ಶಿಗ್ಗಾವಿಗೆ ಕೈ ಅಭ್ಯರ್ಥಿಯಾಗಿ ವಿನಯ್ ಕುಲಕರ್ಣಿ ಸುಪುತ್ರಿ ವೈಶಾಲಿ ಕುಲಕರ್ಣಿ..!

ಶಿಗ್ಗಾವಿ ಉಪಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯನ್ನು ಘೋಷಣೆ ಮಾಡಿದೆ.. ಈ ಸಾರಿ ಮುಸ್ಲಿಂ ರಿಗೆ ಮಣೆ ಹಾಕದ ಕೈ ಪಡೆ ವೈಶಾಲಿ ಕುಲಕರ್ಣಿಗೆ ಕೈ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಿದೆ. ಇದ್ರೊಂದಿಗೆ ಶಿಗ್ಗಾವಿ ಕಾಂಗ್ರೆಸ್ ಟಿಕೆಟ್ ಕಗ್ಗಂಟು ಬಗೆ ಹರಿದಂತಾಗಿದೆ.

ಅಂದಹಾಗೆ, ವೈಶಾಲಿ ಕುಲಕರ್ಣಿ ಧಾರವಾಡ ಶಾಸಕ ವಿನಯ್ ಕುಲಕರ್ಣಿಯವರ ಸುಪುತ್ರಿಯಾಗಿದ್ದು, ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಪಡೆಗೆ ಭಾರೀ ಸೆಡ್ಡು ಹೊಡೆಯುವ ಸಾಧ್ಯತೆ ಇದೆ. ಈ‌ ಕಾರಣಕ್ಕಾಗೇ ಕೈ ಹೈಕಮಾಂಡ್ ಸೂಕ್ತ ಸಮಯದಲ್ಲಿ ಸೂಕ್ತ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ ಅಂತಾ ಹೇಳಲಾಗ್ತಿದೆ.

ಇನ್ಮೇಲೆ ಶಿಗ್ಗಾವಿ ವಿಧಾನಸಭಾ ಉಪಚುನಾವಣೆಯ ಅಖಾಡ ಭಾರೀ ರಂಗೇರಲಿದ್ದು ವಿನಯ್ ಕುಲಕರ್ಣಿ ಹಾಗೂ ಬಸವರಾಜ್ ಬೊಮ್ಮಾಯಿ ನಡುವಿನ ಕಾಳಗಕ್ಕೆ ಅಖಾಡ ಒದಗಿಸಿದಂತಾಗಿದೆ.

 

error: Content is protected !!