ಬೆಂಗಳೂರು: ರಾಜ್ಯಾದ್ಯಂತ 108 ಅಂಬ್ಯುಲೆನ್ಸ್ ಸೇವೆ ಬಹುತೇಕ ಸ್ಥಗಿತವಾಗುತ್ತಿದೆ. ಕಳೆದ ಎರಡು ತಿಂಗಳಿಂದ ಸರಿಯಾಗಿ ಸಂಬಳ ನೀಡದ ಹಿನ್ನೆಲೆ 108 ಸಿಬ್ಬಂದಿಗಳು ಸೇವೆ ಸ್ಥಗಿತಗೊಳಿಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ರಾಜ್ಯದಲ್ಲಿ ಇಂದು ಕೇವಲ 300 ರಿಂದ 400 ಅಂಬ್ಯಲೆನ್ಸ್ ಗಳು ಮಾತ್ರ ಕಾರ್ಯನಿರ್ವಹಿಸ್ತಿದೆ. ಉಳಿದಂತೆ ಯಾವುದೇ 108 ಅಂಬ್ಯುಲೆನ್ಸ್ ಗಳು ಕಾರ್ಯ ನಿರ್ವಹಿಸ್ತಿಲ್ಲ.
ಸಂಬಳ ಇಲ್ಲ..
ಅಸಲು, 108 ಅಂಬ್ಯಲೆನ್ಸ್ ಸಿಬ್ಬಂದಿಗಳಿಗೆ ಕಳೆದ ಎರಡು ತಿಂಗಳಿಂದ ಯಾವುದೇ ಸಂಬಳ ನೀಡಿಲ್ಲ. ಹೀಗಾಗಿ, 108 ಅಂಬ್ಯಲೆನ್ಸ್ ಸಿಬ್ಬಂದಿಗಳು ದಸರಾ ಹಬ್ಬದ ಸಂಭ್ರಮಕ್ಕೂ ಸಮಸ್ಯೆಯಾಗಿದೆ. ಸಂಬಳವಿಲ್ಲದೇ ಹೇಗೆ ಕಾರ್ಯ ನಿರ್ವಹಿಸೋದು ಅಂತಾ ಸಿಬ್ಬಂದಿಗಳು ಆಕ್ರೋಶ ಹೊರಹಾಕಿದ್ದಾರೆ.
ನಾಳೆ ಮದ್ಯಾಹ್ನದ ಗಡುವು..?
ಇಂದು ಬಹುತೇಕ 108 ಅಂಬ್ಯಲೆನ್ಸ್ ಸಿಬ್ಬಂದಿಗಳು ಕರ್ತವ್ಯಕ್ಕೆ ಗೈರಾಗಿದ್ದು, ನಾಳೆ ಮದ್ಯಾನದವರೆಗೂ ಗಡುವು ನೀಡಿದ್ದಾರಂತೆ. ನಾಳೆಯಷ್ಟೊತ್ತಿಗೆ ಸಂಬಳ ನೀಡದೇ ಹೋದರೆ ಇಡೀ ರಾಜ್ಯಾದ್ಯಂತ ಅಂಬ್ಯಲೆನ್ಸ್ ಸೇವೆ ಸ್ಥಗಿತಗೊಳಿಸುವ ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ.