಹಬ್ಬಕ್ಕೆ ಯುವಕ ಬಲಿ, ಹೋರಿ ತಿವಿದು 21 ವರ್ಷದ ಹುಡುಗನ ಭಯಾನಕ ಸಾವು.!
ಮುಂಡಗೋಡ ಪಟ್ಟಣದಲ್ಲೇ ಬೈಕ್ ಅಪಘಾತ, ಹಬ್ಬಕ್ಕೆಂದು ಬಂದಿದ್ದ ಹಳೂರಿನ ಯುವಕನಿಗೆ ಗಂಭೀರ ಗಾಯ..!
ಶಿಗ್ಗಾವಿ ಉಪಸಮರ: ಖಾದ್ರಿ ಮನವೊಲಿಸಲು ಜಮೀರ್ ಸರ್ಕಸ್: ಶ್ರೀನಿವಾಸ್ ಮಾನೆ ಜೊತೆ ಸಂಧಾನ..! ನಾಮಪತ್ರ ವಾಪಸ್ ಪಡೀತಾರಾ ಅಜ್ಜಂಫೀರ್..?
ಶಿಗ್ಗಾವಿ 19 ಅಭ್ಯರ್ಥಿಗಳ ನಾಮಪತ್ರ ಅಂಗೀಕಾರ; ಮಂಜುನಾಥ ಕುನ್ನೂರ ಸೇರಿ 7 ನಾಮಪತ್ರ ತಿರಸ್ಕೃತ
ಅಂದಲಗಿಯಲ್ಲಿ ರೈತನ ಮೇಲೆ ಕರಡಿ ದಾಳಿ, ಆಸ್ಪತ್ರೆಗೆ ದಾಖಲು..!
ಶಿಗ್ಗಾವಿ ವಿಧಾನಸಭಾ ಕ್ಷೇತ್ರ: ಕೊನೆಯದಿನ 20 ಅಭ್ಯರ್ಥಿಗಳಿಂದ 25 ನಾಮಪತ್ರ ಸಲ್ಲಿಕೆ” ಈವರೆಗೆ 26 ಅಭ್ಯರ್ಥಿಗಳಿಂದ 46 ನಾಮಪತ್ರ..!
ಶಿಗ್ಗಾವಿಗೆ ಕೈ ಅಭ್ಯರ್ಥಿಯಾಗಿ ವಿನಯ್ ಕುಲಕರ್ಣಿ ಸುಪುತ್ರಿ ವೈಶಾಲಿ ಕುಲಕರ್ಣಿ..!
ಮುಂಡಗೋಡ ತಾಲೂಕಿನಲ್ಲಿ ಸೋಮವಾರದ ರಣಭೀಕರ ಮಳೆಗೆ ಭಾರೀ ದುರಂತ..?
ಕೆರೆಯಲ್ಲಿ ನಾಪತ್ತೆಯಾಗಿದ್ದ ಬಾಲಕ ಶವವಾಗಿ ಪತ್ತೆ..! ಸಾಲಗಾವಿಯಲ್ಲಿ ಘಟನೆ
ಸಾಲಗಾಂವಿಯಲ್ಲಿ ಮಳೆಯ ಅರ್ಭಟ, ತುಂಬಿದ ಕೆರೆ, ನೋಡಲು ಹೋದ ಬಾಲಕ ಕೆರೆಯಲ್ಲೇ ನಾಪತ್ತೆ..!
ಕ್ಷುಲಕ ಕಾರಣಕ್ಕೆ ಯುವಕನಿಗೆ ಚಾಕು ಇರಿತ: ಓರ್ವನ ಬಂಧನ, ಉಳಿದವರಿಗಾಗಿ ಶೋಧ..!
ಶಿಗ್ಗಾವಿ ಉಪ ಚುನಾವಣೆ: JDS ಪ್ರಬಲಗೊಳಿಸಲು ಬಂದಿಳಿದ ನಿಖಿಲ್ ಕುಮಾರಸ್ವಾಮಿ..!
ಶಿಗ್ಗಾವಿ ಉಪಚುನಾವಣೆ: ಬಿಜೆಪಿ, ಕಾಂಗ್ರೆಸ್ ನಲ್ಲಿ ಟಿಕೆಟ್ ಹಂಚಿಕೆಯೇ ಸವಾಲು..! ಯಾರಿಗೆ ಸಿಗತ್ತೆ ಟಿಕೆಟ್..?
ರಾತ್ರಿಯ ಭಯಂಕರ ಮಳೆಗೆ ಯುವತಿ ಬಲಿ, ಮನೆಯಲ್ಲಿದ್ದ ಯುವತಿಗೆ ಸಿಡಿಲು ಬಡಿದು ಸಾವು..!
