ಮುಂಡಗೋಡ: ಕಾತೂರು ಅರಣ್ಯ ವ್ಯಾಪ್ತಿಯಲ್ಲಿ ಮರಗಳ ಮಾರಣಹೋಮದ ಸುದ್ದಿ ಪಬ್ಲಿಕ್ ಫಸ್ಟ್ ನಲ್ಲಿ ಬಿತ್ತರಿಸಿದ್ದೇ ತಡ, ಕಾತೂರಿನ RFO ಸಾಹೇಬ್ರು ಉರಿದುಬಿದ್ದಿದ್ದಾರಂತೆ. ಅದೇಲ್ಲ ಬುಡುಚಿಗಳು ಹಳೆಯವು, ಅದರ ಮೇಲೆ ಈಗಾಗಲೇ ಕೇಸು ದಾಖಲಿಸಲಾಗಿದೆ ಅಂತೇಲ್ಲ ಬುಸುಗುಟ್ಟಿದ್ದಾರಂತೆ. ಆದ್ರೆ, ಒಂದು ಮಾತ್ರ ಅರ್ಥವಾಗ್ತಿಲ್ಲ. ಈ ಅರಣ್ಯ ಇಲಾಖೆಯ ಅಧಿಕಾರಿಗಳು ಕೇವಲ ಎಫ್ ಐ ಆರ್ ಗಷ್ಟೇ ಸೀಮಿತವಾಗಿಬಿಟ್ರಾ..? ಅಥವಾ ಅರಣ್ಯದಲ್ಲಿ ರಕ್ಷಣೆಯ ಜವಾಬ್ದಾರಿಯನ್ನೇ ಮರೆತ್ರಾ..? ಈ ಪ್ರಶ್ನೆ ಸದ್ಯ ಪರಿಸರ ಪ್ರಿಯರಿಗೆ ಕಾಡ್ತಿದೆ.
12 FIR ಆಗಿದೆಯಂತೆ..!
ನಂಗೆ ನಿಜಕ್ಕೂ ಕಾತೂರಿನ RFO ಸಾಹೇಬ್ರು ಹೇಳಿದ ಈ ಮಾತು ಇನ್ನಿಲ್ಲದ ಆತಂಕ ತರಿಸಿದೆ. ಪಬ್ಲಿಕ್ ಫಸ್ಟ್ ನ್ಯೂಸ್ ನಲ್ಲಿ ವರದಿ ಪ್ರಸಾರ ಆಗ್ತಿದ್ದಂತೆ RFO ಸಾಹೇಬ್ರು ಆ ಸ್ಥಳ ಪರಿಶೀಲನೆ ಮಾಡಿದ್ರಂತೆ. ಆದ್ರೆ ಅಲ್ಲಿರೋ ಮರದ ಬುಡುಚಿಗಳು ಹಳೆಯದಂತೆ, ಅಲ್ಲಿ ಒಟ್ಟೂ 12 ಮರಗಳನ್ನು ಕಳ್ಳರು ಕಡಿದು ಸಾಗಿಸಿದ್ದಾರಂತೆ. ಹೀಗಾಗಿ, 12 FIR ಈಗಾಗಲೇ ಮಾಡಿ ಆಗಿದೆಯಂತೆ. ಅದಕ್ಕೆ ಇದೇಲ್ಲ ದೊಡ್ಡ ಸುದ್ದಿಯೇ ಅಲ್ಲ ಅನ್ನೋದು ಮಾನ್ಯ RFO ಸಾಹೇಬ್ರ ಬೇಜವಾಬ್ದಾರಿಯ ಮಾತು. ಸಾಹೇಬ್ರೆ, ನಿಮಗೆ 12 ಮರಗಳ ಸಾವು ದೊಡ್ಡ ವಿಷಯ ಅಲ್ಲದೇ ಇರಬಹುದು. ಆದ್ರೆ, ನಮಗೆ ಅದು ಹೃದಯ ಹಿಂಡುವ ಸಂಗತಿ. ಒಂದೇ ಒಂದು ಮರ ಕಡಿದು ಉರುಳಿಸಿದ್ರೂ ಅದನ್ನ ಸಹಿಸೋಕೆ ಸಾಧ್ಯವೇ ಇಲ್ಲ. ನಮಗೇಲ್ಲ ಈ ಪಾಠ ಹೇಳಿ ಕೊಟ್ಟವರು ನಮ್ಮವರೇ ಮುಂಡಗೋಡಿನ ಎಸಿಎಫ್ ಸಾಹೇಬ್ರು. ಅವ್ರ ಬಾಯಲ್ಲಿ ನಿಮ್ಮ ಹಾಗೆ ಯಾವತ್ತೂ ಬೇಜವಾಬ್ದಾರಿಯ ಮಾತು ಬರೋಕೆ ಸಾಧ್ಯವೇ ಇಲ್ಲ ಬಿಡಿ. ಅದು ಅವರವರ ಕರ್ತವ್ಯಪರತೆ. ಅದು ಬೇರೆ ಮಾತು. ಸಾಹೇಬ್ರೇ ನೀವೇ ಯೋಚಿಸಿ, ಒಂದೇ ಜಾಗದಲ್ಲಿ ನೀವೇ ಹೇಳಿದ ಹಾಗೇನೇ 12 ಮರಗಳ ಮಾರಣ ಹೋಮ ಆದಾಗ ನಿಮ್ಮ ಇಲಾಖೆ ಅದೇನು ಮಾಡ್ತಿತ್ತು..? ನಿಮ್ಮ ಅರಣ್ಯ ರಕ್ಷಕರು ಅದೇನು ಕಡೆದು ಗುಡ್ಡೆ ಹಾಕ್ತಿದ್ರು.? ಅಷ್ಟಕ್ಕೂ ಅವೇನು ಸಣ್ಣ ಪುಟ್ಟ ಸಸಿಗಳಾ..? ಅಷ್ಟೊಂದು ಬೆಲೆಬಾಳುವ ದೊಡ್ಡ ಮರಗಳನ್ನು ಕಡಿದು ಸಾಗಿಸುವಾಗ ನಿಮ್ಮ ಟೈಟ್ ಸೆಕ್ಯರಿಟಿ ಎಲ್ಲಿ ನಿದ್ದೆಗೆ ಜಾರಿತ್ತು..? ಹೋಗಲಿ, ಅಷ್ಟೇಲ್ಲ ಮರಗಳನ್ನು ಕಡಿದು ಸಾಗಿಸುವಾಗ ಆ ನಿಮ್ಮ ವ್ಯಾಪ್ತಿಯಲ್ಲಿ ಚೆಕ್ ಪೊಸ್ಟ್ ಗಳಾದ್ರೂ ಏನು ಮಾಡ್ತಿದ್ದವು..? ಆ ಹನ್ನೆರಡು ಮರಗಳನ್ನು ಸಾಗಿಸಿದ್ದು ಅದ್ಯಾರೋ ಮಾಂತ್ರಿಕರಾ, ಮಾಯಾವಿಗಳಾ..? ನಿಮ್ಮ ಕಣ್ಣಿಗೆ ಅವ್ರೇಲ್ಲ ಕಾಣಲೇ ಇಲ್ಲವಾ..? ಈ ಎಲ್ಲಾ ಪ್ರಶ್ನೆ ಕೇಳ್ತಿದಾರೆ ಜನ..!
ಓಕೆ ಅದು ಹಳೆಯದೇ ಅಂತಾ ಇಟ್ಕೊಳ್ಳಿ, ಆ ಅರಣ್ಯ ಪ್ರದೇಶವಾದ್ರೂ ಎಂತಾದ್ದು..? ಅಕ್ಷರಶಃ ರಸ್ತೆಯ ಪಕ್ಕದಲ್ಲೇ ಇರೋದು ಆ ಜಾಗ, ಅದ್ರಲ್ಲೂ ಅದೇಲ್ಲ ನಡೆದಿರೋದು ನಿಮ್ಮ ಇಲಾಖೆ ಕಾವಲಿಗಾಗಿ ಕಟ್ಟಿಕೊಂಡಿದ್ದ ಜೋಪಡಿಯ ಕೂಗಳತೆ ದೂರದಲ್ಲೇ ತಾನೆ..? ಹಾಗಿದ್ರೆ, ಅಲ್ಲಿ ಅದೇಲ್ಲವನ್ನೂ ಕಡಿದು ಸಾಗಿಸುವಾಗ ನೀವೇಲ್ಲಿ ಹೋಗಿದ್ರಿ..? ಅಷ್ಟಕ್ಕೂ ಯಾರೋ ಅರಣ್ಯ ಸಂಪತ್ತನ್ನು ಕಡಿದು ಮರಗಳ ಹೆಣ ಉರುಳಿಸಿದ ಮೇಲೆಯಷ್ಟೇ ತಾವೇಲ್ಲ ಎದ್ನೋ ಬಿದ್ನೋ ಅಂತಾ ಓಡೋಡಿ ಬಂದು, ಎಫ್ ಐ ಆರ್ ದಾಖಲಿಸಲಷ್ಟೇ ಸೀಮಿತವಾಗಿದೆಯಾ ನಿಮ್ಮ ಇಲಾಖೆ..? ಇದೇಲ್ಲ ಪ್ರಶ್ನೆಗಳು ಪರಿಸರ ಪ್ರಿಯರು ಕೇಳ್ತಿದಾರೆ.
