ಹುನಗುಂದ ಬಸವೇಶ್ವರ ದೇವಸ್ಥಾನ ನಿರ್ಮಾಣಕ್ಕೆ 1 ಲಕ್ಷ ರೂ. ಚೆಕ್ ಹಸ್ತಾಂತರ..!

ಹುನಗುಂದ ಬಸವೇಶ್ವರ ದೇವಸ್ಥಾನ ನಿರ್ಮಾಣಕ್ಕೆ 1 ಲಕ್ಷ ರೂ. ಚೆಕ್ ಹಸ್ತಾಂತರ..!

ಮುಂಡಗೋಡ ತಾಲೂಕಿನ ಹುನಗುಂದ ಬಸವೇಶ್ವರ ದೇವಸ್ಥಾನ ನಿರ್ಮಾಣಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ದಿಂದ ಮಂಜೂರಾದ ಅನುದಾನ 1 ಲಕ್ಷ ರೂ. ಮೊತ್ತದ ಡಿ ಡಿ ವಿತರಿಸಲಾಯಿತು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಿರ್ದೇಶಕರು ಹಾಗೂ ಯೋಜನಾಧಿಕಾರಿ ಗಳು DD ಯನ್ನು ಬಸವೇಶ್ವರ ಟ್ರಸ್ಟ ಕಮಿಟಿ ಅಧ್ಯಕ್ಷರಿಗೆ, ಸರ್ವ ಸದ್ಯಸರಿಗೆ ಹಸ್ತಾಂತರಿಸಿದ್ರು.. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರು, ಸದ್ಯಸ್ಯರು, ಹಾಗೂ ಸಮಿತಿಯ ಸದಸ್ಯರು, ಗಣ್ಯರು ಸೇರಿದಂತೆ ಒಕ್ಕೂಟದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ನಂದಿಕಟ್ಟಾ, ಬಸಾಪುರ, ಅಗಡಿ ಆಸುಪಾಸು ಚಿರತೆ ಪ್ರತ್ಯಕ್ಷ, ಹೆಜ್ಜೆ ಗುರುತುಗಳು ಪತ್ತೆ, ಮರಿಯೊಂದಿಗೆ ಓಡಾಡುತ್ತಿದೆಯಾ ಚಿರತೆ..?

ನಂದಿಕಟ್ಟಾ, ಬಸಾಪುರ, ಅಗಡಿ ಆಸುಪಾಸು ಚಿರತೆ ಪ್ರತ್ಯಕ್ಷ, ಹೆಜ್ಜೆ ಗುರುತುಗಳು ಪತ್ತೆ, ಮರಿಯೊಂದಿಗೆ ಓಡಾಡುತ್ತಿದೆಯಾ ಚಿರತೆ..?

ಮುಂಡಗೋಡ ತಾಲೂಕಿನ ಬಸಾಪುರ, ನಂದಿಕಟ್ಟಾ, ಅಗಡಿ ಭಾಗದ ಅರಣ್ಯ ಪ್ರದೇಶದಲ್ಲಿ ಚಿರತೆ ಪ್ರತ್ಯಕ್ಷಗೊಂಡಿದೆ. ಮರಿಯೊಂದಿಗೆ ತಾಯಿ ಚಿರತೆ ಇಲ್ಲಿ ಓಡಾಡುತ್ತಿದೆ ಅನ್ನೋದು ಕನ್ಫರ್ಮ್ ಆಗಿದೆ. ಹಾಗಂತ ಅರಣ್ಯ ಇಲಾಖೆಯ ಮೂಲಗಳು ದೃಢಪಡಿಸಿವೆ. ಬಸಾಪುರದ ಕಾಂಡಚಿನ ಗದ್ದೆಗಳಲ್ಲಿ ಹೆಜ್ಜೆಯ ಗುರುತುಗಳು ಪತ್ತೆಯಾಗಿದ್ದು, ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ. ಹೀಗಾಗಿ, ಸಾರ್ವಜನಿಕರಿಗೆ ಅರಣ್ಯ ಇಲಾಖೆಯಿಂದ ಎಚ್ಚರಿಕೆಯ ಸಂದೇಶಗಳನ್ನು ಡಂಗುರದ ಮೂಲಕ ರವಾನಿಸಲಾಗುತ್ತಿದೆ. ನಾಯಿ ಕೊಂಡೊಯ್ದ ಚಿರತೆ..! ಅಂದಹಾಗೆ, ಕಳೆದ ನಾಲ್ಕೈದು ದಿನಗಳ ಹಿಂದೆ ಬಸಾಪುರ ಸಮೀಪದ ಕಾಡಂಚಿನ ಗದ್ದೆಯಲ್ಲಿ ಗೋವಿನಜೋಳ ಕಾಯಲು ಹೋಗಿದ್ದ ರೈತನಿಗೆ ಚಿರತೆ ಇರುವುದು ಕಂಡು ಬಂದಿದೆ‌. ಗದ್ದೆ ಕಾಯಲು ಜೊತೆಯಿದ್ದ ನಾಯಿಯನ್ನು ಚಿರತೆ ಎತ್ತಿಕೊಂಡು ಹೋಗಿ ತಿಂದು ಹಾಕಿತ್ತು. ನಂತರದಲ್ಲಿ, ಎಚ್ಚೆತ್ತುಕೊಂಡಿದ್ದ ಆ ಭಾಗದ ರೈತರು, ಸಾರ್ವಜನಿಕರು ಅರಣ್ಯ ಇಲಾಖೆಗೆ ಈ ಬಗ್ಗೆ ಮಾಹಿತಿ ನೀಡಿದ್ದರು. ಚಿರತೆ ಹೆಜ್ಜೆ ಗುರುತು ಪತ್ತೆ..! ಇನ್ನು, ಚಿರತೆ ಬಂದಿದೆ ಅನ್ನೋ ಮಾಹಿತಿ ತಿಳಿದ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಚಿರತೆ ಬಂದಿರೋ...