ಕಾತೂರಿನಿಂದ ಹಾನಗಲ್ ಅಡ್ಡೆಗೆ ಸಾಗಿಸಿದ್ದ ಕಟ್ಟಿಗೆ ಕೇಸ್ ತನಿಖೆ ಏನಾಯ್ತು..? ಅಷ್ಟಕ್ಕೂ, ಆ ಕಟ್ಟಿಗೆ ಕಾತೂರಿನ ಆ ಫಾರೆಸ್ಟರನದ್ದಾ..?
ಮುಂಡಗೋಡ: ತಾಲೂಕಿನ ಕಾತೂರು ಅರಣ್ಯ ವ್ಯಾಪ್ತಿಯ ಅಧಿಕಾರಿಗಳಿಗೆ ಅದೇನಾಗಿದೆಯೋ ಗೊತ್ತಿಲ್ಲ. ಅಲ್ಲಿನ ಹಲವು ಸಂಗತಿಗಳು ಬಗೆದಷ್ಟು ಹೊರಬೀಳುತ್ತಿವೆ. ಅಸಲು, ಕಾತೂರು ಅರಣ್ಯ ಇಲಾಖೆಯಲ್ಲೇ ಕಾರ್ಯ ನಿರ್ವಹಿಸ್ತಿರೋ ಅವನೊಬ್ಬ ಅಧಿಕಾರಿಯಿಂದ ಹಾವೇರಿ ಜಿಲ್ಲೆಯ ಹಾನಗಲ್ಲಿನ ಅದೊಂದು ಕಟ್ಟಿಗೆ ಅಡ್ಡೆ ಅನಾಮತ್ತಾಗಿ ಸೀಜ್ ಆಗಿದೆ. ಅಂದಹಾಗೆ ಇದು ಇವತ್ತಿನ ಮಾತಲ್ಲ. ಸರಿಸುಮಾರು ಕಳೆದ ಎಪ್ರೀಲ್ ಕೊನೆಯ ವಾರದಲ್ಲಿ ನಡೆದಿದ್ದ ಘಟನೆ ಈಗ ಅಕ್ಷರಶಃ ಕೊನೆಯ ಮೊಳೆ ಬೀಳುವ ಹಂತದಲ್ಲಿದೆಯಂತೆ. ಅಷ್ಟಕ್ಕೂ ನಡೆದದ್ದೇನು..? ಹಾವೇರಿ ಜಿಲ್ಲೆಯ ಹಾನಗಲ್ಲಿನ ಅದೊಂದು ಕಟ್ಟಿಗೆ ಅಡ್ಡೆಗೆ ಕಾತೂರು ಅರಣ್ಯದಿಂದ ಎಪ್ರೀಲ್ ತಿಂಗಳಲ್ಲಿ ಕಟ್ಟಿಗೆ ಸಾಗಿಸಿರಲಾಗಿರತ್ತೆ. ಆ ಹೊತ್ತಲ್ಲಿ ಖಚಿತ ಮಾಹಿತಿ ಪಡೆದಿದ್ದ ಹಾನಗಲ್ RFO ಶಿವರಾಜ್ ಮಠದ್ ರೇಡು ಹಾಕಿರ್ತಾರೆ. ಆ ಹೊತ್ತಲ್ಲಿ ಅಲ್ಲಿ ಅಕ್ರಮದಿಂದಲೇ ಸಾಗಿಸಿರಬಹುದು ಅನ್ನಲಾಗಿದ್ದ ಕಟ್ಟಿಗೆ ಸಿಕ್ಕಾಕಿಕೊಂಡಿರತ್ತೆ. ಅಸಲು, ಅಲ್ಲಿ ಸಿಕ್ಕಿದ್ದ ಕಟ್ಟಿಗೆಗೆ ದಾಸ್ತಾನು ಪರ್ಮಿಟ್ ಮಾತ್ರ ಇರತ್ತೆ. ಅದ್ಯಾರದ್ದೋ ಖಾಸಗಿಯವರ ಮಾಲ್ಕಿ ಪರ್ಮಿಟ್ ಮೂಲಕ ಅಲ್ಲಿಗೆ ಕಟ್ಟಿಗೆ ಕೊಂಡೊಯ್ಯಲಾಗಿರತ್ತೆ. ಹಾಗಂತ, ಆ ಎಲ್ಲಾ ಮಾಲಿಗೂ...
ಕಾತೂರು ಅರಣ್ಯದ ಆ ಪ್ರದೇಶದಲ್ಲಿ ಸಿಕ್ಕಿದ್ದು 12 ಬುಡುಚಿಗಳಂತೆ..! ಎಲ್ಲದಕ್ಕೂ FIR ಆಗಿದೆಯಂತೆ, ಹಾಗಿದ್ರೆ ಈ ಪ್ರಶ್ನೆಗಳಿಗೆ ಉತ್ತರಿಸೋರ್ಯಾರು RFO ಸಾಹೇಬ್ರೆ..?
