ಮುಂಡಗೋಡ ತಾಲೂಕಿನಲ್ಲಿ ಸಂಭ್ರಮದ ಬಸವ ಜಯಂತಿ ಆಚರಿಸಲಾಯಿತು. ತಾಲೂಕಿನ ಇಂದೂರು ಕೊಪ್ಪ ಗ್ರಾಮದಲ್ಲಿ ಬಸವೇಶ್ವರರ ನೂತನ ಪುತ್ಥಳಿ ಪ್ರತಿಷ್ಟಾಪಿಸಲಾಯಿತು. ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಬಸವೇಶ್ವರರ 12 ಅಡಿಯ ಪುತ್ಥಳಿ ಅನಾವರಣ ಮಾಡಲಾಯಿತು‌.

ಬೆಳಿಗ್ಗೆಯಿಂದಲೇ ವಿಶೇಷ ಪೂಜಾ ಕೈಂಕರ್ಯಗಳೊಂದಿಗೆ ಪ್ರಾರಂಭವಾದ ಬಸವ ಜಯಂತಿ ಹಾಗೂ ಪುತ್ಥಳಿ ಪ್ರತಿಷ್ಟಾಪನೆ ಕಾರ್ಯದಲ್ಲಿ ಗ್ರಾಮಸ್ಥರು ಭಾಗಿಯಾಗಿದ್ರು.

ಹುನಗುಂದದಲ್ಲಿ..!
ಇನ್ನು ತಾಲೂಕಿನ ಹುನಗುಂದದಲ್ಲಿ ಬಸವೇಶ್ವರ ಜಯಂತಿಯ ಅಂಗವಾಗಿ ಗ್ರಾಮದಲ್ಲಿ ಭವ್ಯ ಮೆರವಣಿಗೆ ನಡೆಸಲಾಯಿತು. ಅಲಂಕೃತಗೊಂಡ ಚಕ್ಕಡಿಗಳಲ್ಲಿ ಬಸವೇಶ್ವರ ರ ಭಾವಚಿತ್ರದ ಮೆರವಣಿಗೆ ನಡೆಸಲಾಯಿತು. ಈ ವೇಳೆ ಗ್ರಾಮದ ಮುಖಂಡರು ಭಾಗಿಯಾಗಿದ್ರು‌.

 

error: Content is protected !!