ಮುಂಡಗೋಡ ತಾಲೂಕಿನ ಕೊಪ್ಪ(ಇಂದೂರು) ಗ್ರಾಮದಲ್ಲಿ ಪತ್ನಿಯ ತವರು ಮನೆ ಮುಂದೆಯೇ ಪೆಟ್ರೊಲ್ ಸುರಿದು, ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ವ್ಯಕ್ತಿ ಹುಬ್ಬಳ್ಳಿಯ ಕಿಮ್ಸ್ ನಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ.
ಮುಂಡಗೋಡ ತಾಲೂಕಿನ ನಂದಿಕಟ್ಟಾ ಗ್ರಾಮದ ಅರವಿಂದ ಚಿತ್ತರಗಿ ಎಂಬುವ ವ್ಯಕ್ತಿಯೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಶನಿವಾರ ದೀಪಾವಳಿ ಹಬ್ಬದ ಸಲುವಾಗಿ ಬೆಂಗಳೂರಿನಿಂದ ಊರಿಗೆ ಬಂದಿದ್ದ ಹುಡುಗ, ಶನಿವಾರ ರಾತ್ರಿಯೇ ಪತ್ನಿಯ ಮನೆಗೆ ಆಗಮಿಸಿದ್ದ, ಅದ್ಯಾವ ಕಾರಣಕ್ಕೋ ಏನೋ, ಮನೆಯ ಮುಂಬಾಗದಲ್ಲೇ ಪೆಟ್ರೊಲ್ ಸುರಿದುಕೊಂಡಿದ್ದ. ಆ ವೇಳೆ ದೀಪಾವಳಿ ನಿಮಿತ್ತ ಹಚ್ಚಿ ಇಟ್ಟಿದ್ದ ದೀಪದಿಂದ ಬೆಂಕಿ ತಗುಲಿ ಏಕಾಏಕಿ ಹೊತ್ತಿ ಉರಿದಿದ್ದ. ತಕ್ಷಣವೇ ಮನೆಯವರು ಹಾಗೂ ಸ್ಥಳೀಯರು ಬೆಂಕಿನಂದಿಸಿ, ಮುಂಡಗೋಡ ತಾಲೂಕಾಸ್ಪತ್ರೆಗೆ ರವಾನಿಸಿದ್ದರು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದ್ರೆ ಈಗಷ್ಟೇ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ ಅಂತಾ ಮಾಹಿತಿ ಲಭ್ಯವಾಗಿದೆ.
ಆತ್ಮಹತ್ಯೆ ಯತ್ನಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲವಾದರೂ ಕೌಂಟುಂಬಿಕ ಕಲಹದ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಅನ್ನೋ ಅನುಮಾನವಿದೆ. ಕಳೆದ ಐದು ವರ್ಷಗಳ ಹಿಂದೆ ಕೊಪ್ಪದ ಹುಡುಗಿಯನ್ನು ಪ್ರೀತಿಸಿ ಮದುವೆಯಾಗಿದ್ದ ಅರವಿಂದ್ ಓರ್ವ ಪುತ್ರಿ ಹಾಗೂ ಓರ್ವ ಪುತ್ರನನ್ನು ಅಗಲಿದ್ದಾನೆ. ಹೀಗಾಗಿ, ಪೊಲೀಸರು ಆತ್ಮಹತ್ಯೆಯ ನಿಖರ ಕಾರಣವನ್ನು ಪತ್ತೆಹಚ್ಚಲು, ಸರಿಯಾದ ತನಿಖೆ ಮಾಡಬೇಕಿದೆ. ಅಂದಾಗ ಮಾತ್ರ ಈ ಸಾವಿಗೆ ನ್ಯಾಯ ಸಿಗಬಹುದು ಅಂತಿದಾರೆ ಆತನ ಕುಟುಂಬಸ್ಥರು, ಸ್ನೇಹಿತರು.
ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.