ಮುಂಡಗೋಡ: ಕಾತೂರು ಅರಣ್ಯ ವ್ಯಾಪ್ತಿಯಲ್ಲಿ ಮರಗಳ ಮಾರಣಹೋಮದ ಸುದ್ದಿ ಪಬ್ಲಿಕ್ ಫಸ್ಟ್ ನಲ್ಲಿ ಬಿತ್ತರಿಸಿದ್ದೇ ತಡ, ಕಾತೂರಿನ RFO ಸಾಹೇಬ್ರು ಉರಿದುಬಿದ್ದಿದ್ದಾರಂತೆ. ಅದೇಲ್ಲ ಬುಡುಚಿಗಳು ಹಳೆಯವು, ಅದರ ಮೇಲೆ ಈಗಾಗಲೇ ಕೇಸು ದಾಖಲಿಸಲಾಗಿದೆ ಅಂತೇಲ್ಲ ಬುಸುಗುಟ್ಟಿದ್ದಾರಂತೆ. ಆದ್ರೆ, ಒಂದು ಮಾತ್ರ ಅರ್ಥವಾಗ್ತಿಲ್ಲ. ಈ ಅರಣ್ಯ ಇಲಾಖೆಯ ಅಧಿಕಾರಿಗಳು ಕೇವಲ ಎಫ್ ಐ ಆರ್ ಗಷ್ಟೇ ಸೀಮಿತವಾಗಿಬಿಟ್ರಾ..? ಅಥವಾ ಅರಣ್ಯದಲ್ಲಿ ರಕ್ಷಣೆಯ ಜವಾಬ್ದಾರಿಯನ್ನೇ ಮರೆತ್ರಾ..? ಈ ಪ್ರಶ್ನೆ ಸದ್ಯ ಪರಿಸರ ಪ್ರಿಯರಿಗೆ ಕಾಡ್ತಿದೆ. 12 FIR ಆಗಿದೆಯಂತೆ..! ನಂಗೆ ನಿಜಕ್ಕೂ ಕಾತೂರಿನ RFO ಸಾಹೇಬ್ರು ಹೇಳಿದ ಈ ಮಾತು ಇನ್ನಿಲ್ಲದ ಆತಂಕ ತರಿಸಿದೆ. ಪಬ್ಲಿಕ್ ಫಸ್ಟ್ ನ್ಯೂಸ್ ನಲ್ಲಿ ವರದಿ ಪ್ರಸಾರ ಆಗ್ತಿದ್ದಂತೆ RFO ಸಾಹೇಬ್ರು ಆ ಸ್ಥಳ ಪರಿಶೀಲನೆ ಮಾಡಿದ್ರಂತೆ. ಆದ್ರೆ ಅಲ್ಲಿರೋ ಮರದ ಬುಡುಚಿಗಳು ಹಳೆಯದಂತೆ, ಅಲ್ಲಿ ಒಟ್ಟೂ 12 ಮರಗಳನ್ನು ಕಳ್ಳರು ಕಡಿದು ಸಾಗಿಸಿದ್ದಾರಂತೆ. ಹೀಗಾಗಿ, 12 FIR ಈಗಾಗಲೇ ಮಾಡಿ ಆಗಿದೆಯಂತೆ. ಅದಕ್ಕೆ ಇದೇಲ್ಲ ದೊಡ್ಡ ಸುದ್ದಿಯೇ...
ಕಾತೂರು ಅರಣ್ಯದಲ್ಲಿ ಮರಗಳ ಮಾರಣಹೋಮ, ಕಾಡಲ್ಲಿ ಕಂಡದ್ದು ಸಾಲು ಮರಗಳ ಹೆಣ..! ಅಸಲು, ಅಧಿಕಾರಿಗಳೇ ಇಲ್ಲಿ ಅಕ್ರಮ ದಂಧೆಗೆ ಇಳಿದು ಬಿಟ್ರಾ..?
ಮುಂಡಗೋಡ ತಾಲೂಕಿನ ಅರಣ್ಯ ಇಲಾಖೆಯ ಅಧಿಕಾರಿಗಳು ಅದೇನು ಕಡೆದು ಗುಡ್ಡೆ ಹಾಕ್ತಿದಾರೋ ಗೊತ್ತಿಲ್ಲ. ಇಲ್ಲಿನ ಅರಣ್ಯ ಸಂಪತ್ತು ಹಾಡಹಗಲೇ ಲೂಟಿಯಾಗ್ತಿದೆ. ಅದ್ರಲ್ಲೂ ಕಾತೂರ ಭಾಗದಲ್ಲಿ ನಿತ್ಯವೂ ನೂರಾರು ಮರಗಳು ಉಸಿರು ಚೆಲ್ಲುತ್ತಿವೆ. ಅಸಲು, ಇದೇಲ್ಲ ಖುದ್ದು ಅರಣ್ಯ ಇಲಾಖೆಯ ಕೆಲ ಬ್ರಷ್ಟ ಕಾರಬಾರಿಗಳ ನೆರಳಲ್ಲೇ ನಡೀತಿದೆ ಅನ್ನೋದು ಬಹುದೊಡ್ಡ ದುರಂತ. ಸಾಲು ಸಾಲು ಮಾರಣಹೋಮ..! ನಿಜ ಅಂದ್ರೆ ಕಾತೂರು ಅರಣ್ಯ ವ್ಯಾಪ್ತಿಯ ಹಲವು ಕಡೆಗಳಲ್ಲಿ ಹಾಡಹಗಲೇ ಅಮೂಲ್ಯ ಅರಣ್ಯ ಸಂಪತ್ತು ಕೊಳ್ಳೆ ಹೊಡೆಯಲಾಗ್ತಿದೆ. ಕೋಡಂಬಿ ಸಮೀಪದ ಕಾಡುಗಳಲ್ಲಿ ನಿತ್ಯವೂ ಅರಣ್ಯಗಳ್ಳರು ಬೆಲೆಬಾಳುವ ಅಮೂಲ್ಯ ಮರಗಳನ್ನು ಕಡಿದೊಯ್ತಿದಾರೆ. ಇಷ್ಟೇಲ್ಲ ಆದ್ರೂ ಇಲಾಖೆಯ ಯಾವೊಬ್ಬ ಅಧಿಕಾರಿಗೂ ಕಣ್ಣಿಗೆ ಕಾಣೋದೇ ಇಲ್ಲ. ಹೀಗಾಗಿ, ಪಬ್ಲಿಕ್ ಫಸ್ಟ್ ನ್ಯೂಸ್ ಗೆ ಆ ಭಾಗದ ಕೆಲವು ಗ್ರಾಮಗಳ ಪರಿಸರ ಪ್ರಿಯರು ಮಾಹಿತಿ ನೀಡಿದ್ರು. ಈ ಕಾರಣಕ್ಕಾಗಿ ರಿಯಾಲಿಟಿ ಚೆಕ್ ಗೆ ತೆರಳಿದ್ದಾಗ ಅಲ್ಲಿನ ಅರಣ್ಯದ ಮಾರಣಹೋಮದ ಇಂಚಿಂಚು ಕತೆಗಳು ಬೆಳಕಿಗೆ ಬಂತು. ಇಲಾಖೆಯಲ್ಲೇ ಕಳ್ಳರು..! ಈಗ್ಗೆ...
ಬೈಕ್ ಅಪಘಾತ ಕರ್ತವ್ಯದಲ್ಲಿದ್ದ ಶಿಗ್ಗಾವಿಯ ಪೊಲೀಸ್ ಪೇದೆ ದಾರುಣ ಸಾವು..!
ಶಿಗ್ಗಾವಿ: ಬೈಕ್ ಅಪಘಾತದಲ್ಲಿ ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿಯೋರ್ವರು ದಾರುಣ ಸಾವು ಕಂಡ ಘಟನೆ ಶಿಗ್ಗಾವಿ ನಡೆದಿದೆ. ಶಿಗ್ಗಾವಿಯಲ್ಲಿ ಪೊಲೀಸ್ ಠಾಣೆಯಲ್ಲಿ ಕಾನ್ ಸ್ಟೇಬಲ್ ಆಗಿ ಸೇವೆ ಸಲ್ಲಿಸುತ್ತಿದ್ದ ಚನ್ನಪ್ಪ ದೊಡ್ಡಪ್ಪ ಸಂಶಿ(54) ಎಂಬುವವರೇ ಅಪಘಾತದಲ್ಲಿ ಮೃತಪಟ್ಟ ಪೊಲೀಸ್ ಪೇದೆಯಾಗಿದ್ದಾರೆ. ಇಂದು ಮದ್ಯಾಹ್ನ ಶಿಗ್ಗಾವಿ ತಾಲೂಕಿನ ಹನುಮರಳ್ಳಿ ಗ್ರಾಮದ ಬಳಿ ಬೈಕ್ ಅಪಘಾತವಾಗಿದೆ. ಸಮನ್ಸ್ ಜಾರಿ ಕುರಿತು ಕರ್ತವ್ಯ ನಿಮಿತ್ತ ಹೊರಟಾಗ ಶಿಗ್ಗಾವಿ ತಾಲ್ಲೂಕಿನ ಹನಮರಹಳ್ಳಿ ಗ್ರಾಮದ ಹತ್ತಿರ ಬೈಕ್ ಅಪಘಾತವಾಗಿ ಮೃತಪಟ್ಟಿದ್ದಾರೆ. ಮೂಲತಃ ಶಿಗ್ಗಾವಿ ತಾಲೂಕಿನ ಚಿಕ್ಕಮಲ್ಲೂರ ಗ್ರಾಮದವರಾಗಿದ್ದು ಹಾಲಿ ಶಿಗ್ಗಾಂವಿ ಪಟ್ಟಣದ ಮಾರುತಿ ನಗರದಲ್ಲಿ ವಾಸವಿದ್ರು. ಮಿಲಿಟರಿ ಸೇವೆಯಿಂದ ನಿವೃತ್ತಿ ಹೊಂದಿದ ನಂತರ 2007 ರಲ್ಲಿ ಪೊಲೀಸ್ ಇಲಾಖೆಗೆ ಸೇರಿದ್ದರು. 24-07-2020 ರಿಂದ ಶಿಗ್ಗಾಂವ ಪೊಲೀಸ್ ಠಾಣೆಯಲ್ಲಿ ಕಾನ್ ಸ್ಟೇಬಲ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಶಿಗ್ಗಾವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ದಕ್ಷ ಎಸ್ಪಿ ಮೇಡಂ ಎತ್ತಂಗಡಿಗೆ ಮುಹೂರ್ತ ಫಿಕ್ಸ್..? ಉಸ್ತುವಾರಿ “ಕೋಟಾ” ದಡಿ “ವಿಷ್ಣು” ವರ್ಧನವಾ..? ಅಷ್ಟಕ್ಕೂ,ದಕ್ಷತೆಗೆ ಇಷ್ಟೆನಾ ಬೆಲೆ..?
ಉತ್ತರ ಕನ್ನಡ ಕಂಡ ದಕ್ಷ ಐಪಿಎಸ್ ಅಧಿಕಾರಿ, ಎಸ್ಪಿ ಡಾ. ಸುಮನಾ ಪೆನ್ನೇಕರ್ ಮೇಡಂ ವರ್ಗಾವಣೆ ಆಗೋದು ಬಹುತೇಕ ಫಿಕ್ಸ್ ಆಗಿದೆಯಂತೆ. ಇದೇ ಡಿಸೆಂಬರ್ ಅಂತ್ಯದ ಹೊತ್ತಿಗೆ ಸುಮನಾ ಮೇಡಮ್ಮಿಗೆ ಜಿಲ್ಲೆಯಿಂದ ಎತ್ತಂಗಡಿ ಮಾಡೋಕೆ ಅದೊಂದು “ಕೂಟ” ನಿದ್ದೆಗೆಟ್ಟು ಓಡಾಡ್ತಿದೆ ಅನ್ನೋದು ಸದ್ಯದ ಸುದ್ದಿ. ದಕ್ಷ, ಖಡಕ್ ಪೊಲೀಸ್ ಅಧಿಕಾರಿಣಿ ಸುಮನಾ ಪೆನ್ನೇಕರ್ ಜಾಗಕ್ಕೆ “ಉಸ್ತುವಾರಿ” ಗಳ ಖಾಸಾ ಶಿಷ್ಯರೊಬ್ಬರನ್ನು ಪ್ರತಿಷ್ಟಾಪಿಸಲು ಮುಹೂರ್ತವೂ ಪಿಕ್ಸ್ ಆಗಿದೆಯಂತೆ. “ವಿಷ್ಣು” ವರ್ಧನವಾ..? ಈ ಮೊದಲು ಉಡುಪಿ ಜಿಲ್ಲೆಯ ಎಸ್ಪಿಯಾಗಿ ಕಾರ್ಯನಿರ್ವಹಿಸಿದ್ದ ಐಪಿಎಸ್ ಅಧಿಕಾರಿಯನ್ನು ಉತ್ತರ ಕನ್ನಡಕ್ಕೆ ತಂದು ಕೂರಿಸಲು ಬೇಕಾದ ಎಲ್ಲಾ ವ್ಯವಸ್ಥೆಗಳನ್ನೂ ಒಳಗೊಳಗೇ ಮಾಡಿಕೊಳ್ಳಲಾಗಿದೆ ಅನ್ನೋ ಮಾಹಿತಿ ಇದೆ. ಶ್ರೀನಿವಾಸರ “ಕೋಟಾ” ದಡಿಯಲ್ಲಿ “ವಿಷ್ಣು” ವರ್ಧನೆಗೆ ಬೇಕಾದ ಎಲ್ಲಾ ಮಸಲತ್ತುಗಳೂ ಜಾರಿಯಲ್ಲಿವೆ. ಈ ಕುರಿತು ಸಿಎಂ ಎದುರೂ ಪುಂಖಾನುಪುಂಕ ವರದಿಗಳು ಖುದ್ದು ಕೆಲ ಸಚಿವರು, ಶಾಸಕರ ಅಮೃತ ಹಸ್ತದಿಂದಲೇ ಸಲ್ಲಿಕೆಯಾಗಿ ಆಗಿದೆ. ಅಲ್ಲದೇ ಸಿಎಂ ಎದುರು, ಈಗಿನ ಎಸ್ಪಿ ಮೇಡಂ ನಮ್ಮ ಮಾತೇ...
ಅರೆಬೈಲು ಘಾಟಿನಲ್ಲಿ ಥೇಟು ಸಿನಿಮಾ ಸ್ಟೈಲಿನಲ್ಲೇ ರಾಬರಿ, ಕಾರು ಅಡ್ಡಗಟ್ಟಿ ದೋಚಿದ್ದು ಎಷ್ಟು ಕೋಟಿ ಗೊತ್ತಾ..?
