ಮುಂಡಗೋಡ ತಾಲೂಕಿನ ಕೊಪ್ಪ(ಇಂದೂರು) ಗ್ರಾಮದಲ್ಲಿ ಪತ್ನಿಯ ತವರು ಮನೆ ಮುಂದೆಯೇ ಪೆಟ್ರೊಲ್ ಸುರಿದುಕೊಂಡು ವ್ಯಕ್ತಿಯೋರ್ವ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿರೋ ಘಟನೆ ನಡೆದಿದೆ. ಶನಿವಾರ ತಡರಾತ್ರಿ ನಡೆದಿರೋ ಘಟನೆಯಲ್ಲಿ ವ್ಯಕ್ತಿ ಗಂಭೀರ ಗಾಯಗೊಂಡಿದ್ದು ಹುಬ್ಬಳ್ಳಿಯ ಕಿಮ್ಸ್ ನಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.

ಮುಂಡಗೋಡ ತಾಲೂಕಿನ ನಂದಿಕಟ್ಟಾ ಗ್ರಾಮದ ಅರವಿಂದ ಚಿತ್ತರಗಿ ಎಂಬುವ ವ್ಯಕ್ತಿಯೇ ಆತ್ಮಹತ್ಯೆಗೆ ಯತ್ನಿಸಿದ್ದು, ಸದ್ಯ ಚಿಕಿತ್ಸೆ ಪಡೆಯುತ್ತಿದ್ದಾನೆ. ಶನಿವಾರ ದೀಪಾವಳಿ ಹಬ್ಬದ ದಿನ ರಾತ್ರಿ ಪತ್ನಿಯ ಮನೆಗೆ ಆಗಮಿಸಿದ್ದ ಅರವಿಂದ್, ಮನೆಯ ಮುಂಬಾಗದಲ್ಲೇ ಪೆಟ್ರೊಲ್ ಸುರಿದುಕೊಂಡಿದ್ದ ಅಂತ ಹೇಳಲಾಗಿದೆ. ಆ ವೇಳೆ ದೀಪಾವಳಿ ನಿಮಿತ್ತ ಹಚ್ಚಿ ಇಟ್ಟಿದ್ದ ದೀಪದಿಂದ ಬೆಂಕಿ ತಗುಲಿ ಏಕಾಏಕಿ ಹೊತ್ತಿ ಉರಿದಿದೆ. ತಕ್ಷಣವೇ ಮನೆಯವರು ಹಾಗೂ ಸ್ಥಳೀಯರು ಬೆಂಕಿನಂದಿಸಿ, ಮುಂಡಗೋಡ ತಾಲೂಕಾಸ್ಪತ್ರೆಗೆ ರವಾನಿಸಿದ್ದಾರೆ. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಗೆ ರವಾನಿಸಲಾಗಿದೆ ಅಂತಾ ತಿಳಿದು ಬಂದಿದೆ.

ಆತ್ಮಹತ್ಯೆ ಯತ್ನಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

error: Content is protected !!