ಬೈಕ್ ಅಪಘಾತ ಕರ್ತವ್ಯದಲ್ಲಿದ್ದ ಶಿಗ್ಗಾವಿಯ ಪೊಲೀಸ್ ಪೇದೆ ದಾರುಣ ಸಾವು..!

ಶಿಗ್ಗಾವಿ: ಬೈಕ್ ಅಪಘಾತದಲ್ಲಿ ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿಯೋರ್ವರು ದಾರುಣ ಸಾವು ಕಂಡ ಘಟನೆ ಶಿಗ್ಗಾವಿ ನಡೆದಿದೆ‌. ಶಿಗ್ಗಾವಿಯಲ್ಲಿ ಪೊಲೀಸ್ ಠಾಣೆಯಲ್ಲಿ ಕಾನ್ ಸ್ಟೇಬಲ್ ಆಗಿ ಸೇವೆ ಸಲ್ಲಿಸುತ್ತಿದ್ದ ಚನ್ನಪ್ಪ ದೊಡ್ಡಪ್ಪ ಸಂಶಿ(54) ಎಂಬುವವರೇ ಅಪಘಾತದಲ್ಲಿ ಮೃತಪಟ್ಟ ಪೊಲೀಸ್ ಪೇದೆಯಾಗಿದ್ದಾರೆ.

ಇಂದು ಮದ್ಯಾಹ್ನ ಶಿಗ್ಗಾವಿ ತಾಲೂಕಿನ ಹನುಮರಳ್ಳಿ ಗ್ರಾಮದ ಬಳಿ ಬೈಕ್ ಅಪಘಾತವಾಗಿದೆ. ಸಮನ್ಸ್ ಜಾರಿ ಕುರಿತು ಕರ್ತವ್ಯ ನಿಮಿತ್ತ ಹೊರಟಾಗ ಶಿಗ್ಗಾವಿ ತಾಲ್ಲೂಕಿನ ಹನಮರಹಳ್ಳಿ ಗ್ರಾಮದ ಹತ್ತಿರ ಬೈಕ್ ಅಪಘಾತವಾಗಿ ಮೃತಪಟ್ಟಿದ್ದಾರೆ.

ಮೂಲತಃ ಶಿಗ್ಗಾವಿ ತಾಲೂಕಿನ ಚಿಕ್ಕಮಲ್ಲೂರ ಗ್ರಾಮದವರಾಗಿದ್ದು ಹಾಲಿ ಶಿಗ್ಗಾಂವಿ ಪಟ್ಟಣದ ಮಾರುತಿ ನಗರದಲ್ಲಿ ವಾಸವಿದ್ರು. ಮಿಲಿಟರಿ ಸೇವೆಯಿಂದ ನಿವೃತ್ತಿ ಹೊಂದಿದ ನಂತರ 2007 ರಲ್ಲಿ ಪೊಲೀಸ್ ಇಲಾಖೆಗೆ ಸೇರಿದ್ದರು. 24-07-2020 ರಿಂದ ಶಿಗ್ಗಾಂವ ಪೊಲೀಸ್ ಠಾಣೆಯಲ್ಲಿ ಕಾನ್ ಸ್ಟೇಬಲ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಶಿಗ್ಗಾವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

 

error: Content is protected !!