ಯಲ್ಲಾಪುರ ಅರೆಬೈಲ್ ಘಾಟಿನಲ್ಲಿ ಭಯಾನಕ ರಾಬರಿ ನಡೆದಿದೆ. ಕಾರಲ್ಲಿ ತೆರಳುತ್ತಿದ್ದವರನ್ನ ಥೇಟು ಸಿನಿಮಾ ಸ್ಟೈಲಿನಲ್ಲೇ ಅಡ್ಡಗಟ್ಟಿ ಕೋಟಿ ಕೋಟಿ ಹಣ ಎಗರಿಸಿಕೊಂಡು ಹೋಗಿದ್ದಾರೆ ಖದೀಮರು. ಜೊತೆಗೆ ಕಾರನ್ನೂ ಬಿಡದೇ ರಾಬರಿ ಮಾಡಿದ್ದಾರೆ ಆಗಂತುಕರು. ಹೀಗಾಗಿ, ಈ ಪ್ರಕರಣವೀಗ ಇಡೀ ಯಲ್ಲಾಪುರದ ಮಂದಿಯ ನಿದ್ದೆಗೆಡಿಸಿದೆ. ಹೇಗಾಯ್ತು..? ಅವತ್ತು ಅಕ್ಟೋಬರ್ ಒಂದನೇ ತಾರೀಖು, ಶನಿವಾರ ರಾತ್ರಿ ನಡೆದ ಘಟನೆ ಇದು. ಬೆಳಗಾವಿಯಿಂದ ಯಲ್ಲಾಪುರ ಮಾರ್ಗವಾಗಿ ಕೇರಳಕ್ಕೆ ಚಿನ್ನ ಖರೀದಿಗಾಗಿ ಹೊರಟಿದ್ದವರನ್ನು ಅನಾಮತ್ತಾಗಿ ರಾಬರಿ ಮಾಡಲಾಗಿದೆ. ಚಿನ್ನ ಖರೀದಿಗಾಗಿ ಸ್ವಿಪ್ಟ್ ಕಾರಲ್ಲಿ ತೆರಳುತ್ತಿದ್ದ ಬೆಳಗಾವಿಯ ಆ ಇಬ್ಬರೂ ಯಲ್ಲಾಪುರದ ಅರೆಬೈಲ್ ಘಾಟಿನಲ್ಲಿ ಬರುತ್ತಿದ್ದಂತೆ, ಥೇಟು ಸಿನಿಮಾ ಸ್ಟೈಲಿನಲ್ಲೇ ಎರಡು ಕಾರುಗಳಲ್ಲಿ ಬಂದು ಅಡ್ಡ ಹಾಕಿದ್ದಾರೆ ಖದೀಮರು. ತಕ್ಷಣವೇ ಆರೇಳು ಜನ ದರೋಡೆಕೋರರ ತಂಡ ಏಕಾಏಕಿ ಕಾರಲ್ಲಿದ್ದವರನ್ನು ಹೊರಗೆಳೆದು ಹಲ್ಲೆ ಮಾಡಿದೆ. ಹೀಗಾಗಿ, ಅಕ್ಷರಶಃ ದರೋಡೆಕೋರರ ದಾಳಿಗೆ ನಲುಗಿ ಹೋಗಿದೆ “ಚಿನ್ನದ ಪಡೆ”.. ಹೀಗಾಗಿ, ಬದುಕಿದರೆ ಸಾಕು ಅಂತಾ ಶರಣಾಗಿದ್ದಾರೆ ಹಣವಂತರು. ತಕ್ಷಣವೇ ಕಾರಲ್ಲಿದ್ದ ಬರೋಬ್ಬರಿ 2...
“ಆಕಾಶದ ಗುಡ್ಡಕ್ಕೆ ಶಿಶು ಏರಿತಲೇ ಪರಾಕ್” ದೇವರಗುಡ್ಡದ ಕಾರಣೀಕ ನುಡಿ..! ಕಾರಣಿಕದ ಅರ್ಥವೇನು ಗೊತ್ತಾ..?
