ಶಿಗ್ಗಾವಿ ವಿಧಾನಸಭಾ ಉಪ ಚುನಾವಣೆ ಕಣ ರಂಗೇರಿದೆ. ಚುನಾವಣೆ ದಿನಾಂಕ ಘೋಷಣೆ ಆಗ್ತಿದ್ದಂತೆ ಟಿಕೆಟ್ ಗಾಗಿ ಎರಡೂ ರಾಷ್ಟ್ರೀಯ ಪಕ್ಷಗಳಲ್ಲಿ ಟಿಕೆಟ್ ಹಂಚಿಕೆಯೇ ತಲೆನೋವಾಗಿದೆ.
ಟಿಕೆಟ್‌ಗಾಗಿ ಜೋರಾದ ಲಾಭಿ..!
ಯಾರಿಗೆ ಶಿಗ್ಗಾವಿ ವಿಧಾನಸಭಾ ಕ್ಷೇತ್ರದ ಎರಡೂ ಪಕ್ಷಗಳ ಟಿಕೆಟ್..?
* ಟಿಕೆಟ್ ಹಂಚಿಕೆಯಲ್ಲಿ ತಲೆ ಕೆಡಿಸಿಕೊಂಡ ಎರಡೂ ರಾಷ್ಟ್ರೀಯ ಪಕ್ಷಗಳ ಹೈಕಮಾಂಡ್.
* ದೆಹಲಿ ಪಡೆಸಾಲೆಯಲ್ಲಿ ಟಿಕೆಟ್ ಹಂಚಿಕೆ ಚರ್ಚೆ.
* ಇನ್ನೂ ಬಗೆಹರಿಯದ ಟಿಕೆಟ್ ಹಂಚಿಕೆ ಗೊಂದಲ.
* ಟಿಕೆಟ್‌ಗಾಗಿ ದೆಹಲಿ ಕದ ತಟ್ಟಿದ ಟಿಕೆಟ್ ಆಕಾಂಕ್ಷಿಗಳು.
* ಟಿಕೆಟ್ ಬೇಕೆಂದು ದೆಹಲಿಯಲ್ಲಿ ಬೀಡು ಬಿಟ್ಟ ಟಿಕೆಟ್ ಆಕಾಂಕ್ಷಿಗಳು.
* ಜಾತಿ ಲೆಕ್ಕಾಚಾರ ಹಾಕಿಕೊಂಡು ಟಿಕೆಟ್ ನೀಡುವಂತೆ ಹೈಕಮಾಂಡ್ ಮೇಲೆ ಒತ್ತಡ.
* ಒಂದು ವೇಳೆ ಟಿಕೆಟ್ ಕೈತಪ್ಪಿದ್ದೆ ಆದಲ್ಲಿ ಬಂಡಾಯದ ಬಿಸಿ ತಟ್ಟಿಸಲು ಚಿಂತನೆ.
* ಟಿಕೆಟ್ ಆಕಾಂಕ್ಷಿಗಳು ಬಂಡಾಯ ಏಳದಂತೆ ದೆಹಲಿಯಲ್ಲಿ ಚರ್ಚೆ ನಡೆಸಿದ ನಾಯಕರು.
* ಎರಡೂ ರಾಷ್ಟ್ರೀಯ ಪಕ್ಷಗಳಿಗೂ ತಟ್ಟಲಿದೆ ಬಂಡಾಯದ ಬಿಸಿ.
ಇದು ಹಕೀಕತ್ತು..!
ಶಿಗ್ಗಾವಿ ಉಪಚುನಾವಣೆಗೆ ಮೂಹೂರ್ತ ಪೀಕ್ಸ್ ಆಗಿದ್ದು. ನವೆಂಬರ್ 13 ರಂದು ನಡೆಯಲಿದೆ ಮತದಾನ ನಡೆಯಲಿದೆ. ಚುನಾವಣೆ ಘೋಷಣೆ ಆಗ್ತಿದ್ದಂತೆ ಕ್ಷೇತ್ರದಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದೆ.
ಎರಡು ಪಕ್ಷಗಳಲ್ಲಿ ಟಿಕೆಟ್ ಗಾಗಿ ಲಾಬಿ ಶುರುವಾಗಿದೆ.