ಹಾವೇರಿ ಪಟಾಕಿ ಗೋದಾಮಿಗೆ ಬೆಂಕಿ ಪ್ರಕರಣ: ಮೂವರ ಜೀವಂತ ದಹನ, ಇನ್ನೂ ಹಲವರು ಸಾವು ಶಂಕೆ..!

ಹಾವೇರಿ ಪಟಾಕಿ ಗೋದಾಮಿಗೆ ಬೆಂಕಿ ಪ್ರಕರಣ: ಮೂವರ ಜೀವಂತ ದಹನ, ಇನ್ನೂ ಹಲವರು ಸಾವು ಶಂಕೆ..!

 ಹಾವೇರಿ : ನಗರಕ್ಕೆ ಸಮೀಪದ ಅಲದಕಟ್ಟಿ ಗ್ರಾಮದಲ್ಲಿನ ಪಟಾಕಿ ದಾಸ್ತಾನು ಮಾಡಿದ್ದ ಗೋದಾಮಿಗೆ ಬೆಂಕಿ ತಗಲಿ ಭಾರೀ ಅನಾಹುತ ಸಂಭವಿಸಿದೆ. ಈ ವೇಳೆ ಮೂರು ಅಮೂಲ್ಯ ಜೀವಗಳು ಬೆಂಕಿಯ ಕೆನ್ನಾಲಿಗೆಯಲ್ಲಿ ಬೆಂದಿರುವುದು ಘಟನೆಯ ಭೀಕರತೆಗೆ ಸಾಕ್ಷಿಯಾಗಿದೆ. ಈಗ್ಗೆ ಕೆಲವೇ ಹೊತ್ತಿನಲ್ಲಿ ಸಂಜೆ 5 ಗಂಟೆ ವೇಳೆಗೆ ಅಗ್ನಿಶಾಮಕ ಠಾಣೆಯ ಸಿಬ್ಬಂದಿ ಬೆಂಕಿಯನ್ನು ಹತೋಟಿಗೆ ತಂದು ಪರಿಶೀಲಿಸುವ ವೇಳೆ ಶೆಟರ್‍ಸ್ ಬಳಿ ಮೂವರ ಶವ ಕಂಡು ಬಂದಿವೆ. ಗೋದಾಮಿನಲ್ಲಿ ರ್‍ಯಾಕ್‌ಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು. ಅದರ ಒಳಗೆ ಇನ್ನು ಹಲವರ ಶವಗಳು ಇರಬಹುದು ಎಂದು ಶಂಕಿಸಲಾಗಿದೆ. ಪರಿಶೀಲನೆಯ ಕಾರ್ಯ ಮುಂದುವರೆದಿದ್ದು, ಗೋದಾಮಿನ ಒಳಗಡೆ ನಾಲ್ವರ ಇದ್ದರೆಂದು ಹೇಳಲಾಗುತ್ತಿದೆ. ಭೀಕರ ಘಟನೆಯಲ್ಲಿ ಸಾವನ್ನಪ್ಪಿದವರನ್ನು ತಾಲೂಕಿನ ಕಾಟೇನಹಳ್ಳಿ ಗ್ರಾಮದ ಕಾರ್ಮಿಕರೆಂದು ಹೇಳಲಾಗುತ್ತಿದೆ. ಮೃತರ ಸಂಬಂಧಿಕರ ಶೋಕಸಾಗರದಲ್ಲಿದ್ದಾರೆ. ಮೂವರ ಶವಗಳನ್ನು ಸದ್ಯಕ್ಕೆ ಹಾವೇರಿಯ ಜಿಲ್ಲಾ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಲಾಗಿದೆ ಎಂದು ತಿಳಿದು ಬಂದಿದೆ. ಗೋದಾಮಿನ ಪೂರ್ಣಪ್ರಮಾಣದ ಪರಿಶೀನೆ ಮುಕ್ತಾಯದ ನಂತರ ಈ ದುರ್ಘಟನೆಯಲ್ಲಿ ಸಾವನ್ನಪ್ಪಿದವರ ಸಂಖ್ಯೆ ಎಷ್ಟು...

