ಕಾತೂರಿನಿಂದ ಹಾನಗಲ್ ಅಡ್ಡೆಗೆ ಸಾಗಿಸಿದ್ದ ಕಟ್ಟಿಗೆ ಕೇಸ್ ತನಿಖೆ ಏನಾಯ್ತು..? ಅಷ್ಟಕ್ಕೂ, ಆ ಕಟ್ಟಿಗೆ ಕಾತೂರಿನ ಆ ಫಾರೆಸ್ಟರನದ್ದಾ..?

ಮುಂಡಗೋಡ: ತಾಲೂಕಿನ ಕಾತೂರು ಅರಣ್ಯ ವ್ಯಾಪ್ತಿಯ ಅಧಿಕಾರಿಗಳಿಗೆ ಅದೇನಾಗಿದೆಯೋ ಗೊತ್ತಿಲ್ಲ. ಅಲ್ಲಿನ ಹಲವು ಸಂಗತಿಗಳು ಬಗೆದಷ್ಟು ಹೊರಬೀಳುತ್ತಿವೆ.
ಅಸಲು, ಕಾತೂರು ಅರಣ್ಯ ಇಲಾಖೆಯಲ್ಲೇ ಕಾರ್ಯ ನಿರ್ವಹಿಸ್ತಿರೋ ಅವನೊಬ್ಬ ಅಧಿಕಾರಿಯಿಂದ ಹಾವೇರಿ ಜಿಲ್ಲೆಯ ಹಾನಗಲ್ಲಿನ ಅದೊಂದು ಕಟ್ಟಿಗೆ ಅಡ್ಡೆ ಅನಾಮತ್ತಾಗಿ ಸೀಜ್ ಆಗಿದೆ. ಅಂದಹಾಗೆ ಇದು ಇವತ್ತಿನ ಮಾತಲ್ಲ. ಸರಿಸುಮಾರು ಕಳೆದ ಎಪ್ರೀಲ್ ಕೊನೆಯ ವಾರದಲ್ಲಿ ನಡೆದಿದ್ದ ಘಟನೆ ಈಗ ಅಕ್ಷರಶಃ ಕೊನೆಯ ಮೊಳೆ ಬೀಳುವ ಹಂತದಲ್ಲಿದೆಯಂತೆ.

