ಶಿಗ್ಗಾವಿ ವಿಧಾನಸಭಾ ಕ್ಷೇತ್ರ ಕಣ ಮತ್ತಷ್ಟು ಕಾವು ಪಡೆದುಕೊಂಡಿದೆ. ಕ್ಷೇತ್ರದಲ್ಲಿ NDA ಮಿತ್ರ ಪಕ್ಷ JDS ತನ್ನ ಪ್ರಾಭಲ್ಯ ತೋರಿಸಲು ಸಜ್ಜಾಗಿದೆ. ಈ ಕಾರಣಕ್ಕಾಗೇ ನಿಖಿಲ್ ಕುಮಾರಸ್ವಾಮಿ ಇಂದು ಶಿಗ್ಗಾವಿಗೆ ಆಗಮಿಸಿದ್ದಾರೆ.
ಶಿಗ್ಗಾವಿಯ ಸಂಗನಬಸವ ಕಲ್ಯಾಣ ಮಂಟಪದಲ್ಲಿ ಜೆಡಿಎಸ್ ಹಮ್ಮಿಕೊಂಡಿರೋ
ಶಿಗ್ಗಾಂವ-ಸವಣೂರ ವಿಧಾನ ಸಭಾ ಕ್ಷೇತ್ರದ ಉಪ ಚುನಾವಣೆಯ ಪೂರ್ವಭಾವಿ ಸಭೆ ಹಾಗೂ ಸದಸ್ಯತ್ವ ನೊಂದಣಿ ಅಭಿಯಾನ ಕಾರ್ಯಕ್ರಮದಲ್ಲಿ ನಿಖಿಲ್ ಕುಮಾರಸ್ವಾಮಿ ಭಾಗಿಯಾಗಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಈ ಬಾರಿ ಮೂರು ಕ್ಷೇತ್ರದಲ್ಲಿ NDA ಅಭ್ಯರ್ಥಿಯನ್ನು ಗೆಲ್ಲಿಸುವ ನಿಟ್ಟಿನಲ್ಲಿ ಮೂರು ಕ್ಷೇತ್ರದಲ್ಲಿ ನಮ್ಮ ಪಕ್ಷದ ಸದಸ್ಯತ್ವ ನೊಂದಣಿ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದರು.
ಮೋದಿಯವರ ಕಾರ್ಯಕ್ರಮ ಮೆಚ್ಚಿ ಅವರ ನಾಯಕತ್ವದಲ್ಲಿ ಹೆಜ್ಹೆ ಹಾಕಲು ದೇವೆಗೌಡರು ತೀರ್ಮಾನ ಮಾಡಿ ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಕುಮಾರಸ್ವಾಮಿಯವರು ಚನ್ನಪಟ್ಟಣದಿಂದ ಎರಡು ಸಲ ಶಾಸಕರಾಗಿ ಆಯ್ಕೆಯಾಗಿದ್ದರು.
ಇವತ್ತು ಕೇಂದ್ರ ಸಚಿವರಾಗಿ ಕೆಲಸ ಮಾಡ್ತಿದಾರೆ. ಚನ್ನಪಟ್ಟಣದಲ್ಲಿ ಜೆಡಿಎಸ್ ನ ಸಾಂಪ್ರದಾಯಿಕ ಮತಗಳಿವೆ. ಅಲ್ಲಿ, JDS ಯಾವುದೇ ಕಾರ್ಯಕರ್ತರನ್ನ ನಿಲ್ಲಿಸಿದ್ರು 80 ಸಾವಿರ ಮತಗಳು ಬೀಳುತ್ತದೆ. ಹೀಗಾಗಿ, ಜೆಡಿಎಸ್ ಕಾರ್ಯಕರ್ತರಿಗೆ ಟಿಕೆಟ್ ನೀಡಬೇಕು ಎನ್ನೋದು ಜೆಡಿಎಸ್ ಮುಖಂಡರು ಕಾರ್ಯಕರ್ತರ ಅಭಿಲಾಷೆ.
ಜೆಡಿಎಸ್ ಗೆ ಟಿಕೆಟ್ ನೀಡುವಂತೆ ನನ್ನ ಒತ್ತಾಯ ಇಲ್ಲ. ಈ ವಿಚಾರದಲ್ಲಿ ನನ್ನ ಕಡೆಯಿಂದ ಗೊಂದಲವಾಗಬಾರದು.
ಯೋಗೇಶ್ವರ ಅವರು ಆಕಾಂಕ್ಷಿ ಎಂದು ಹೇಳಿದ್ದಾರೆ ತಪ್ಪೇನಿಲ್ಲ. ಇಂದು ಸಂಜೆ ಕುಮಾರಸ್ವಾಮಿ, ಯಡಿಯೂರಪ್ಪ ನೇತೃತ್ವದಲ್ಲಿ ಸಮನ್ವಯ ಸಬೆ ನಡೆಯುತ್ತಿದೆ.
ಸಮನ್ವಯ ಸಭೆಯಲ್ಲಿ ಭಾಗಿಯಾಗುತ್ತೇನೆ ಅಂತಾ ತಿಳಿಸಿದ್ರು.