ಹೆಬ್ಬಾರ್ ಕಾಂಗ್ರೆಸ್ ಸೇರ್ಪಡೆ, ನಾವು ಅಂದುಕೊಂಡಂಗಿಲ್ಲ ಲೆಕ್ಕ..! ಅಸಲೀಯತ್ತು ಬೇರೆಯದ್ದೇ ಇದೆ..!

ಹೆಬ್ಬಾರ್ ಕಾಂಗ್ರೆಸ್ ಸೇರ್ಪಡೆ, ನಾವು ಅಂದುಕೊಂಡಂಗಿಲ್ಲ ಲೆಕ್ಕ..! ಅಸಲೀಯತ್ತು ಬೇರೆಯದ್ದೇ ಇದೆ..!

ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಹಾಲಿ ಬಿಜೆಪಿ ಶಾಸಕ ಶಿವರಾಮ್ ಹೆಬ್ಬಾರ್ ಕಾಂಗ್ರೆಸ್ ಸೇರೋದು ಬಹುತೇಕ ಪಕ್ಕಾ ಎನ್ನುವಂತಾಗಿದೆ. ಆದ್ರೆ, ಈಗಲೇ ಸೇರ್ತಾರಾ ಅಥವಾ ಲೇಟಾಗತ್ತಾ ಅನ್ನೊ ಹಲವು ಪ್ರಶ್ನೆಗಳು ಇಡೀ ಕ್ಷೇತ್ರದಾದ್ಯಂತ ಚರ್ಚೆಗೆ ಕಾರಣವಾಗಿವೆ. ಅಸಲು, ಅದೇನೇ ಚರ್ಚೆ ನಡೆದ್ರೂ, ಅದೇನೇ ಊಹಾಪೋಹಗಳು ಜಾರಿಯಲ್ಲಿದ್ರೂ, ಹೆಬ್ಬಾರ್ ಸಾಹೇಬ್ರು ಮಾತ್ರ ಡೋಂಟ್ ಕೇರ್ ಅನ್ನೊ ಮನಸ್ಥಿತಿಯಲ್ಲಿದ್ದಾರೆ. ಯಾಕಂದ್ರೆ, ಅವ್ರ ಆಂತರಿಕ ಲೆಕ್ಕಾಚಾರಗಳೇ ಬೇರೆಯದ್ದಿದೆ. ಭಾಗಾಕಾರ, ಗುಣಾಕಾರಗಳೇ ಬೇರೆ..! ಅಂದಹಾಗೆ, ಸದ್ಯ ಹರಡಾಡ್ತಿರೋ ಕಾಂಗ್ರೆಸ್ ಸೇರೋ ಬಣ್ಣ ಬಣ್ಣದ ರೂಮರ್ರುಗಳಿಗೆ ಹೆಬ್ಬಾರ್ ಪಡೆಯ ಅಂಗಳದಲ್ಲಿ ನಾಜೂಕಿನ ಪ್ರತ್ಯುತ್ತರಗಳು ಸಿಗುತ್ತಿವೆ. ಇಂತಹದ್ದೊಂದು ರೂಮರ್ರುಗಳು ಹೆಚ್ಚೆಚ್ಚು ಹರಡಿದಷ್ಟು ಹೆಬ್ಬಾರ್ ಪಡೆಗೆ ಕ್ಷೇತ್ರದ ಜನರ ಮನಸ್ಥಿತಿ ಅರಿಯಲು ಸಾಧನವಾಗುವಂತಿದೆ ಅಷ್ಟೆ. ಆದ್ರೆ, ಅದರಾಚೆಗಿನ ಹಕೀಕತ್ತುಗಳು, ಲಾಭ ನಷ್ಟಗಳ ಗುಣಾಕಾರಗಳು, ಭಾಗಾಕಾರಗಳು ಒಳಗೊಳಗೇ ಸಮೀಕರಣಗೊಳ್ಳುತ್ತಿವೆ. ರಾಜಕೀಯ ಚಾಣಾಕ್ಷತೆಯಲ್ಲಿ ಲೆಕ್ಕ ಹಾಕ್ತಿರೋ ಶಿವರಾಮ್ ಹೆಬ್ಬಾರ್ ತಮ್ಮದೇ ಆದ ದಾರಿಯಲ್ಲಿ ಈಗಾಗಲೇ ಎಲ್ಲ ಮಜಲುಗಳ ಬ್ಲ್ಯೂ ಪ್ರಿಂಟ್ ರೆಡಿ ಮಾಡಿಕೊಂಡು ಆಗಿದೆಯಂತೆ. ಡಿಸೆಂಬರ್...

ಮುಂಡಗೋಡ ಜೂನಿಯರ್ ಕಾಲೇಜಿನಲ್ಲಿ  ಬಿಸಿ ಸಾಂಬಾರ್ ಮೈಮೇಲೆ ಬಿದ್ದು ಗಾಯಗೊಂಡಿದ್ದ ಮಹಿಳೆ ಸಾವು..!

ಮುಂಡಗೋಡ ಜೂನಿಯರ್ ಕಾಲೇಜಿನಲ್ಲಿ ಬಿಸಿ ಸಾಂಬಾರ್ ಮೈಮೇಲೆ ಬಿದ್ದು ಗಾಯಗೊಂಡಿದ್ದ ಮಹಿಳೆ ಸಾವು..!

ಮುಂಡಗೋಡ ಪಟ್ಟಣದ ಪದವಿ ಪೂರ್ವ ಕಾಲೇಜಿನಲ್ಲಿ ಬಿಸಿ ಸಾಂಬಾರ್ ಬಿದ್ದು ತೀವ್ರ ಗಾಯಗೊಂಡಿದ್ದ ಬಿಸಿಯೂಟದ ಅಡುಗೆ ಸಹಾಯಕಿ ಮೃತಪಟ್ಟಿದ್ದಾಳೆ. ಕಳೆದ ಶನಿವಾರ ನಡೆದಿದ್ದ ಘಟನೆಯಲ್ಲಿ ಗಾಯಗೊಂಡು ಕಿಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ,ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾಳೆ ಅಂತಾ ಮಾಹಿತಿ ಲಭ್ಯವಾಗಿದೆ. ಅಂದಹಾಗೆ, ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಅಡುಗೆ ಸಹಾಯಕಿ ಅನ್ನಪೂರ್ಣ ಹುಳ್ಯಾಳ(49) ಸುಟ್ಟು ಗಾಯಗೊಂಡು ಸದ್ಯ ಮೃತಪಟ್ಟಿರೋ ಮಹಿಳೆಯಾಗಿದ್ದಾಳೆ. ಕಳೆದ ಶನಿವಾರ ಬಿಸಿಯೂಟದ ಅಡುಗೆ ಮನೆಯಿಂದ ಶಾಲಾ ಮಕ್ಕಳಿಗೆ ಸಾಂಬಾರ ಬಡಿಸಲು ಅಣಿಯಾಗಿದ್ದಳು. ಆ ಹೊತ್ತಲ್ಲಿ ಮತ್ತೋರ್ವ ಅಡುಗೆ ಸಹಾಯಕಿ ಪಾರ್ವತಿ ಎಂಬುವರ ಜೊತೆ ಸೇರಿ ಸಾಂಬಾರ ಪಾತ್ರೆ ತರುವಾಗ ಅನ್ನಪೂರ್ಣ ಕಾಲು ಜಾರಿ ಬಿದ್ದಿದ್ದಳು. ಹೀಗಾಗಿ, ಬಿಸಿ ಸಾಂಬಾರ ಅವರ ಮೈ ಮೇಲೆ ಬಿದ್ದಿತ್ತು. ಪರಿಣಾಮ, ಅವರ ದೇಹವು ತೀವ್ರ ಸುಟ್ಟು ಗಾಯವಾಗಿತ್ತು. ತಕ್ಷಣವೇ ಗಾಯಗೊಂಡ ಅಡುಗೆ ಸಹಾಯಕಿಯನ್ನು ತಾಲೂಕಾ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಗೆ ರವಾನಿಸಲಾಗಿತ್ತು. ಆದ್ರೆ,...

ಮುಂಡಗೋಡಿನಲ್ಲಿ ಇನ್ಮೇಲೆ ಕಳ್ಳಕಾಕರು ಕೆಮ್ಮಂಗಿಲ್ಲ, ಕಟ್ಟುನಿಟ್ಟಿನ ಕ್ರಮಗಳ ಜಾರಿಗೆ ಮುಂದಾದ ಪೊಲೀಸ್ರು..!

ಮುಂಡಗೋಡಿನಲ್ಲಿ ಇನ್ಮೇಲೆ ಕಳ್ಳಕಾಕರು ಕೆಮ್ಮಂಗಿಲ್ಲ, ಕಟ್ಟುನಿಟ್ಟಿನ ಕ್ರಮಗಳ ಜಾರಿಗೆ ಮುಂದಾದ ಪೊಲೀಸ್ರು..!