ಸಾಂದರ್ಭಿಕ ಚಿತ್ರ

ಅಷ್ಟಕ್ಕೂ ನಡೆದದ್ದೇನು..?
ಹಾವೇರಿ ಜಿಲ್ಲೆಯ ಹಾನಗಲ್ಲಿನ ಅದೊಂದು ಕಟ್ಟಿಗೆ ಅಡ್ಡೆಗೆ ಕಾತೂರು ಅರಣ್ಯದಿಂದ ಎಪ್ರೀಲ್ ತಿಂಗಳಲ್ಲಿ ಕಟ್ಟಿಗೆ ಸಾಗಿಸಿರಲಾಗಿರತ್ತೆ. ಆ ಹೊತ್ತಲ್ಲಿ ಖಚಿತ ಮಾಹಿತಿ ಪಡೆದಿದ್ದ ಹಾನಗಲ್ RFO ಶಿವರಾಜ್ ಮಠದ್ ರೇಡು ಹಾಕಿರ್ತಾರೆ. ಆ ಹೊತ್ತಲ್ಲಿ ಅಲ್ಲಿ ಅಕ್ರಮದಿಂದಲೇ ಸಾಗಿಸಿರಬಹುದು ಅನ್ನಲಾಗಿದ್ದ ಕಟ್ಟಿಗೆ ಸಿಕ್ಕಾಕಿಕೊಂಡಿರತ್ತೆ. ಅಸಲು, ಅಲ್ಲಿ ಸಿಕ್ಕಿದ್ದ ಕಟ್ಟಿಗೆಗೆ ದಾಸ್ತಾನು ಪರ್ಮಿಟ್ ಮಾತ್ರ ಇರತ್ತೆ. ಅದ್ಯಾರದ್ದೋ ಖಾಸಗಿಯವರ ಮಾಲ್ಕಿ ಪರ್ಮಿಟ್ ಮೂಲಕ ಅಲ್ಲಿಗೆ ಕಟ್ಟಿಗೆ ಕೊಂಡೊಯ್ಯಲಾಗಿರತ್ತೆ. ಹಾಗಂತ, ಆ ಎಲ್ಲಾ ಮಾಲಿಗೂ ಅವಶ್ಯಕವಾಗಿ ಬೇಕಾಗಿದ್ದ ಟ್ರಾನ್ಸಪೋರ್ಟ್ ಪರ್ಮಿಟ್ ದುರ್ಬಿನ್ ಹಾಕಿ ಹುಡುಕಿದ್ರೂ ಅವತ್ತು ಅಲ್ಲಿನ ಅಧಿಕಾರಿಗಳಿಗೆ ಸಿಗಲೇ ಇಲ್ಲ. ಸಿಗಲೇ ಇಲ್ಲ ಅನ್ನೋದಕ್ಕಿಂತ ಟ್ರಾನ್ಸಪೋರ್ಟ್ ಪರ್ಮಿಟ್ ಪಡೆಯದೇ ಬಂಢ ದೈರ್ಯದಲ್ಲಿ ಕಾತೂರಿನಿಂದ ಹಾನಗಲ್ಲಿನ ವರೆಗೂ ಅದನ್ನೇಲ್ಲ ಸಾಗಿಸರಲಾಗಿತ್ತೆ ಅನ್ನೋ‌ ಮಾಹಿತಿ ಅವ್ರಿಗೆ ಕನ್ಪರ್ಮ್ ಆಗಿತ್ತು. ಅಲ್ಲದೇ ದಾಸ್ತಾನಿನ ಕಟ್ಟಿಗೆಯ ವಿಷಯದಲ್ಲಿ ಪರ್ಮಿಟ್ ಲೆಕ್ಕಾಚಾರಕ್ಕೂ ಅಲ್ಲಿದ್ದ ಕಟ್ಟಿಗೆಗಳ ಲೆಕ್ಕಾಚಾರಗಳಿಗೂ ಯಪರಾತಪರಿ ಇತ್ತಂತೆ. ಹೀಗಾಗಿ, ಅದನ್ನೇಲ್ಲ ಗಮನಿಸಿದ್ದ ಹಾನಗಲ್ಲಿನ ದಕ್ಷ RFO ಶಿವರಾಜ್ ಮಠದ್ ಆ ಇಡೀ ಕಟ್ಟಿಗೆ ಅಡ್ಡೆಯನ್ನೇ ಸೀಜ್ ಮಾಡಿರ್ತಾರೆ.

ಹಾನಗಲ್ಲಿನ ದಕ್ಷ RFO ಮಠದ್

ಅಡ್ಡೆ ಮಾಲೀಕ ಹೇಳಿದ್ದ..!
ಇನ್ನು, RFO ಮಠದ್ ಸಾಹೇಬ್ರು ಯಾವಾಗ ಕಟ್ಟಿಗೆ ಅಡ್ಡೆ ಸೀಜ್ ಮಾಡಿದ್ರೋ, ಅಲ್ಲಿನ ಅಡ್ಡೆಯ ಮಾಲೀಕ ಅಲ್ಲಿ ಸಿಕ್ಕಿದ್ದ ಕಟ್ಟಿಗೆಯ ಅಸಲೀ ಮಾಲೀಕ ಯಾರು ಅಂತಾ ಬಾಯಿ ಬಿಟ್ಟಿದ್ದ. ದುರಂತ ಅಂದ್ರೆ ಹಾಗೆ ಟ್ರಾನ್ಸ್ ಪೋರ್ಟ್ ಪರ್ಮಿಟ್ ಪಡೆಯದೇ ಹಾನಗಲ್ಲಿಗೆ ಕಟ್ಟಿಗೆ ಸಾಗಿಸಿದ್ದು ಕಾತೂರಿನ ಅದೊಬ್ಬ ಅರಣ್ಯ ಅಧಿಕಾರಿ ಅಂತಾ ಅವತ್ತೇ ಬಟಾಬಯಲು ಮಾಡಿದ್ದ. ಹೀಗಾಗಿ, ಆ ಪ್ರಕರಣವನ್ನು ಸಿರಿಯಸ್ ಆಗಿ ತೆಗೆದುಕೊಂಡ ಹಾನಗಲ್ಲಿ‌ನ RFO ಶಿವರಾಜ್ ಮಠದ್ ತಕ್ಷಣವೇ ಪ್ರಕರಣದ ಸಂಪೂರ್ಣ ಮಜಕೂರಗಳನ್ನೂ ಅಲ್ಲಿನ ಎಸಿಎಫ್ ರವರಿಗೆ ವರದಿ ನೀಡಿದ್ದರು.

