ಶಿಗ್ಗಾಂವ ಕ್ಷೇತ್ರದ ಉಪ ಚುನಾವಣೆಗೆ ನಾಮ ಪತ್ರ ಸಲ್ಲಿಕೆಗೆ ಕೊನೆಯದಿನವಾದ ಅ.25ರ ಶುಕ್ರವಾರ 20ಅಭ್ಯರ್ಥಿಗಳು 25 ನಾಮಪತ್ರಗಳನ್ನು ಸಲ್ಲಿಸಿದ್ದಾರೆ.
ಇಂಡಿಯನ್ ನ್ಯಾಷನಲ್ ಕಾಂಗ್ರೆಸ್‌ನಿಂದ ಯಾಸಿರ ಅಹ್ಮದಖಾನ ಪಠಾಣ 4, ಭಾರತೀಯ ಜನತಾ ಪಾರ್ಟಿಯಿಂದ ಭರತ ಬೊಮ್ಮಾಯಿ ಅವರು 2, ಪಕ್ಷೇತರವಾಗಿ ಸೈಯದ್ ಅಜೀಂಪೀರ ಖಾದ್ರಿ 2, ಕರ್ನಾಟಕ ರಾಷ್ಟ್ರ ಸಮಿತಿಯಿಂದ ರವಿ ಕೃಷ್ಣಾರೆಡ್ಡಿ, ಇಂಡಿಯನ್ ಪೊಲಿಟಿಕಲ್ ಕಾಂಗ್ರೆಸ್‌ನಿಂದ ಮಕ್ತುಮಸಾಬ ಮುಲ್ಲಾ, ಉತ್ತಮ ಪ್ರಜಾಕೀಯ ಪಕ್ಷದಿಂದ ಸಚಿನಕುಮಾರ ಕರ್ಜೇಕಣ್ಣನವರ, ಟಿಪ್ಪು ಸುಲ್ತಾನ ಪಾರ್ಟಿಯಿಂದ ಶೌಖತಅಲಿ ಬಂಕಾಪೂರ, ಪಕ್ಷೇತರರಾಗಿ ರಾಜು ನಾಯಕವಾಡಿ, ಶಂಕ್ರಪ್ಪ ಹುಲಸೋಗಿ, ಜಿತೇಂದ್ರ ಕನವಳ್ಳಿ, ಶಾಮಾಚಾರಿ ಕಮ್ಮಾರ, ಉಮೇಶ ದೈವಜ್ಞ, ಸಿದ್ದಪ್ಪ ಹೊಸಳ್ಳಿ, ಜಿ.ಅಂಜನಕುಮಾರ, ಗುರುಸಿದ್ದಗೌಡ ದ್ಯಾವನಗೌಡ್ರ, ಮಂಜುನಾಥ್ ಕುನ್ನೂರ, ಲಾಲಸಾಬ ನದಾಫ, ಅಂಬ್ರೋಸ್ ಮೆಲ್ಲೊ, ನಬಿಸಾಬ ಮೆಳ್ಳಗಟ್ಟಿ ಹಾಗೂ ಸಾತಪ್ಪ ದೇಸಾಯಿ ತಲಾ ಒಂದು ನಾಮ ಸಲ್ಲಿಸಿದ್ದಾರೆ.
ಶಿಗ್ಗಾಂವ ತಹಶೀಲ್ದಾರ ಕಚೇರಿಯಲ್ಲಿ ಸವಣೂರ ಉಪ ವಿಭಾಗಾಧಿಕಾರಿ ಹಾಗೂ ಚುನಾವಣಾಧಿಕಾರಿ ಮಹ್ಮದ್ ಖಿಜರ್ ಅವರಿಗೆ ನಾಮಪತ್ರ ಸಲ್ಲಿಸಿದರು. ತಹಶೀಲ್ದಾರ ಹಾಗೂ ಸಹಾಯಕ ಚುನಾವಣಾಧಿಕಾರಿ ಸಂತೋಷ ಹಿರೇಮಠ ಅವರು ಉಪಸ್ಥಿತರಿದ್ದರು.
ಈವರೆಗೆ 25 ಅಭ್ಯರ್ಥಿಗಳಿಂದ 46 ನಾಮಪತ್ರ ಸಲ್ಲಿಕೆಯಾಗಿವೆ. ಅ.28 ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ ಹಾಗೂ ಅ.30 ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನಾಂಕವಾಗಿದೆ.