ಶಿಗ್ಗಾವಿ ಕೇತ್ರದ ಉಪ ಚುನಾವಣೆಗೆ ಉಮೇದುವಾರಿಕೆ ಸಲ್ಲಿಸಿದ್ದ 26 ಅಭ್ಯರ್ಥಿಗಳ ಪೈಕಿ 19 ಅಭ್ಯರ್ಥಿಗಳ ನಾಮಪತ್ರ ಅಂಗೀಕರವಾಗಿದ್ದು, 7 ನಾಮಪತ್ರಗಳು ತಿರಸ್ಕೃತವಾಗಿದೆ.

ಚುನಾವಣಾಧಿಕಾರಿ ಮಹ್ಮದ್ ಖಿಜರ್ ನೇತೃತ್ವದ ತಂಡ ಸೋಮವಾರ ನಾಮಪತ್ರ ಪರಿಶೀಲನೆ ನಡೆಸಿತು. 26 ಅಭ್ಯರ್ಥಿಗಳಿಂದ ಸಲ್ಲಿಕೆಯಾಗಿದ್ದ 46 ನಾಮಪತ್ರಗಳ ಪೈಕಿ 7 ಅಭ್ಯರ್ಥಿಗಳ ನಾಮಪತ್ರಗಳು ತಿರಸ್ಕೃತಗೊಂಡಿದೆ. 19 ಅಭ್ಯರ್ಥಿಗಳ ನಾಮಪತ್ರಗಳು ಅಂಗೀಕಾರವಾಗಿವೆ. ಅ.30ರಂದು ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನವಾಗಿದೆ.

ಬಿಜೆಪಿಯ ಭರತ್ ಬೊಮ್ಮಾಯಿ, ಕಾಂಗ್ರೆಸ್‌ನ ಯಾಸಿರ್ ಅಹ್ಮದಖಾನ್‌ ಪಠಾಣ, ಸೋಸಿಯಾಲಿಸ್ಟ್ ಪಾರ್ಟಿ(ಇಂಡಿಯಾ) ಅಭ್ಯರ್ಥಿ ಖಾಜಾಮೊದ್ದೀನ ಗುಡಗೇರಿ, ಹಿಂದೂಸ್ತಾನ ಜನತಾ ಪಕ್ಷದ ಅಭ್ಯರ್ಥಿ ತಳವಾರ ಶಿವಕುಮಾರ, ಕರ್ನಾಟಕ ರಾಷ್ಟ್ರ ಸಮಿತಿ (ಕೆಆರ್‌ಎಸ್‌) ಅಭ್ಯರ್ಥಿ ರವಿ ಕೃಷ್ಣಾರೆಡ್ಡಿ, ಟಿಪ್ಪು ಸುಲ್ತಾನ್ ಪಾರ್ಟಿ ಅಭ್ಯರ್ಥಿ ಶೌಖತ್ ಅಲಿ ಬಂಕಾಪೂರ, ಪಕ್ಷೇತರ ಅಭ್ಯರ್ಥಿಗಳಾದ ಡಾ.ಜಿ.ಎಚ್‌. ಇಮ್ರಾಪುರ, ಗುರುಸಿದ್ದಗೌಡ್ರ, ಜಿತೇಂದ್ರ ಕನವಳ್ಳಿ, ನಬಿಸಾಬ್‌ ಅಲ್ಲಿಸಾಬ್‌ ಮೆಳ್ಳೆಗಟ್ಟಿ, ಮಕ್ತುಮಸಾಬ ಜಾಪರಸಾಬ ಮುಲ್ಲಾ, ರಾಜು ನಾಯಕವಾಡಿ, ವೀರಯ್ಯ ಓದಿಸುವಮಠ, ಶಿದ್ದಪ್ಪ ಹೊಸಳ್ಳಿ, ಶಿವಪುಸತ್ರ ಶಾಮರಾವ್ ಪಾಟೀಲ, ಶಂಕ್ರಪ್ಪ ಹುಲಸೋಗಿ, ಶ್ರೀಕಾಂತಗೌಡ ಪೊಲೀಸಗೌಡ್ರ, ಸಾತಪ್ಪ ದೇಸಾಯಿ ಹಾಗೂ ಸೈಯದ್ ಅಜೀಮ್‌ಪೀರ ಖಾದ್ರಿ ಅವರ ನಾಮಪತ್ರಗಳನ್ನು ಅಂಗೀಕರಿಸಲಾಗಿದೆ.

ಮಂಜುನಾಥ ಕುನ್ನೂರ ನಾಮಪತ್ರ ತಿರಸ್ಕೃತ!
ಮಾಜಿ ಶಾಸಕ, ಮಾಜಿ ಸಂಸದ ಮಂಜುನಾಥ ಕುನ್ನೂರ ಪಕ್ಷೇತರರಾಗಿ ಸಲ್ಲಿಸಿದ್ದ ಅರ್ಜಿ ತಿರಸ್ಕಾರಗೊಂಡಿದೆ. ಉತ್ತಮ ಪ್ರಜಾಕೀಯ ಪಕ್ಷದ ಸಚಿನಕುಮಾರ ಕರ್ಜೆಕಣ್ಣನವರ, ಪಕ್ಷೇತರ ಅಭ್ಯರ್ಥಿಗಳಾದ ಶಾಮಾಚಾರಿ ಕಮ್ಮಾರ, ಉಮೇಶ ದೈವಜ್ಞ, ಜಿ.ಅಂಜನ್‌ಕುಮಾರ, ಲಾಲಸಾಬ ನದಾಫ್‌, ಅಂಬೋಸ್ ಮೆಲ್ಲೊ ಅವರ ನಾಮಪತ್ರಗಳು ತಿರಸ್ಕೃತಗೊಂಡಿವೆ ಎಂದು ಚುನಾವಣಾಧಿಕಾರಿ ತಿಳಿಸಿದ್ದಾರೆ. ಉಪ

error: Content is protected !!