ಆ ನಂತರ..!
ಇಷ್ಟೇಲ್ಲ ನಡೆದ ನಂತರ, ಹಾನಗಲ್ಲಿನ ಎಸಿಎಫ್ ಸಾಹೇಬ್ರು ಆ ಇಡೀ ಪ್ರಕರಣದ ಫೈಲನ್ನು ಯಥಾವತ್ತಾಗಿ ಮುಂಡಗೋಡಿನ ಅರಣ್ಯ ಇಲಾಖೆಗೆ ವರ್ಗಾಯಿಸಿದ್ದಾರೆ. ಕೂಲಂಕುಶವಾಗಿ ತನಿಖೆ‌ ಮಾಡಿ ವರದಿ ನೀಡಿ ಅಂತಾ ಅವತ್ತೇ ರವಾನಿಸಿದ್ದಾರೆ. ಹೀಗಾಗಿ, ಆ ಪ್ರಕರಣದ ಫೈಲು ಸದ್ಯ ಮುಂಡಗೋಡಿನ ಎಸಿಎಫ್ ರವರ ಟೇಬಲ್ಲಿನ ಮೇಲೆ ಬಿದ್ದು ತಿಂಗಳುಗಳೇ ಕಳೆದಿದೆ ಅನ್ನೋ ಮಾಹಿತಿ ಇದೆ. ಆದ್ರೆ, ಕ್ರಮವಿರಲಿ, ಆ ಫೈಲನ್ನು ತೆರೆದು ನೋಡಿದ್ದಾರೋ ಇಲ್ವೋ ಗೊತ್ತಿಲ್ಲ. ಅಷ್ಟಕ್ಕೂ ಇದೇಲ್ಲ ಮುಂಡಗೋಡಿನ ದಕ್ಷ ಎಸಿಎಫ್ ವಾಲಿ ಸಾಹೇಬ್ರ ಗಮನಕ್ಕೆ ತರಲಾಗಿದೆಯೋ ಇಲ್ವೊ ಅದೂ ಕೂಡ ಗೊತ್ತಿಲ್ಲ. ಯಾಕಂದ್ರೆ, ಆ ಐನಾತಿ ಫಾರೆಸ್ಟರ್ ನಿಗೆ ಅದೇಂತದ್ದೋ ದೊಡ್ಡ ದೊಡ್ಡವರ ಬಲ ಇದೆ ಅಂತೆ. ರಾಜಕೀಯದವರ ಕೃಪಾಕಟಾಕ್ಷ ಇದೆಯಂತೆ. ಹೀಗಾಗಿ, ಆತನ ತಂಟೆಗೆ ಯಾರೂ ಹೋಗೋಕೆ ಭಯ ಪಡ್ತಾರಂತೆ. ಅಂತಹದ್ದೊಂದು ಹವಾ‌ ಮೆಂಟೇನ್ ಮಾಡಿ ಓಡಾಡಿಕೊಂಡಿರೋ ಆತನ ಅಕ್ರಮಗಳ ಯಾದಿಗಳು ನಿಮ್ಮ ಮುಂದೆ ಇನ್ನೇನು ಬಟಾಬಯಲಾಗಲಿದೆ. ಅದಕ್ಕಾಗಿ ಒಂದಿಷ್ಟು ಕಾಯಬೇಕಷ್ಟೆ.