ಕಾಂಗ್ರೆಸ್ ನಲ್ಲಿ ಮುಸ್ಲಿಂ ಸಮುದಾಯದವರಿಗೆ ಟಿಕೆಟ್ ನೀಡುವಂತೆ ಸಚಿವ ಜಮೀರ್ ಅಹ್ಮದ್ ಬಿಗಿ ಪಟ್ಟು ಹಿಡಿದಿದ್ದು ಮುಸ್ಲಿಂ ಸಮುದಾಯದಿಂದ ಮಾಜಿ ಶಾಸಕ ಅಜ್ಜಂಪೀರ್ ಖಾದ್ರಿ ಹೆಸರು ಮುಂಚೂಣಿಯಲ್ಲಿದೆ. ಸಧ್ಯ ಖಾದ್ರಿ ಜೊತೆಗೆ ಯಾಸೀರ್ ಖಾನ್ ಪಠಾಣ ಹಾಗೂ ಸಿಎಂ ಇಬ್ರಾಹಿಂ ಪುತ್ರ ಪೈಜ್ ನಡುವೆ ಟಿಕೆಟ್ ಪೈಟ್ ಇದೆ. ಇದರ ಜೊತೆ ಲಿಂಗಾಯತ ಸಮುದಾಯದ ಕೋಟಾದಲ್ಲಿ ಕೈ ಜಿಲ್ಲಾಧ್ಯಕ್ಷ ಸಂಜೀವ ನೀರಲಗಿ , ಸೋಮಣ್ಣ ಬೇವಿನಮರದ, ಕುರುಬ ಸಮುದಾಯದ ಕೋಟಾದಲ್ಲಿ ಮಾಜಿ ಸಚಿವ ಆರ್ ಶಂಕರ್ ಲಾಬಿ ನಡೆಸಿದ್ದಾರೆ.
ಚುನಾವಣೆ ಘೋಷಣೆ ಆಗುತ್ತಿದ್ದಂತೆ ಟಿಕೆಟ್ ಗಾಗಿ ಅಕಾಂಕ್ಷಿಗಳು ಬೆಂಗಳೂರಿನತ್ತ ತೇರಳಿದ್ದು. ತಮ್ಮ ನೆಚ್ಚಿನ ನಾಯಕರ ಮೂಲಕ ಟಿಕೆಟ್ ಪಡೆಯಲು ಭರ್ಜರಿ ಕಸರತ್ತು ನಡೆಸಿದ್ದಾರೆ.
ಸಧ್ಯ ಮುಸ್ಲಿಂರಿಗೆ ಮತ್ತೆ ಮಣೆ ಹಾಕುತ್ತಾ ಕೈ ಹೈಕಮಾಂಡ್ ಕಾದು ನೋಡ ಬೇಕಿದೆ. ಮುಸ್ಲಿಂ ರಿಗೆ ಬಿಟ್ಟು ಲಿಂಗಾಯತ ಅಥವಾ ಕುರುಬ ಸಮುದಾಯಕ್ಕೆ ಅವಕಾಶ ಕೊಡಬೇಕಾ ಎನ್ನುವ ಗೊಂದಲದಲ್ಲಿ ಹೈಕಮಾಂಡ್ ಇದೆ ಎನ್ನಲಾಗಿದೆ.
ಸತತ ಆರು ಚುನಾವಣೆಯಲ್ಲಿ ಸೋಲು ಹಿನ್ನೆಲೆ ಲಿಂಗಾಯತ ಅಥವಾ ಕುರುಬರಿಗೆ ಟಿಕೆಟ್ ನೀಡುವಂತೆ ಒತ್ತಾಯವೂ ಜೋರಾಗಿದೆ.
ಮುಸ್ಲಿಂ ಸಮುದಾಯಕ್ಕೆ ನೀಡಬೇಕು ಎಂದು ಜಮೀರ್ ಸೇರಿದಂತೆ ಹಲವು ನಾಯಕರ ಒತ್ತಡ ಹೇರಿದ್ದಾರೆ ಎನ್ನಲಾಗಿದೆ. ಮುಸ್ಲಿಂ ಸಮುದಾಯಕ್ಕೆ ನೀಡದಿದ್ರೆ ಮುಸ್ಲಿಂ ಸಮುದಾಯದ ಕೋಪಕ್ಕೆ ತುತ್ತಾಗುವ ಆತಂಕ ಕೈ ಹೈಕಮಾಂಡ್ ಗೆ ಎದುರಾಗಿದೆ.
