ದೇವರಗುಡ್ಡ: ಐತಿಹಾಸಿಕ ದೇವರಗುಡ್ಡ ಮಾಲತೇಶ ಸ್ಚಾಮಿಯ ಕಾರಣೀಕ ನುಡಿ ಹೊರಬಿದ್ದಿದೆ. “ಅಕಾಶದ ಗುಡ್ಡಕ್ಕೆ ಶಿಶು ಏರಿ ತಲೆ ಪರಾಕ್” ಇದು ಪ್ರಸಕ್ತ ವರ್ಷದ ದೇವರಗುಡ್ಡ ಕಾರಣಿಕ ನುಡಿ. ವೃತಾಧಾರಿ ಗೊರವಯ್ಯ ನಾಗಪ್ಪಜ್ಜ ದುರಗಪ್ಪಜ್ಜ ಉರ್ಮಿ ಕಾರ್ಣಿಕ ನುಡಿದಿದ್ದಾರೆ. ವಿಜಯ ದಶಮಿಯ ಆಯುಧ ಪೂಜೆ ದಿನದಂದು ಪ್ರತಿವರ್ಷ ಕಾರ್ಣಿಕ ನುಡಿವ ಗೊರವಯ್ಯನವರು, ಇಂದು ಬಿಲ್ಲನ್ನೇರಿ ಕಾರಣಿಕ ನುಡಿದಿದ್ದಾರೆ.
ಕಾರಣೀಕ ತಾತ್ಪರ್ಯ..!
ಅಂದಹಾಗೆ, ಪ್ರತೀ ವರ್ಷ ಆಯುಧ ಪೂಜೆಯ ದಿನ ನುಡಿಯುವ ದೇವರಗುಡ್ಡದ ಕಾರಣೀಕಚನ್ನು ಬಹುತೇಕ ರೈತರ ಕೃಷಿ ಹಾಗೂ ರಾಜಕೀಯ ಆಗು ಹೋಗುಗಳ ಕುರಿತಾಗಿನೇ ವಿಶ್ಲೇಷಣೆ ಮಾಡಲಾಗುತ್ತದೆ. ಹೀಗಾಗಿ, ಪ್ರಸಕ್ತ ವರ್ಷದ ದೇವರಗುಡ್ಡ ಕಾರಣೀಕದ ತಾತ್ಪರ್ಯವನ್ನೂ ವಿಶ್ಲೇಷಣೆ ಮಾಡಲಾಗಿದೆ.
ಕೃಷಿ..!
ಈ ಅಕಾಶವೆಂಬ ಒಂದು ಪ್ರಪಂಚದಲ್ಲಿ ಬದುಕುತ್ತಿರುವ ನಾವು, ಅ ಗುಡ್ಡಕ್ಕೆ ಸಣ್ಣದಾದ ಒಂದು ಶಿಶು ಅಂದರೆ, ಸಣ್ಣ
ರೈತನು ಕೂಡ ಅಕಾಶದ ಎತ್ತರಕ್ಕೆ ಏರುವ ದಿನ ಬರುತ್ತದೆ. ರೈತರು ಬೆಳೆದ ಬೆಳೆಗಳಿಗೆ ಅಕಾಶದ ಎತ್ತರದ ಬೆಲೆ ಸಿಗಲಿದೆ ಅಂತಾ ಕೃಷಿಗೆ ಸಂಬಂಧಿಸಿದಂತೆ ವ್ಯಾಖ್ಯಾನಿಸಲಾಗಿದೆ.
ರಾಜಕೀಯ..!
ಇನ್ನು ಈ ಕಾರಣಿಕ ನುಡಿಯನ್ನು ರಾಜಕೀಯವಾಗಿ ವಿಶ್ಲೇಷಣೆ ಮಾಡಿದಾಗ, ರಾಜ್ಯದಲ್ಲಿ ಸಣ್ಣ ಸಣ್ಣ ಪಕ್ಷಗಳು ಸೇರಿ ಸರ್ಕಾರ ನಡೆಸುವ ಅವಕಾಶ ಬರುತ್ತದೆ ಅಂತಾ ಸೂಚನೆ ನೀಡಲಾಗಿದೆ.
ಹಾವೇರಿ ಜಿಲ್ಲೆಯ ರಾಣೆಬೆನ್ನೂರ ತಾಲ್ಲೂಕಿನಲ್ಲಿರುವ ಶ್ರೀ ಕ್ಷೇತ್ರ ದೆವರಗುಡ್ಡದಲ್ಲಿ ಪ್ರತೀ ವರ್ಷ ಆಯುಧ ಪೂಜೆಯ ದಿನ, ಸಾವಿರಾರು ಭಕ್ತರ ಸಮ್ಮುಖದಲ್ಲಿ ಗೊರವಯ್ಯ ನಾಗಪ್ಪಜ್ಜನವರು ಒಂಬತ್ತು ದಿನಗಳ ಕಾಲ ಉಪವಾಸವಿದ್ದು ಕಾರಣಿಕ ನುಡಿಯುತ್ತಾರೆ.