ದೇವರಗುಡ್ಡ: ಐತಿಹಾಸಿಕ ದೇವರಗುಡ್ಡ ಮಾಲತೇಶ ಸ್ಚಾಮಿಯ ಕಾರಣೀಕ ನುಡಿ ಹೊರಬಿದ್ದಿದೆ. “ಅಕಾಶದ ಗುಡ್ಡಕ್ಕೆ ಶಿಶು ಏರಿ ತಲೆ ಪರಾಕ್” ಇದು ಪ್ರಸಕ್ತ ವರ್ಷದ ದೇವರಗುಡ್ಡ ಕಾರಣಿಕ ನುಡಿ. ವೃತಾಧಾರಿ ಗೊರವಯ್ಯ ನಾಗಪ್ಪಜ್ಜ ದುರಗಪ್ಪಜ್ಜ ಉರ್ಮಿ ಕಾರ್ಣಿಕ ನುಡಿದಿದ್ದಾರೆ. ವಿಜಯ ದಶಮಿಯ ಆಯುಧ ಪೂಜೆ ದಿನದಂದು ಪ್ರತಿವರ್ಷ ಕಾರ್ಣಿಕ ನುಡಿವ ಗೊರವಯ್ಯನವರು, ಇಂದು ಬಿಲ್ಲನ್ನೇರಿ ಕಾರಣಿಕ ನುಡಿದಿದ್ದಾರೆ. ಕಾರಣೀಕ ತಾತ್ಪರ್ಯ..! ಅಂದಹಾಗೆ, ಪ್ರತೀ ವರ್ಷ ಆಯುಧ ಪೂಜೆಯ ದಿನ ನುಡಿಯುವ ದೇವರಗುಡ್ಡದ ಕಾರಣೀಕಚನ್ನು ಬಹುತೇಕ ರೈತರ ಕೃಷಿ ಹಾಗೂ ರಾಜಕೀಯ ಆಗು ಹೋಗುಗಳ ಕುರಿತಾಗಿನೇ ವಿಶ್ಲೇಷಣೆ ಮಾಡಲಾಗುತ್ತದೆ. ಹೀಗಾಗಿ, ಪ್ರಸಕ್ತ ವರ್ಷದ ದೇವರಗುಡ್ಡ ಕಾರಣೀಕದ ತಾತ್ಪರ್ಯವನ್ನೂ ವಿಶ್ಲೇಷಣೆ ಮಾಡಲಾಗಿದೆ. ಕೃಷಿ..! ಈ ಅಕಾಶವೆಂಬ ಒಂದು ಪ್ರಪಂಚದಲ್ಲಿ ಬದುಕುತ್ತಿರುವ ನಾವು, ಅ ಗುಡ್ಡಕ್ಕೆ ಸಣ್ಣದಾದ ಒಂದು ಶಿಶು ಅಂದರೆ, ಸಣ್ಣ ರೈತನು ಕೂಡ ಅಕಾಶದ ಎತ್ತರಕ್ಕೆ ಏರುವ ದಿನ ಬರುತ್ತದೆ. ರೈತರು ಬೆಳೆದ ಬೆಳೆಗಳಿಗೆ ಅಕಾಶದ ಎತ್ತರದ ಬೆಲೆ ಸಿಗಲಿದೆ ಅಂತಾ ಕೃಷಿಗೆ...
108 ಅಂಬ್ಯುಲೆನ್ಸ್ ಸಿಬ್ಬಂದಿಗೆ ಸಂಬಳ ನೀಡದ ಹಿನ್ನೆಲೆ, ರಾಜ್ಯಾಧ್ಯಂತ 108 ಅಂಬ್ಯುಲೆನ್ಸ್ ಸೇವೆ ವ್ಯತ್ಯಯ..!
ಬೆಂಗಳೂರು: ರಾಜ್ಯಾದ್ಯಂತ 108 ಅಂಬ್ಯುಲೆನ್ಸ್ ಸೇವೆ ಬಹುತೇಕ ಸ್ಥಗಿತವಾಗುತ್ತಿದೆ. ಕಳೆದ ಎರಡು ತಿಂಗಳಿಂದ ಸರಿಯಾಗಿ ಸಂಬಳ ನೀಡದ ಹಿನ್ನೆಲೆ 108 ಸಿಬ್ಬಂದಿಗಳು ಸೇವೆ ಸ್ಥಗಿತಗೊಳಿಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ರಾಜ್ಯದಲ್ಲಿ ಇಂದು ಕೇವಲ 300 ರಿಂದ 400 ಅಂಬ್ಯಲೆನ್ಸ್ ಗಳು ಮಾತ್ರ ಕಾರ್ಯನಿರ್ವಹಿಸ್ತಿದೆ. ಉಳಿದಂತೆ ಯಾವುದೇ 108 ಅಂಬ್ಯುಲೆನ್ಸ್ ಗಳು ಕಾರ್ಯ ನಿರ್ವಹಿಸ್ತಿಲ್ಲ. ಸಂಬಳ ಇಲ್ಲ.. ಅಸಲು, 108 ಅಂಬ್ಯಲೆನ್ಸ್ ಸಿಬ್ಬಂದಿಗಳಿಗೆ ಕಳೆದ ಎರಡು ತಿಂಗಳಿಂದ ಯಾವುದೇ ಸಂಬಳ ನೀಡಿಲ್ಲ. ಹೀಗಾಗಿ, 108 ಅಂಬ್ಯಲೆನ್ಸ್ ಸಿಬ್ಬಂದಿಗಳು ದಸರಾ ಹಬ್ಬದ ಸಂಭ್ರಮಕ್ಕೂ ಸಮಸ್ಯೆಯಾಗಿದೆ. ಸಂಬಳವಿಲ್ಲದೇ ಹೇಗೆ ಕಾರ್ಯ ನಿರ್ವಹಿಸೋದು ಅಂತಾ ಸಿಬ್ಬಂದಿಗಳು ಆಕ್ರೋಶ ಹೊರಹಾಕಿದ್ದಾರೆ. ನಾಳೆ ಮದ್ಯಾಹ್ನದ ಗಡುವು..? ಇಂದು ಬಹುತೇಕ 108 ಅಂಬ್ಯಲೆನ್ಸ್ ಸಿಬ್ಬಂದಿಗಳು ಕರ್ತವ್ಯಕ್ಕೆ ಗೈರಾಗಿದ್ದು, ನಾಳೆ ಮದ್ಯಾನದವರೆಗೂ ಗಡುವು ನೀಡಿದ್ದಾರಂತೆ. ನಾಳೆಯಷ್ಟೊತ್ತಿಗೆ ಸಂಬಳ ನೀಡದೇ ಹೋದರೆ ಇಡೀ ರಾಜ್ಯಾದ್ಯಂತ ಅಂಬ್ಯಲೆನ್ಸ್ ಸೇವೆ ಸ್ಥಗಿತಗೊಳಿಸುವ ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ.