ಬಿಜೆಪಿ ಪಾಳಯದಲ್ಲಿ…
ಇನ್ನು ಬಿಜೆಪಿಯಲ್ಲಿ ಟಿಕೆಟ್ ಗಾಗಿ 57 ಆಕಾಂಕ್ಷಿಗಳಿಂದ ಅರ್ಜಿ ಸಲ್ಲಿಕೆಯಾಗಿದೆ ಪ್ರಬಲ ಅಭ್ಯರ್ಥಿಯನ್ನ ಕಣಕ್ಕಿಳಿಸೋ ಲೆಕ್ಕಾಚಾರದಲ್ಲಿ ಕಮಲ ನಾಯಕರಿದ್ದಾರೆ. ಹೀಗಾಗಿ, ಬೊಮ್ಮಾಯಿ ಪುತ್ರ ಭರತ ಬೊಮ್ಮಾಯಿ ಯಿಂದಲು ಅರ್ಜಿ ಸಲ್ಲಿಕೆಯಾಗಿದೆ. ಇದ್ರ ಜೊತೆ ಅಚ್ಚರಿ ಅಭ್ಯರ್ಥಿಯಾಗ್ತಾರಾ ಮಾಜಿ ಸಚಿವ ಮುರುಗೇಶ ನಿರಾಣಿ ಅನ್ನೋ ಕುತೂಹಲವೂ ಇದೆ. ಶಿಗ್ಗಾವಿ ಅಖಾಡಕ್ಕೆ ಮುರುಗೇಶ ನಿರಾಣಿ ಹೆಸರು ಬಿಜೆಪಿಯಿಂದ ತೇಲೊಬಂದಿದೆ. ಕಣಕ್ಕಿಳಿಯಲು ಉತ್ಸುಕರಾಗಿದ್ದಾರಂತೆ ಮುರುಗೇಶ ನಿರಾಣಿ. ಹೈಕಮಾಂಡ್ ಮಟ್ಟದಲ್ಲು ನಿರಾಣಿ ಹೆಸರು ಚರ್ಚೆಯಾಗಿದೆ ಎನ್ನಲಾಗಿದೆ. ಪಂಚಮಸಾಲಿ ಸಮುದಾಯಕ್ಕೆ ಸೇರಿದ ಮುರುಗೇಶ ನಿರಾಣಿಗೆ ಶಿಗ್ಗಾವಿ ಕ್ಷೇತ್ರದಲ್ಲಿ 40 ಸಾವಿರಕ್ಕೂ ಹೆಚ್ಚು ಪಂಚಮಸಾಲಿ ಮತಗಳು ಸಾಥ್ ನೀಡುವ ಭರವಸೆ ಇದೆ.
ಪಂಚಮಸಾಲಿ ಮತಗಳನ್ನ ಸೆಳೆಯಲು ನಿರಾಣಿ ಅಭ್ಯರ್ಥಿ ಮಾಡುವ ಲೆಕ್ಕಾಚಾರವಿದೆ ಎನ್ನಲಾಗ್ತಿದೆ. ಹೀಗಾಗಿ, ಟಿಕೆಟ್ ಗಾಗಿ ನಿರಾಣಿ ತೆರೆಮರೆಯಲ್ಲೆ ಪ್ರಯತ್ನ ನಡೆಸ್ತಿದಾರೆ ಅನ್ನೊ ಮಾತುಗಳು ಕೇಳಿ ವರ್ತಿವೆ.
ಸ್ಥಳೀಯರಿಗೆ ಟಿಕೆಟ್ ನೀಡುವಂತೆ ಶ್ರೀಕಾಂತ್ ದುಂಡಿಗೌಡರ ಒತ್ತಾಯ ಮಾಡಿದ್ದಾರೆ. ಹೀಗಾಗಿ, ಭರತ್ ಬೊಮ್ಮಾಯಿ, ಶ್ರೀಕಾಂತ್ ದುಂಡಿಗೌಡರ, ಮುರುಗೇಶ ನಿರಾಣಿ ನಡುವೆ ಬಿಜೆಪಿಯಲ್ಲಿ ಟಿಕೆಟ್ ಪೈಟ್ ಇದೆ.