ಮುಂಡಗೋಡ: ಪಟ್ಟಣದ ಗಾಂಧಿನಗರ ಸ್ಲಂ ಬೋರ್ಡ್ ಘೋಷಣೆಗೆ ಸಂಬಂಧಿಸಿದಂತೆ ಶನಿವಾರ ಜಂಟಿ ತನಿಖಾ ತಂಡಕ್ಕೆ ಗಾಂಧಿನಗರದ ನಿವಾಸಿಗಳು ಪರ-ವಿರೋಧ ಪ್ರತ್ಯೇಕ ವಾಗಿ ದಾಖಲೆ ಸಮೇತ ಮನವಿ ಸಲ್ಲಿಸಿದ ಘಟನೆ ನಡೆದಿದೆ.
ಪಟ್ಟಣದ ಗಾಂಧಿನಗರದ ಇಪ್ಪತೈದು ಎಕರೆ ಪ್ರದೇಶದಲ್ಲಿ ಎಲ್ಲಾ ಮೂಲಸೌಕರ್ಯ ಇದ್ದರು ಸುಳ್ಳು ದಾಖಲೆ ನೀಡಿ ಸ್ಲಂ ಬೋರ್ಡ್ ಘೋಷಣೆ ಮಾಡಲಾಗಿದೆ. ಎಂದು ವೇಕಟೇಶ ಶಿರಾಲಿ ಅವರು ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿದ್ದರು ಈ ದೂರಿನ ಅನ್ವಯ ಜಿಲ್ಲಾ ಧಿಕಾರಿಗಳು ಕೂಲಂಕುಷವಾಗಿ ಪರಿಶೀಲಿಸಿ ಸತ್ಯ ಶೋಧನಾ ವರದಿ ನೀಡುವಂತೆ ಜಂಟಿ ತನಿಖಾ ತಂಡ ರಚಿಸಿದ್ದರು.
ಈ ತಂಡದಲ್ಲಿ ಜಿಲ್ಲಾ ಕಾರ್ಯ ನಿರ್ವಾಹಕ ಅಭಿಯಂತರ ಎ ರವಿಕುಮಾರ, ಜಿಲ್ಲಾ ನಗರಕೋಶ ಎಇಇ ಕೆಎಸ್ ಕಮ್ಮಾರ್, ಸ್ಲಂ ಬೋರ್ಡ್ ಅಧಿಕಾರಿ ಪ್ರತೀಕ್ ದಳವಾಯಿ, ಜಿಲ್ಲಾ ನಗರಸಭೆ ತಹಶೀಲ್ದಾರ್ ರವಿರಾಜ್ ದೀಕ್ಷತ್, ಇಲ್ಲಿನ ಉಪತಹಶೀಲ್ದಾರ ಚಂದ್ರಶೇಖರ ಹೊಸಮನಿ ಮತ್ತು ಪ.ಪಂ ಮುಖ್ಯಾಧಿಕಾರಿ ಚಂದ್ರಶೇಖರ ಒಳಗೊಂಡಂತೆ ಸಮಿತಿ ರಚಿಸಿ. 15 ದಿನಗಳವೊಳಗಾಗಿ ವರದಿ ನೀಡುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದ್ದರು. ಅದರಂತೆ ಈ ತಂಡ ಪಟ್ಟಣ ಪಂಚಾಯಿತಿ ಗೆ ಭೇಟಿ ನೀಡಿ ಗಾಂಧಿನಗರ ಸ್ಲಂ ಬೋರ್ಡ್ ನ ಮಾಹಿತಿಗಳನ್ನು ಪರಿಶೀಲಿಸಿತ್ತು.
