ಗಾಂಜಾ ಮಾರಾಟ ಮಾಡುವ ವ್ಯಕ್ತಿಯನ್ನು, ಸಿನಿಮಿಯ ರೀತಿ ಬಂಧಿಸಿದ ಪೊಲೀಸ್ರು..!

ಹಳಿಯಾಳ: ಗಾಂಜಾ ಮಾರಾಟ ಮಾಡಲು ಪಟ್ಟಣಕ್ಕೆ ಬರುತ್ತಿದ್ದ ವ್ಯಕ್ತಿಯನ್ನು ಸಿನಿಮಿಯ ರೀತಿಯಲ್ಲಿ ಟ್ರೇಸ್ ಮಾಡಿ ಹಿಡಿದಿದ್ದಾರೆ ಹಳಿಯಾಳ ಪೊಲೀಸ್ರು. ಮಾಲು ಸಮೇತ ಆರೋಪಿಯನ್ನು ಬಂಧಿಸಿದ್ದು ಕಲ್ಲಯ್ಯ ಚಂಬಯ್ಯ ಗುಡಿ ಎಂಬುವನೇ ಗಾಂಜಾ ಸಾಗಿಸುತ್ತಿದ್ದ ಆರೋಪಿಯಾಗಿದ್ದಾನೆ.

ಅಂದಹಾಗೆ, ಹಳಿಯಾಳ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಸದ್ಯ ನವರಾತ್ರಿಯ ಸಂಭ್ರಮ ಜೋರಾಗಿದೆ. ಗ್ರಾಮಗಳಲ್ಲಿ ದಸರಾ ಹಬ್ಬದ ನಿಮಿತ್ಯ ದುರ್ಗಾದೌಡ್ ಮೆರೆವಣಿಗೆ ಸಂಭ್ರಮದಿಂದ ನಡೆಯುತ್ತಿದೆ. ಹೀಗಾಗಿ ದುರ್ಗಾ ದೌಡ್ ಮೆರವಣಿಗೆಯ ಬಂದೋಬಸ್ತ್ ಗಾಗಿ ತೆರಳಿದ್ದ ಹಳಿಯಾಳ ಪಿಎಸ್ ಐ ವಿನೋದ್ ರೆಡ್ಡಿ ಹಾಗೂ ಅವರ ಪಡೆ, ಕರ್ತವ್ಯ ಮುಗಿಸಿ ವಾಒಸ್ ಬರುತ್ತಿದ್ದಾಗ, ತಾಲೂಕಿನ ಹವಗಿ ಗ್ರಾಮದ ಐಟಿಐ ಕಾಲೇಜಿನ ಹತ್ತಿರ ಗಾಂಜಾ ಸಾಗಿಸುತ್ತಿದ್ದ ಆರೋಪಿ ಎದುರಿಗೆ ಸಿಕ್ಕಿದ್ದಾನೆ. ಅಸಲು, ಆತ ಯಾರು ಅನ್ನೋದೇ ಪೊಲೀಸರಿಗೆ ಗೊತ್ತಿರಲಿಲ್ಲ.

ಆದ್ರೆ ಯಾವಾಗ ಪೊಲೀಸರ ವಾಹನ ಕಂಡ ಕೂಡಲೇ ಆರೋಪಿ ಓಡಲು ಶುರುವಿಟ್ಟಿದ್ದಾನೆ. ತಕ್ಷಣವೇ ಅನುಮಾನಗೊಂಡ ಪೊಲೀಸರು ಆತನನ್ನು ಬೆನ್ನಟ್ಟಿ ಹಿಡಿದಿದ್ದಾರೆ. ಕೈಗೆ ಸಿಕ್ಕ ವ್ಯಕ್ತಿಯನ್ನು ವಿಚಾರಿಸಿದಾಗ ಆತನೇ ಒಪ್ಪಿಕೊಂಡಿದ್ದು, ಹಳಿಯಾಳಕ್ಕೆ ಗಾಂಜಾ ಮಾರಾಟ ಮಾಡಲು ಹೋಗುತ್ತಿದ್ದೇನೆ ಎಂದಿದ್ದಾನೆ. ಹೀಗಾಗಿ, ತಕ್ಷಣವೇ ವಶಕ್ಕೆ ಪಡೆದು ವಿಚಾರಿಸಿದ ಪೊಲೀಸರು ಗಾಂಜಾ ಸಮೇತ ಆರೋಪಿಯನ್ನು ಬಂಧಿಸಿದ್ದಾರೆ.

ಎಸ್ಪಿ ಸುಮನಾ ಪನ್ನೇಕರ್ ಮಾರ್ಗದರ್ಶನದಂತೆ ಪಿಎಸ್ಐ ವಿನೋದ್ ರೆಡ್ಡಿ ಹಾಗೂ ಠಾಣಾ ಸಿಬ್ಬಂದಿಗಳಾದ ಶಂಕರಲಿಂಗ ಕ್ಷೇತ್ರಿ, ಶ್ರೀಶೈಲ ಮಂಗನ್ನವರ, ನಾಗೇಂದ್ರ ಬೈರಾ ನಾಯ್ಕ, ಕಾಶೀನಾಥ ಅಳ್ಳೂರ ಹಾಗೂ ಜೀಪ್ ಚಾಲಕನಾಗಿ ಕುಬೇರ ಹೊಸುರ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ರು. ಪೊಲೀಸರ ಕಾರ್ಯಕ್ಕೆ ಎಸ್ಪಿ
ಸುಮನಾ ಪೆನ್ನೇಕರ್ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

error: Content is protected !!