ಗಾಂಜಾ ಮಾರಾಟ ಮಾಡುವ ವ್ಯಕ್ತಿಯನ್ನು, ಸಿನಿಮಿಯ ರೀತಿ ಬಂಧಿಸಿದ ಪೊಲೀಸ್ರು..!
ಹಳಿಯಾಳ: ಗಾಂಜಾ ಮಾರಾಟ ಮಾಡಲು ಪಟ್ಟಣಕ್ಕೆ ಬರುತ್ತಿದ್ದ ವ್ಯಕ್ತಿಯನ್ನು ಸಿನಿಮಿಯ ರೀತಿಯಲ್ಲಿ ಟ್ರೇಸ್ ಮಾಡಿ ಹಿಡಿದಿದ್ದಾರೆ ಹಳಿಯಾಳ ಪೊಲೀಸ್ರು. ಮಾಲು ಸಮೇತ ಆರೋಪಿಯನ್ನು ಬಂಧಿಸಿದ್ದು ಕಲ್ಲಯ್ಯ ಚಂಬಯ್ಯ ಗುಡಿ ಎಂಬುವನೇ ಗಾಂಜಾ ಸಾಗಿಸುತ್ತಿದ್ದ ಆರೋಪಿಯಾಗಿದ್ದಾನೆ. ಅಂದಹಾಗೆ, ಹಳಿಯಾಳ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಸದ್ಯ ನವರಾತ್ರಿಯ ಸಂಭ್ರಮ ಜೋರಾಗಿದೆ. ಗ್ರಾಮಗಳಲ್ಲಿ ದಸರಾ ಹಬ್ಬದ ನಿಮಿತ್ಯ ದುರ್ಗಾದೌಡ್ ಮೆರೆವಣಿಗೆ ಸಂಭ್ರಮದಿಂದ ನಡೆಯುತ್ತಿದೆ. ಹೀಗಾಗಿ ದುರ್ಗಾ ದೌಡ್ ಮೆರವಣಿಗೆಯ ಬಂದೋಬಸ್ತ್ ಗಾಗಿ ತೆರಳಿದ್ದ ಹಳಿಯಾಳ ಪಿಎಸ್ ಐ ವಿನೋದ್ ರೆಡ್ಡಿ ಹಾಗೂ ಅವರ ಪಡೆ, ಕರ್ತವ್ಯ ಮುಗಿಸಿ ವಾಒಸ್ ಬರುತ್ತಿದ್ದಾಗ, ತಾಲೂಕಿನ ಹವಗಿ ಗ್ರಾಮದ ಐಟಿಐ ಕಾಲೇಜಿನ ಹತ್ತಿರ ಗಾಂಜಾ ಸಾಗಿಸುತ್ತಿದ್ದ ಆರೋಪಿ ಎದುರಿಗೆ ಸಿಕ್ಕಿದ್ದಾನೆ. ಅಸಲು, ಆತ ಯಾರು ಅನ್ನೋದೇ ಪೊಲೀಸರಿಗೆ ಗೊತ್ತಿರಲಿಲ್ಲ. ಆದ್ರೆ ಯಾವಾಗ ಪೊಲೀಸರ ವಾಹನ ಕಂಡ ಕೂಡಲೇ ಆರೋಪಿ ಓಡಲು ಶುರುವಿಟ್ಟಿದ್ದಾನೆ. ತಕ್ಷಣವೇ ಅನುಮಾನಗೊಂಡ ಪೊಲೀಸರು ಆತನನ್ನು ಬೆನ್ನಟ್ಟಿ ಹಿಡಿದಿದ್ದಾರೆ. ಕೈಗೆ ಸಿಕ್ಕ ವ್ಯಕ್ತಿಯನ್ನು ವಿಚಾರಿಸಿದಾಗ ಆತನೇ ಒಪ್ಪಿಕೊಂಡಿದ್ದು, ಹಳಿಯಾಳಕ್ಕೆ...