ಕೊನೆಗೂ ಮತದಾನಕ್ಕೆ ಒಪ್ಪಿಕೊಂಡ ಬಸಾಪುರ ಗ್ರಾಮಸ್ಥರು, ಶಿರಸಿ ಎಸಿ ಭರವಸೆ ಬಳಿಕ ಮತಗಟ್ಟೆಗೆ ಎಂಟ್ರಿ..!



ಮುಂಡಗೋಡ ತಾಲೂಕಿನ ನಂದಿಕಟ್ಟಾ ಗ್ರಾಮ ಪಂಚಾಯತಿ ವ್ಯಾಪ್ತಿಯ ಬಸಾಪುರ ಗ್ರಾಮಸ್ಥರು ಕೊನೆಗೂ ಮತದಾನಕ್ಕೆ ಒಪ್ಪಿಕೊಂಡಿದ್ದಾರೆ. ವಿವಿಧ ಬೇಡಿಕೆಗೆ ಆಗ್ರಹಿಸಿ ಇಡೀ ಗ್ರಾಮಕ್ಕೆ ಗ್ರಾಮವೇ ಮತದಾನ ಬಹಿಷ್ಕಾರ ಮಾಡಿ ಪ್ರತಿಭಟನೆ ಮಾಡಿದ್ರು‌. ಹೀಗಾಗಿ, ಪಬ್ಲಿಕ್ ಫಸ್ಟ್ ನ್ಯೂಸ್ ಈ ಕುರಿತು ವಿಸ್ತೃತ ವರದಿ ಬಿತ್ತರಿಸಿತ್ತು.

ಬೆಳಿಗ್ಗೆಯಿಂದಲೂ ತಾಲೂಕಾಡಳಿತಕ್ಕೆ ಎಚ್ಚರಿಕೆ ನೀಡಿ, ಮತದಾನ ಬಹಿಷ್ಕಾರ ಮಾಡಿದ್ದ ಗ್ರಾಮಸ್ಥರು, ತಹಶೀಲ್ದಾರ್ ಮುಖಾಂತರ ಮನವಿ ಅರ್ಪಿಸಿದ್ದರು. ಆದ್ರೆ, ತಹಶೀಲ್ದಾರ್ ಸಾಹೇಬ್ರು ಗ್ರಾಮಸ್ಥರ ಮನವಿ ಸ್ವೀಕರಿಸಿ ಮತದಾನ ಮಾಡುವಂತೆ ಗ್ರಾಮಸ್ಥರಿಗೆ ಮನವಿ ಮಾಡಿ ಬಂದಿದ್ದರು. ಆದ್ರೆ, ಗ್ರಾಮಸ್ಥರು ನಮಗೆ ಪಕ್ಕಾ ಭರವಸೆ ನೀಡುವಂತೆ ಪಟ್ಟು ಹಿಡಿದು ಸಂಜೆವರೆಗೂ ಮತದಾನ ಬಹಿಷ್ಕರಿಸಿಯೇ ಕುಳಿತಿದ್ರು.

ಯಾವಾಗ, ಈ ಸುದ್ದಿ ಜಿಲ್ಲಾಧಿಕಾರಿಗಳ ಗಮನಕ್ಕೆ ಬಂದಿತೊ ಆವಾಗ ಶಿರಸಿ ಸಹಾಯಕ ಕಮೀಶನರ್ ರವರ ಮೂಲಕ ಗ್ರಾಮಸ್ಥರಿಗೆ ಖಚಿತ ಭರವಸೆ ಕೊಟ್ಟು ಮತದಾನ ಮಾಡುವಂತೆ ಮನ ಒಲಿಸಿದ್ರು. ನಂತರ 4.30 ನಂತರ ಗ್ರಾಮಸ್ಥರು ಮತದಾನಕ್ಕೆ ತೆರಳಿದ್ರು.

error: Content is protected !!