ಮುಂಡಗೋಡ ಪೊಲೀಸರು ಜಾಗ್ರತರಾಗಿದ್ದಾರೆ. ಪಟ್ಟಣದಲ್ಲಿ ಅಪರಾಧ ಪ್ರಕರಣಗಳನ್ನು ನಿಯಂತ್ರಿಸುವಲ್ಲಿ ಮಹತ್ತರ ಹೆಜ್ಜೆಗಳನ್ನಿಡುತ್ತಿದ್ದಾರೆ. ಇಲ್ಲಿ ಇನ್ನು ಯಾವುದೇ ಅಪರಾಧಿಕ ಕೃತ್ಯಗಳಿಗೆ ಜಾಗವಿಲ್ಲ, ಖಾಕಿ ಕಟ್ಟೆಚ್ಚರದಿಂದ ಕಾವಲಿಗಿದೆ ಅನ್ನೋದನ್ನ ಜನಸಾಮಾನ್ಯರಿಗೆ ಮುಟ್ಟಿಸಿ, ಜೊತೆಗೆ ಸಾರ್ವಜನಿಕರ ಸಹಕಾರಗಳನ್ನು ಕೋರಿದ್ದಾರೆ ಪೊಲೀಸರು. ಈ ಕಾರಣಕ್ಕಾಗೇ ಪಟ್ಟಣದಲ್ಲಿ ನೂತನ ಸಿಪಿಐ ಬಿ.ಎಸ್.ಲೋಕಾಪುರ್ ಇವತ್ತು ಒಂದಿಷ್ಟು ಜಾಗ್ರತಿಯ ಹೆಜ್ಜೆಗಳನ್ನಿಟ್ಟಿದ್ದಾರೆ. ಬ್ಯಾಂಕ್ ವ್ಯವಸ್ಥಾಪಕರೊಂದಿಗೆ..! ಇನ್ನು ಪಟ್ಟಣದ ಎಲ್ಲಾ ಬ್ಯಾಂಕ್ ಮ್ಯಾನೇಜರಗಳೊಂದಿಗೆ ಇವತ್ತು ಸಭೆ ನಡೆಸಿದ ಸಿಪಿಐ, ಆಯಾ ಬ್ಯಾಂಕುಗಳ ವ್ಯಾಪ್ತಿಯಲ್ಲಿ ಬರುವ ಎಟಿಎಂಗಳಲ್ಲಿ ಸೂಕ್ತ ಭದ್ರತಾ ಕ್ರಮಗಳನ್ನು ಅಳವಡಿಸುವ ಸಂಬಂಧ ಕ್ರಮ ಕೈಗೊಳ್ಳುವಂತೆ ಖಡಕ್ ಸೂಚನೆ‌ ನೀಡಿದ್ದಾರೆ. ಸಮರ್ಪಕ ಸಿಸಿಟಿವಿಗಳನ್ನು ಅಳವಡಿಸುವುದು, ಅಲ್ಲದೇ, ದಿನದ 24 ಗಂಟೆಯೂ ಕಾವಲುಗಾರರನ್ನು ನೇಮಿಸಿಕೊಳ್ಳುವಂತೆ ಸೂಚಿಸಿದ್ದಾರೆ. ಜಾಗೃತ ಗಂಟೆಗಳನ್ನು ಅಳವಡಿಸಿ, ರಾತ್ರಿ ಹೊತ್ತಿನಲ್ಲಿ ಸೂಕ್ತ ಬೆಳಕಿನ ವ್ಯವಸ್ಥೆ ಮಾಡುವ ಕುರಿತು ತಿಳಿಸಿದ್ದಾರೆ. ಇದರಿಂದ ಕಳ್ಳರ ಕೈಚಳಕ ತಡೆಗಟ್ಟುವಲ್ಲಿ‌ ಮಹತ್ತರ ಕ್ರಮ ಕೈಗೊಳ್ಳುವಂತಾಗುತ್ತದೆ ಅಂತಾ ಜಾಗ್ರತಿ ಮೂಡಿಸಿದ್ದಾರೆ. ಜ್ಯುವೇಲ್ಲರ್ಸ್ ಗೆ ಸೂಚನೆ..! ಇನ್ನು ಬಹುತೇಕ ಕಳ್ಳರ ಕೈಚಳಕಕ್ಕೆ...

ಮುಂಡಗೋಡ ಪೊಲೀಸರ ದಾಳಿ, ಇಸ್ಪೀಟು ಆಟದಲ್ಲಿ ತೊಡಗಿದ್ದ 22 ಜನರ ಮೇಲೆ ಕೇಸ್, ಹಲವರು ವಶಕ್ಕೆ, ಕೆಲವರು ಎಸ್ಕೇಪ್..!