ಸಾಂದರ್ಭಿಕ ಚಿತ್ರ

ಹಾನಗಲ್ಲಿಗೆ ಹೋಗಿದ್ದು ಯಾಕೆ..?
ಅಸಲು, ಈ ಪ್ರಕರಣದಲ್ಲಿ ಖುದ್ದು ಅರಣ್ಯ ಇಲಾಖೆಯಲ್ಲೇ ತಿಂದುಂಡು ದುಂಡಗಾದ ಅಧಿಕಾರಿ ಕಾತೂರು ಅರಣ್ಯ ವ್ಯಾಪ್ತಿಯಿಂದ ಹಾನಗಲ್ಲಿನ ಕಟ್ಟಿಗೆ ಮಿಲ್ ಗೆ ಹೋಗಿದ್ದಾದ್ರೂ ಯಾಕೆ..? ಹಾಗಿದ್ರೆ ಅಲ್ಲಿ ಸಾಗಿಸಿದ್ದ ಕಟ್ಟಿಗೆ ಅಕ್ರಮವೋ, ಸಕ್ರಮವೋ..? ಅಷ್ಟಕ್ಕೂ ಅಲ್ಲಿಗೆ ಕಟ್ಟಿಗೆ ಕಳಿಸಿ ಕೊರೆಸುವ ಜರೂರತ್ತಾದ್ರೂ ಏನಿತ್ತು..? ಅದು ಇಲಾಖೆಯ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದೇ ಮಾಡಲಾಗಿತ್ತಾ..? ಅಷ್ಟಕ್ಕೂ ಆ ಕಟ್ಟಿಗೆ ಎಲ್ಲಿಯದು..? ಎಲ್ಲಿ ಖರೀಧಿಸಲಾಗಿತ್ತು..? ಅಸಲು ಅದರ ಮೌಲ್ಯವೆಷ್ಟು..? ಈ ಎಲ್ಲಾ ಪ್ರಶ್ನೆಗಳು ಇಡೀ ಇಡಿಯಾಗಿ ಕಾತೂರು ಹಾಗೂ ಹಾನಗಲ್ಲಿನ ತುಂಬ ಹರಿದಾಡ್ತಿವೆ.

ತನಿಖೆ ಯಾವಾಗ..?
ಅಸಲು, ಹಾನಗಲ್ ಎಸಿಎಫ್ ಸಾಹೇಬ್ರು ಕಳಿಸಿರೋ ಫೈಲ್ ನ ತನಿಖೆ ಯಾವಾಗ ಶುರುವಾಗತ್ತೆ..? ಆ ತನಿಖೆಯ ಹಾದಿಗೆ ಯಾರಾದ್ರೂ ಬಲಿಷ್ಟ ಕೈಗಳು ತಡೆಯೊಡ್ಡಿದ್ದಾವಾ..? ಹಾಗೇನೂ ಇಲ್ಲ ಅಂದ್ರೆ ಆ ತನಿಖೆಯ ಫೈಲು ತಿಂಗಳುಗಳ ಕಾಲ ಯಾಕೆ ಧೂಳು ತಿನ್ನುತ್ತಿದೆ..? ಇದನ್ನೇಲ್ಲ ಅರಣ್ಯ ಅಧಿಕಾರಿಗಳು ಉತ್ತರಿಸಬೇಕಿದೆ‌. ಇಲ್ಲಿ ತಪ್ಪೋ ಒಪ್ಪೋ ಗೊತ್ತಿಲ್ಲ. ಅಲ್ಲಿ ಸಿಕ್ಕಿರುವ ಕಟ್ಟಿಗೆ ಅಕ್ರಮವೋ ಸಕ್ರಮವೋ ಅದೂ ಕೂಡ ಗೊತ್ತಿಲ್ಲ. ಅದೇಲ್ಲ ಸತ್ಯಾಂಶ ಏನೇ ಇರಲಿ ಸಾರ್ವಜನಿಕರಿಗೂ ತಿಳಿಯಬೇಕಿದೆ‌ ಅಲ್ವಾ..?

error: Content is protected !!