ಆ ವೇಳೆಯಲ್ಲಿ ಪ.ಪಂ ಯವರು ಗಾಂಧಿನಗರವನ್ನು ಸ್ಲಂ ಬೋರ್ಡ್ ಗೆ ಸೇರಿಸುವಂತೆ ಠರಾವು ಮಾಡಿ ಕಳುಹಿಸಿತ್ತು. ನಂತರ ಜಿಲ್ಲಾಧಿಕಾರಿಗಳಿಗೆ ವರದಿ ನೀಡಿತ್ತು. ಈ ಹಿಂದಿನ ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸರಕಾರಕ್ಕೆ ವರದಿ ಸಲ್ಲಿಸಲಾಗಿತ್ತು. ನಂತರ ಆ ವೇಳೆಯಲ್ಲಿ ಗಾಂಧಿನಗರ ಸರ್ವೆ ನಂಬರ 186 25 ಎಕರೆಯನ್ನು ಕೊಳಚೆ ಮಹಾ ಮಂಡಳಿಗೆ ಪ.ಪಂಯೂ ಹಸ್ತಾಂತರ ಮಾಡಲಾಗಿತ್ತು. ಅದರಂತೆ ಕೊಳಚೆ ಮಂಡಳಿಯವರು ಫಲಾನುಭವಿಗಳಿಗೆ ಹಕ್ಕು ಪತ್ರ ನೀಡಲಾಗಿದೆ ಎಂದು ಪ.ಪಂ ಅಧಿಕಾರಿಗಳು ಸಮಿತಿಯ ಎದುರು ದಾಖಲೆಯೊಂದಿಗೆ ಮಾಹಿತಿ ನೀಡಿದ್ದರು.
ಗಾಂಧಿನಗರ ಅಭಿವೃದ್ಧಿ ಸಮಿತಿಯಿಂದ ಪ್ರತಿಭಟಿಸಿ ಮನವಿ:
1977 ರಲ್ಲಿ ಗಾಂಧಿನಗರ ಕೆಜಿಪಿ ಆಗಿ ಗೆಜೆಟ್ ಆಗಿ ಅಭಿವೃದ್ಧಿ ಸಹ ಆಗಿದೆ. ಜನಸಂಖ್ಯೆ ಕ್ರಮ ಬದ್ದವಾಗಿದ್ದರು ಸಹ ಸುಳ್ಳು ಮತ್ತು ತಪ್ಪು ವರದಿ ಸಂಗ್ರಹಿಸಿ ಕಾನೂನು ಬಾಹಿರವಾಗಿ ಸರ್ವೇ ನಂಬರ 186 ಪ. ಪಂ ಯವರು ಇಪ್ಪತೈದು ಎಕರೆ ಪ್ರದೇಶವನ್ನು ಸ್ಲಂ ಬೋರ್ಡ್ ಎಂದು ಘೋಷಣೆ ಮಾಡಿರುವುದು ಕಾನೂನುಬಾಹಿರವಾಗಿದೆ. ಈ ಗಾಂಧಿಗನರದಲ್ಲಿ 24 ಗಂಟೆಗಳ ಕಾಲ ಕುಡಿಯುವ ನೀರು, ಪ್ರತಿ ಗಲ್ಲಿಯಲ್ಲಿಯೂ 20 ರಿಂದ 30 ಅಡಿ ಅಗಲದ ಸಿಮೆಂಟ್ ಕಾಂಕ್ರೀಟ್ ರಸ್ತೆ, ಬೀದಿ ದೀಪ, ವಸತಿ ನಿಲಯ, ಶಾಲೆ, ದೇವಸ್ಥಾನ ಹೋಂ ಗಾರ್ಡ್ ಮೈದಾನ, ಅಂಬೇಡ್ಕರ ಮತ್ತು ಮರಾಠ ಭವನ ಬೃಹತ್ ಕಟ್ಟಡ ಗಳಿವೆ. ಹೀಗಾಗಿ ಸ್ಲಂ ಬೋರ್ಡ್ ನ್ನು ರದ್ದು ಪಡಿಸುವಂತೆ ಅಧಿಕಾರಿಗಳಿಗೆ ನೀಡಿದ ಮನವಿಯಲ್ಲಿ ತಿಳಿಸಿದ್ದಾರೆ.