ಮುಂಡಗೋಡ ಪೊಲೀಸರ ದಾಳಿ, ಇಸ್ಪೀಟು ಆಟದಲ್ಲಿ ತೊಡಗಿದ್ದ 22 ಜನರ ಮೇಲೆ ಕೇಸ್, ಹಲವರು ವಶಕ್ಕೆ, ಕೆಲವರು ಎಸ್ಕೇಪ್..!

ಮುಂಡಗೋಡ ಸಿಪಿಐ ಬಿ.ಎಸ್. ಲೋಕಾಪುರ ನೇತೃತ್ವದಲ್ಲಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಇಸ್ಪೀಟು ಆಟದಲ್ಲಿ ತೊಡಗಿದ್ದವರನ್ನು ಹೆಡೆಮುರಿ ಕಟ್ಟಿದ್ದಾರೆ. ಮುಂಡಗೋಡ ತಾಲೂಕಿನಲ್ಲಿ ನಡೆದ ಎರಡು ಪ್ರತ್ಯೇಕ ದಾಳಿಯಲ್ಲಿ ಒಟ್ಟೂ 22 ಜನ ಆರೋಪಿಗಳ‌ ಮೇಲೆ ಕೇಸು ದಾಖಲಿಸಲಾಗಿದ್ದು, ಅದ್ರಲ್ಲಿ, ಬರೋಬ್ಬರಿ 10 ಜನ ಆರೋಪಿಗಳನ್ನು ಬಂಧಿಸಲಾಗಿದೆ. ದಾಳಿ ವೇಳೆ ಹಲವರು ಪರಾರಿಯಾಗಿದ್ದಾರೆ, ಜೊತೆಗೆ ಬರೋಬ್ಬರಿ 38,730 ರೂ. ವಶಕ್ಕೆ ಪಡೆಯಲಾಗಿದೆ ಅನ್ನೋ ಮಾಹಿತಿ ಲಭ್ಯವಾಗಿದೆ‌‌. ರಾಮಾಪುರದಲ್ಲಿ..! ಮುಂಡಗೋಡ ತಾಲೂಕಿನ ರಾಮಾಪುರ ಗ್ರಾಮದ ಪ್ಲಾಟ್ ನಲ್ಲಿರೋ ಆಂಜನೇಯ ದೇವಸ್ಥಾನದ ಹತ್ತಿರ, ಇಸ್ಪೀಟು ಆಟದಲ್ಲಿ ತೊಡಗಿದ್ದವರ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ. ಪರಿಣಾಮ, ಬರೋಬ್ಬರಿ 12 ಜನರ ಮೇಲೆ ಕೇಸು ದಾಖಲಿಸಲಾಗಿದೆ. ಇದ್ರಲ್ಲಿ, ನಾಲ್ಕು ಆರೋಪಿಗಳು ಮಾತ್ರ ಪೊಲೀಸರಿಗೆ ಸಿಕ್ಕಿದ್ದು, ಉಳಿದವರು ಪರಾರಿಯಾಗಿದ್ದಾರೆ‌. ಇನ್ನು ಆಟದಲ್ಲಿ ಬಳಸಿದ್ದ ಬರೋಬ್ಬರಿ 10,940 ರೂ. ನಗದು ವಶ ಪಡಿಸಿಕೊಳ್ಳಲಾಗಿದೆ‌. ಹಳೂರಿನಲ್ಲಿ..! ಇನ್ನು, ಮುಂಡಗೋಡ ಪಟ್ಟಣದ ಹಳೂರಿನ ಲಕ್ಷ್ಮೀದೇವಿ ದೇವಸ್ಥಾನದ ಪಕ್ಕದಲ್ಲಿ ಇಸ್ಪೀಟ ಆಟದಲ್ಲಿ ತೊಡಗಿದ್ದವರ ಮೇಲೆ ಪೊಲೀಸರು...

ಮುಂಡಗೋಡ ಲೊಯೊಲಾ ಶಾಲೆಯ ಬಳಿ ಸರಣಿ ಅಪಘಾತ, ಚಿಟಗೇರಿಯ ಬೈಕ್ ಸವಾರ ಗಂಭೀರ..!

ಮುಂಡಗೋಡ ಲೊಯೊಲಾ ಶಾಲೆಯ ಬಳಿ ಸರಣಿ ಅಪಘಾತ, ಚಿಟಗೇರಿಯ ಬೈಕ್ ಸವಾರ ಗಂಭೀರ..!

