ಶಿಗ್ಗಾವಿ ವಿಧಾನಸಭಾ ಉಪ ಕದನ ರಂಗೇರುತ್ತಿದೆ. ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನವಾದ ಇಂದು ಕೈ ಅಭ್ಯರ್ಥಿ ಯಾಸಿರ್ ಖಾನ್ ಪಠಾಣ್ ಗೆ ಮಹತ್ವದ ದಿನವಾಗಿದೆ. ಯಾಕಂದ್ರೆ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರೋ ಅಜ್ಜಂಫೀರ್ ಖಾದ್ರಿ ಇಂದು ನಾಮಪತ್ರ ವಾಪಸ್ ಪಡೀತಾರಾ..? ಯಕ್ಷ ಪ್ರಶ್ನೆಯಾಗಿದೆ. ಈ ನಡುವೆ ಮಂಗಳವಾರ ಹುಬ್ಬಳ್ಳಿಗೆ ಬಂದು ಇಳಿದಿರೊ ಖಾದ್ರಿ, ಹಾನಗಲ್ ಶಾಸಕ ಶ್ರೀನಿವಾಸ್ ಮಾನೆಯವರನ್ನು ಸಂಧಾನ ಮಾಡಿಸಲಾಗಿದೆ. ಜಮೀರ್ ಅಹ್ಮದ್ ಮುಂದಾಳತ್ವದಲ್ಲಿ ಸಂಧಾನ ಸಭೆ ನಡೆದಿದೆ.
ವಾಪಸ್ ಪಡೀತಾರಾ..?
ಅಂದಹಾಗೆ, ಶಿಗ್ಗಾವಿ ಚುನಾವಣಾ ಕಣದಲ್ಲಿ 19 ಅಭ್ಯರ್ಥಿಗಳಿದ್ದಾರೆ. ಹೀಗಾಗಿ ಇಂದು ನಾಮಪತ್ರ ವಾಪಸ್ ಪಡೆಯಲು ಕಡೆಯ ದಿನವಾಗಿದೆ. ನಾಮಪತ್ರ ವಾಪಸ್ ಪಡೆಯಲು ಖಾದ್ರಿ ಸಾಕಷ್ಟು ಗೊಂದಲ್ಲಿದ್ದಾರೆ.
ಖಾದ್ರಿ ನಾಮಪತ್ರ ವಾಪಸ್ ಪಡೆಯಬೇಕೆಂದು ಕಾಂಗ್ರೆಸ್ ಹೈಕಮಾಂಡದಿಂದ ಇನ್ನಿಲ್ಲದ ಒತ್ತಡ ಬಂದಿದೆ. ಇತ್ತ, ಕಣದಿಂದ ಹಿಂದೆ ಸರಿಯಬೇಡಿ ಅಂತಾ ಅಭಿಮಾನಿಗಳು ಖಾದ್ರಿ ಮೇಲೆ ಒತ್ತಡ ಹಾಕ್ತಿದಾರೆ. ಹೈಕಮಾಂಡ ಕಣ್ಗಾವಲಿನಲ್ಲಿ ಸದ್ಯ ಹುಬ್ಬಳ್ಳಿಯ ಖಾಸಗಿ ಹೋಟೆಲ್ ನಲ್ಲಿ ಖಾದ್ರಿ ತಂಗಿದ್ದಾರೆ. ಸಚಿವ ಜಮೀರ್ ಅಹ್ಮದ್ ಖಾದ್ರಿ ಜೊತೆಗಿದ್ದಾರೆ.
ಯಾತ್ರಿ ನಿವಾಸದಲ್ಲಿ ಸಭೆ..!
ಶಿಗ್ಗಾವಿ ತಾಲೂಕಿನ ತಡಸ ಗ್ರಾಮದ ಯಾತ್ರಿ ನಿವಾಸದಲ್ಲಿ ಬೆಳಿಗ್ಗೆ ಖಾದ್ರಿಯವರು ಬೆಂಬಲಿಗರ ಸಭೆ ನಡೆಸಲಿದ್ದಾರೆ. ಸಚಿವ ಜಮೀರ್ ಕೂಡ ಸಭೆಯಲ್ಲಿ ಇರಲಿದ್ದಾರೆ.
ಸಬೆ ಬಳಿಕ ನಾಮಪತ್ರ ವಾಪಾಸ್ ಪಡೆಯಲಿದ್ದಾರೆ ಅನ್ನೊ ಮಾಹಿತಿ ಬಂದಿದೆ.
ಮಾನೆ ಜೊತೆ ಸಂಧಾನ..!
ಹೀಗಾಗಿ, ಹಾನಗಲ್ ಶಾಸಕ ಶ್ರೀನಿವಾಸ ಮಾನೆ, ಖಾದ್ರಿ ನಡುವೆ ಸಚಿವ ಜಮೀರ್ ಅಹ್ಮದ್ ಸಂದಾನ ಮಾಡಿಸಿದ್ದಾರೆ. ಖಾದ್ರಿ ಟಿಕೆಟ್ ತಪ್ಪಲು ಮಾನೆ ಪ್ರಮುಖ ಕಾರಣ ಎನ್ನಲಾಗಿತ್ತು. ಇಬ್ಬರ ನಡುವಿನ ಮುನಿಸಿನಿಂದಾಗಿ ಖಾದ್ರಿಗೆ, ಮಾನೆ ಟಿಕೆಟ್ ತಪ್ಪಿಸಿದ್ದರು ಎನ್ನಲಾಗಿತ್ತು. ಹೀಗಾಗಿ, ಹುಬ್ಬಳ್ಳಿಯ ಖಾಸಗಿ ಹೋಟೆಲ್ ನಲ್ಲಿ ಖಾದ್ರಿಯವರನ್ನು ಶ್ರೀನಿವಾಸ್ ಮಾನೆ ಬೇಟಿಯಾಗಿ ಸ್ನೇಹ ಹಸ್ತ ಚಾಚಿದ್ದಾರೆ. ಮುಂದೇನಾಗತ್ತೊ ಕಾದು ನೋಡಬೇಕಿದೆ..