ಚಿಗಳ್ಳಿ ಹೋರಿಹಬ್ಬಕ್ಕೆ ಯುವಕ ಬಲಿ, ಹೋರಿ ತಿವಿದು 21 ವರ್ಷದ ಹುಡುಗನ ಭಯಾನಕ ಸಾವು‌.!


ಮುಂಡಗೋಡ ತಾಲೂಕಿನ ಚಿಗಳ್ಳಿಯ ಹೋರಿಹಬ್ಬದಲ್ಲಿ ಭಯಾನಕ ದುರ್ಘಟನೆ ಸಂಭವಿಸಿದೆ. ಹೋರಿ ಹಬ್ಬ ನೋಡಲು ಹೋಗಿದ್ದ ಯುವಕನಿಗೆ ಹೋರಿ ತಿವಿದು ಭಯಾನಕ ಸಾವು ಕಂಡಿದ್ದಾನೆ.

ಪರಮೇಶ್ ಸಿದ್ದಪ್ಪ ಹರಿಜನ್ (21) ಎಂಬುವ ಯುವಕನೇ ಹೋರಿ ಹಬ್ಬದಲ್ಲಿ ಹೋರಿ ತಿವಿದು ಮೃತಪಟ್ಟ ಯುವಕನಾಗಿದ್ದಾನೆ.

ಶನಿವಾರ ದೀಪಾವಳಿ ಹಬ್ಬದ ನಿಮಿತ್ತ ಚಿಗಳ್ಳಿಯ ಕಲ್ಮೇಶ್ವರ ಮಠದ ಹತ್ತಿರ ಹೋರಿಹಬ್ಬದಲ್ಲಿ ಏರ್ಪಡಿಸಲಾಗಿತ್ತು. ಈ ಹಬ್ಬದಲ್ಲಿ ವಿವಿದೆಡೆಯಿಂದ ಬಲಿತ ಸ್ಪರ್ಧಾ ಹೋರಿಗಳು ಬಂದಿದ್ದವು. ಹೀಗಾಗಿ, ಹೋರಿಗಳ ಹಬ್ಬ ನೋಡಲು ಹೋಗಿದ್ದ ಹುಡುಗನ ಮೇಲೆ ಹೋರಿ ಏಕಾಏಕಿ ದಾಳಿ ಮಾಡಿ ಯುವಕನ ಬಲಗಡೆಯ ಎದೆಯ ಬಾಗಕ್ಕೆ ತಿವಿದಿದೆ. ಹೀಗಾಗಿ ಗಂಭೀರ ಗಾಯಗೊಂಡಿದ್ದ ಯುವಕನನ್ನು ತಕ್ಷಣವೇ ಮುಂಡಗೋಡ ತಾಕೂಕಾಸ್ಪತ್ರೆಗೆ ಸಾಗಿಸಲಾಗಿತ್ತು. ಆದ್ರೆ ತಾಲೂಕಾಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಯುವಕ ಮೃತಪಟ್ಟಿದ್ದಾನೆ.

ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.