12 ರ ಪ್ರಶ್ನೆ..?
ಸಾಹೇಬ್ರೆ, ನೀವೇ ಹೇಳಿದಂಗೆ ಆ ಭಾಗದಲ್ಲಿ ಹೋಗಿದ್ದು ಕೇವಲ 12 ಮರಗಳು, ಓಕೆ ಗುಡ್, ಅದನ್ನ ಒಪ್ಪಿಕೊಳ್ಳೋಣ. ಹಾಗಿದ್ರೆ, ಅವೇಲ್ಲ ಕಳ್ಳತನವಾಗಿದ್ದು ಯಾವಾಗಾ..? ಮತ್ತೆ ಅದರ ಮೇಲೆ ತಾವುಗಳು FIR ದಾಖಲಿಸಿದ್ದು ಯಾವಾಗ..? ಹಾಗೆನೇ, ಸದ್ಯ ಹಾಗೆ ಕೇಸು ದಾಖಲಿಸಿಕೊಂಡ ನಂತರ ತಾವುಗಳು ಪಡೆದ ಮುಂದಿನ ಕ್ರಮಗಳೇನು..? ಕಳ್ಳತನವಾಗಿ ಹೋಗಿದ್ದ ಕಟ್ಟಿಗೆಯನ್ನು ಜಪ್ತಿ ಮಾಡಿದ್ರಾ..? ಆರೋಪಿಗಳು ಸಿಕ್ಕಿ ಬಿದ್ರಾ..? ಅಷ್ಟಕ್ಕೂ ಹಾಗೆ ಕಾಡು ಕಡಿದುಕೊಂಡ ಹೋಗಿದ್ದ ಎಷ್ಟು ಜನರನ್ನ ಬಂಧಿಸಿದ್ರಿ..? ಯಾವಾಗ ಬಂಧಿಸಿದ್ರಿ..? ಹೋಗ್ಲಿ, ಇನ್ನೂ ತನಿಖಾ ಹಂತದಲ್ಲಿದೆಯಾ..? ಹಾಗಿದ್ರೆ, ನೀವೇ ತಿಳಿಸಿರುವಂತೆ ಅಷ್ಟೊಂದು ಹಳೆಯ ಕೇಸ್ ಬೇಧಿಸಲು ನಿಮಗ್ಯಾಕೆ ಇನ್ನೂ ಸಾಧ್ಯವಾಗಿಲ್ಲ..? ಅದೂಹೋಗಲಿ, ಅಲ್ಲಿ 12 ಮರಗಳನ್ನು ಕಡಿದು ಸಾಗಾಟ ಮಾಡಿದ್ದಾರೆ ಅಂತಾ ಹೇಳಿದ್ರಲ್ಲ..? ಹಾಗಿದ್ರೆ ಅಲ್ಲಿ ನಿಮ್ಮವರ ಕರ್ತವ್ಯ ಲೋಪ ಆಗಿರಲಿಲ್ಲವಾ..? ಹಾಗಿದ್ರೆ ಯಾವ ಸಿಬ್ಬಂದಿಯ ಮೇಲೆ ಕ್ರಮ ಕೈಗೊಂಡ್ರಿ. ಕರ್ತವ್ಯಲೋಪದಲ್ಲಿ ಯಾರನ್ನ ಹೊಣೆ ಮಾಡಿದ್ರಿ..? ಅದೇಲ್ಲ ಮಾಹಿತಿಗಳನ್ನು ತಾವು ಸಾರ್ವಜನಿಕರಿಗೆ ಕೊಡಲಬೇಕಿದೆ ಅಲ್ವಾ..? ಹಾಗಿದ್ರೆ ಯಾವಾಗ ಮಾಹಿತಿ ಕೊಡ್ತಿರಿ ಮಾನ್ಯ RFO ಸಾಹೇಬ್ರೆ..? ಓಕೆ ನಾವೇ ಅರ್ಜಿ ಹಾಕಿ ಮಾಹಿತಿ ಪಡೆದುಕೊಳ್ಳಬೇಕು ಅಂತಾದ್ರೆ ಅದಕ್ಕೂ ರೆಡಿಯಿದ್ದಾರೆ ಪರಿಸರ ಪ್ರಿಯರು. ಕೊಡೊಕೆ ನೀವು ರೆಡಿಯಾಗಿರಿ ಅಷ್ಟೆ. ಧನ್ಯವಾದಗಳು..!