ಸಾಲಗಾಂವಿಯಲ್ಲಿ ಮಳೆಯ ಅರ್ಭಟ, ತುಂಬಿದ ಕೆರೆ, ನೋಡಲು ಹೋದ ಬಾಲಕ ಕೆರೆಯಲ್ಲೇ ನಾಪತ್ತೆ..!

ಮುಂಡಗೋಡ: ಮಳೆಯ ಅರ್ಭಟ ನೋಡಲು ಹೋದ ಒಂಬತ್ತನೇ ತರಗತಿಯ ಬಾಲಕನೋರ್ವ ಕೆರೆಯಲ್ಲಿ ನಾಪತ್ತೆಯಾಗಿದ್ದಾನೆ. ಮುಂಡಗೋಡ ತಾಲೂಕಿನ ಸಾಲಗಾಂವ್ ಸಮೀಪದ ತುಂಬರ್ಗಿ ರಸ್ತೆಯಲ್ಲಿರೋ ಗೌಡನಕಟ್ಟಿ ಕೆರೆಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ.

ಸಾಲಗಾಂವ್ ಗ್ರಾಮದ ಪರಶುರಾಮ ಹನ್ಮಂತಪ್ಪ ದುರಮುರ್ಗಿ (15) ಎಂಬುವ
ಒಂಬತ್ತನೇ ತರಗತಿ ವಿದ್ಯಾರ್ಥಿಯೇ ಕೆರೆಯಲ್ಲಿ ನಾಪತ್ತೆಯಾಗಿದ್ದಾನೆ. ಈತ ನಿನ್ನೆ ಮದ್ಯಾಹ್ನದಿಂದಲೇ ಮನೆಯಿಂದ ಹೊರಟವನು, ಸಂಜೆಯಾದರೂ ಮನೆಗೆ ಬಂದಿರಲಿಲ್ಲ. ಹೀಗಾಗಿ, ಗಾಬರಿಗೊಂಡ ಪೋಷಕರು ಎಲ್ಲ ಕಡೆ ಹುಡುಕಿದ್ದಾರೆ. ಸಿಗದೇ ಇದ್ದಾಗ ರಾತ್ರಿ ಮುಂಡಗೋಡ ಠಾಣೆಗೆ ಬಂದು ಕಾಣೆಯಾಗಿರೋ ಬಗ್ಗೆ ದೂರು ನೀಡಿದ್ದಾರೆ.

ಹೀಗಾಗಿ, ಬೆಳ್ಳಂ ಬೆಳಿಗ್ಗೆಯೇ ಪಿಎಸ್ಐ ಪರಶುರಾಮ್ ಮಿರ್ಜಿಗಿ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ. ಕಾಣೆಯಾಗಿದ್ದ ಬಾಲಕನ ಪತ್ತೆಗೆ ಮುಂದಾಗಿದ್ದಾಗ, ತುಂಬರ್ಗಿ ರಸ್ತೆಯಲ್ಲಿರೊ ಗೌಡನಕಟ್ಟಿ ಕೆರೆಯ ದಂಡೆಯ ಮೇಲೆ ಬಾಲಕನ ಬಟ್ಟೆ ಬರೆಗಳು ಪತ್ತೆಯಾಗಿವೆ. ಹೀಗಾಗಿ, ಕೆರೆಯಲ್ಲಿ ಬಾಲಕ ನೀರುಪಾಲಾಗಿರೋ ಅನುಮಾನ ವ್ಯಕ್ತವಾಗಿದೆ. ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿಗಳು ಬಾಲಕನಿಗಾಗಿ ಕೆರೆಯಲ್ಲಿ ಶೋಧ ಕಾರ್ಯಾಚರಣೆ ನಡೆಸಲು ಮುಂದಾಗಿದ್ದಾರೆ.

error: Content is protected !!