ಮುಂಡಗೋಡ ಪಟ್ಟಣದ ಶಿರಸಿ ರಸ್ತೆಯ ಲೊಯೋಲಾ ಶಾಲೆಯ ಬಳಿ ಸರಣಿ ಅಪಘಾತವಾಗಿದೆ. ಪರಿಣಾಮ ಓರ್ವ ವ್ಯಕ್ತಿಗೆ ಗಂಭೀರ ಗಾಯವಾಗಿದ್ದು ಆಸ್ಪತ್ರೆಗೆ ರವಾನಿಸಲಾಗಿದೆ. ಮುಂಡಗೋಡ ತಾಲೂಕಿನ ಚಿಟಗೇರಿಯ ಸಿದ್ದಪ್ಪ ಯಮುನಪ್ಪ ನಾಯ್ಕರ್ (45), ಎಂಬುವವನೇ ಗಂಭೀರ ಗಾಯಗೊಂಡಿ ವ್ಯಕ್ತಿಯಾಗಿದ್ದಾನೆ. ಮುಂಡಗೋಡಿನಿಂದ ಬೈಕ್ ಮೇಲೆ ಶಿರಸಿ ಮಾರ್ಗವಾಗಿ ಚಿಟಗೇರಿಗೆ ಹೋಗುತ್ತಿದ್ದ ವೇಳೆ, ಬೈಕ್ ನಿಯಂತ್ರಣ ತಪ್ಪಿ ಮತ್ತೊಂದು ಬೈಕಿಗೆ ಗುದ್ದಿ, ಆ ನಂತರ ಕಾರಿಗೆ ಡಿಕ್ಕಿಯಾಗಿದೆ ಎನ್ನಲಾಗಿದೆ‌. ಹೀಗಾಗಿ, ಬೈಕ್ ಸವಾರನಿಗೆ ಗಂಭೀರ ಗಾಯವಾಗಿದೆ. ಇನ್ನು, ಮಾಹಿತಿ ತಿಳಿದು 108 ಅಂಬ್ಯುಲೆನ್ಸ್ ಸಿಬ್ಬಂದಿಗಳು ಘಟನಾ ಸ್ಥಳಕ್ಕೆ ಧಾವಿಸಿ, ಗಾಯಾಳುವಿಗೆ ಮಾರ್ಗ ಮಧ್ಯೆ ಪ್ರಥಮ ಚಿಕಿತ್ಸೆ ಕೊಟ್ಟು ಮುಂಡಗೋಡ ಆಸ್ಪತ್ರೆಗೆ ದಾಖಲಿಸಿದ್ದರು. ನಂತರ ಗಾಯಾಳುವಿಗೆ ಹೆಚ್ಚಿನ ಚಿಕಿತ್ಸೆ ಗೆ 108 ಅಂಬ್ಯುಲೆನ್ಸ್ ಮುಖಾಂತರ ಹುಬ್ಬಳ್ಳಿ ಕಿಮ್ಸ್ ಗೆ ರವಾನಿಸಲಾಗಿದೆ. ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ‌.

ಇಂದೂರಿನಲ್ಲಿ ಪೆಟ್ರೊಲ್ ಸುರಿದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಯುವಕ..!

ಇಂದೂರಿನಲ್ಲಿ ಪೆಟ್ರೊಲ್ ಸುರಿದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಯುವಕ..!

ಮುಂಡಗೋಡ ತಾಲೂಕಿನ ಇಂದೂರಿನಲ್ಲಿ ಯುವಕನೋರ್ವ ಪೆಟ್ರೊಲ್ ಸುರಿದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. ಸುರೇಶ ಸಂಭಾಜಿ ಮುಗಳಿಕಟ್ಟಿ (26) ಎಂಬುವ ಯುವಕನೇ ಆತ್ಮಹತ್ಯೆಗೆ ಯತ್ನಿಸಿದವನಾಗಿದ್ದಾನೆ. ಇವತ್ತು, ಯಾವುದೋ ವಿಷಯಕ್ಕೆ ಮನನೊಂದು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ ಅಂತಾ ತಿಳಿದು ಬಂದಿದೆ. ಇನ್ನು ಬೆಂಕಿ ಹಚ್ಚಿಕೊಂಡು ನರಳುತ್ತಿದ್ದ ವೇಳೆ ತಕ್ಷಣವೇ ಬೆಂಕಿ ನಂದಿಸಿದ ಸಾರ್ವಜನಿಕರು, 108 ಅಂಬ್ಯುಲೆನ್ಸ್ ಗೆ ಕರೆ ಮಾಡಿದ್ದಾರೆ. ನಂತರ ಸ್ಥಳಕ್ಕೆ ಬಂದ ಅಂಬ್ಯುಲೆನ್ಸ್ ಸಿಬ್ಬಂದಿ ಗಾಯಾಳುವಿಗೆ ಪ್ರಥಮ ಚಿಕಿತ್ಸೆ ನೀಡಿದ್ದಾರೆ. ಮುಂಡಗೋಡ ತಾಲೂಕಾಸ್ಪತ್ರೆಗೆ ಸಾಗಿಸಿದ್ದಾರೆ. ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಕಾಂಗ್ರೆಸ್ ಸೇರೋ ಹಿಂದಿದೆಯಾ ಮಹಾ ಪ್ಲ್ಯಾನ್..? ಲೋಕಲ್ ಬಿಟ್ಟು ಲೋಕಸಭೆಗೆ ಜಿಗಿತಾರಾ ಶಿವರಾಮ್ ಹೆಬ್ಬಾರ್..? ಕೈ ಅಂಗಳದಲ್ಲಿ ಚರ್ಚೆ ಆಗ್ತಿರೋದಾದ್ರೂ ಏನು..?

ಕಾಂಗ್ರೆಸ್ ಸೇರೋ ಹಿಂದಿದೆಯಾ ಮಹಾ ಪ್ಲ್ಯಾನ್..? ಲೋಕಲ್ ಬಿಟ್ಟು ಲೋಕಸಭೆಗೆ ಜಿಗಿತಾರಾ ಶಿವರಾಮ್ ಹೆಬ್ಬಾರ್..? ಕೈ ಅಂಗಳದಲ್ಲಿ ಚರ್ಚೆ ಆಗ್ತಿರೋದಾದ್ರೂ ಏನು..?

ಯಲ್ಲಾಪುರ ಕ್ಷೇತ್ರದ ಬಿಜೆಪಿ ಶಾಸಕ ಶಿವರಾಮ್ ಹೆಬ್ಬಾರ್ ಕಾಂಗ್ರೆಸ್ ಸೇರೋದು ಬಹುತೇಕ ಫಿಕ್ಸು ಎಂಬುವ ಮಾಹಿತಿ ಲಭ್ಯವಾಗ್ತಿದೆ. ಆದ್ರೆ, ಈ ಬಗ್ಗೆ ಶಾಸಕ ಹೆಬ್ಬಾರರು ಯಾವುದೇ ಖಚಿತ ಮಾಹಿತಿ ನೀಡುತ್ತಿಲ್ಲ. ಬದಲಾಗಿ ಅಡ್ಡಗೋಡೆಯ ಮೇಲೆ ದೀಪ ಇಟ್ಟಂಗೆ ಮಾತಾಡ್ತಿದಾರೆ. ಸತ್ಯ ಅಂದ್ರೆ, ಹೆಬ್ಬಾರ್ ಸಾಹೇಬ್ರ ಲೆಕ್ಕಾಚಾರ ಬೇರೇಯದ್ದೇ ಇದೆಯಾ..? ಈಗಾಗಲೇ ಕೇಸರಿ ಅಂಗಳದಿಂದ ಒಂದು ಹೆಜ್ಜೆ ಹೊರಗೆ ಇಟ್ಟು ಆಗಿದೆಯಾ..? ಅಷ್ಟಕ್ಕೂ, ಕಾಂಗ್ರೆಸ್ “ಕೈ” ಹಿಡಿಯಲು ಇಟ್ಟಿರೋ ಬೇಡಿಕೆಗಳಾದ್ರೂ ಏನು..? ಅಸಲು, ಕಾಂಗ್ರೆಸ್ ಹೈಕಮಾಂಡ್ ಹೆಬ್ಬಾರ್ ಸಾಹೇಬ್ರ ಬೇಡಿಕೆಗಳನ್ನ ಒಪ್ಪಿಕೊಳ್ಳತ್ತಾ..? ಹಾಗಿದ್ರೆ, ಬರುವ ಲೋಕಸಭಾ ಚುನಾವಣೆ ಹೊತ್ತಿಗೆ ಇಡೀ ಕ್ಷೇತ್ರದ ಚಿತ್ರಣವೇ ಬದಲಾಗಿ ಬಿಡತ್ತಾ..? ಒಳಗೊಳಗಿನ ಬಾತ್ಮಿಗಳು ಏನಿದೆ..? ಇದೇಲ್ಲದರ ಕುರಿತಾಗಿ ವರದಿ ಇದು. ಭವಿಷ್ಯದ ಚಿಂತೆಯಾ..? ಯಸ್, ಸದ್ಯ ಬಿಜೆಪಿ ಶಾಸಕ ಶಿವರಾಮ್ ಹೆಬ್ಬಾರ್ ಗೆ ಮುಂದಿನ ರಾಜಕೀಯ ಭವಿಷ್ಯದ ಚಿಂತೆ ಶುರುವಾಗಿದೆ. ತಮ್ಮ ಜೊತೆ, ತಮ್ಮ ಸುಪುತ್ರನ ರಾಜಕೀಯ ಕಣ ಹದಗೊಳಿಸುವ ಯೋಚನೆ ತಲೆ ಹೊಕ್ಕಿದೆ. ಹೀಗಾಗಿನೇ ಬಹುತೇಕ...

error: Content is protected !!