ಇದಕ್ಕೂ ಮುನ್ನ ಗಾಂಧಿನಗರ ಅಭಿವೃದ್ಧಿ ಸಮಿತಿಯ ವರು ಪ. ಪಂ ಎದರು ಪ್ರತಿಭಟಿಸಿದರು. ಈ ವೇಳೆ
ವೆಂಕಟೇಶ ಶಿರಾಲಿ, ಎನ್.ಡಿ ಕಿತ್ತೂರ, ವಿ ಎಸ್ ವಿರಕ್ತಮಠ, ಪಿ.ಡಿ ನಾಯ್ಕ ,ವಿ.ಡಿ ನಾಯ್ಕ, ಶರತ್ ಬಾಡ್ಕರ್, ರಮೇಶ ಮಳೇಕರ ಸೇರಿದಂತೆ ಮುಂತಾದವರಿದ್ದರು.
ಜಂಟಿ ತನಿಖಾ ತಂಡ ಗಾಂಧಿನಗರಕ್ಕೆ ಭೇಟಿ: ಜಂಟಿ ತನಿಖಾ ತಂಡವು ಗಾಂಧಿನಗರದ ಗಲ್ಲಿಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಆ ವೇಳೆಯಲ್ಲಿ ಸ್ಲಂ ಬೋರ್ಡ್ ಇಂಜನಿಯರ್ ಮಾತನಾಡಿ ಪಟ್ಟಣ ಪಂಚಾಯಿತಿ ಯಿಂದ ಸ್ಲಂ ಬೋರ್ಡ್ ಮಾಡುವಂತೆ ಪ್ರಸ್ತಾವನೆ ಬಂದ ನಂತರ ಸರ್ವೇ ನಡೆಸಿ ಫಲಾನುಭವಿಗಳಿಗೆ ಹಕ್ಕು ಪತ್ರ ನೀಡಿದ್ದೇವೆ. ಸ್ಲಂ ಬೋರ್ಡ್ ಎಂದರೆ ಎಲ್ಲ ಮೂಲಭೂತ ಸೌಕರ್ಯಗಳ ಜತೆಗೆ ಮನೆ ಕಟ್ಟಿಸಿ ಕೊಡುವ ಯೋಜನೆಯಾಗಿದೆ ಎಂದರು
ಸ್ಲಂ ಬೋಡ್೯ ಮಾಡುವಂತೆ ಮನವಿ:
ಈ ಪ್ರದೇಶದಲ್ಲಿ ಹೆಚ್ಚು ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ ವರ್ಗ ಅಲ್ಪಸಂಖ್ಯಾತ ಸಮುದಾಯದವರೆ ವಾಸವಾಗಿದ್ದಾರೆ. ಪ.ಪಂ ಯಿಂದ ಬರುವ ಅಭಿವೃದ್ಧಿ ಹಣದೊಂದಿಗೆ ಕೊಳಚೆ ಅಭಿವೃದ್ಧಿ ಮಂಡಳಿಯವರು ನಮ್ಮ ಕೊಳಚೆ ಪ್ರದೇಶಕ್ಕೆ ಅನುದಾನ ಕೊಟ್ಟಿರುವುದರಿಂದ ನಮ್ಮ ವಸತಿ ನಿರ್ಮಾಣ, ಕುಡಿಯುವ ನೀರು ರಸ್ತೆ, ಬೆಳಕು, ಸಮುದಾಯ ಭವನವನ್ಜು ಮಾಡಿಸಿಕೊಳ್ಳಲು ಅನುಕೂಲವಾಗಿದೆ. ಸರಕಾರ ನಮಗೆ ಮುಕ್ತವಾಗಿ ಗಾಂಧಿನಗರವನ್ನು ಸ್ಲಂ ಬೋರ್ಡ್ ಎಂದ ಘೋಷಣೆ ಮಾಡಿದ್ದರಿಂದ ನಮಗೆ ಅನೂಕುಲವಾಗಿದೆ. ಆದರೆ ಇದನ್ನು ರದ್ದು ಪಡಿಸಲು ಪದೆ ಪದೇ ದೂರು ಸಲ್ಲಿಸುತ್ತಿರುವ ವ್ಯಕ್ತಿಗಳಿಗೆ ಏನು ಅಧಿಕಾರವಿದೆ? ನಮಗೆ ಬಂದಿರುವ ಯೋಜನಗೆ ಅಡ್ಡಿಪಡಿಸಲು ಇವರ್ಯಾರು..? ಜನವರಿ 2025 ರಂದು ಪ.ಪಂ ಸಾಮನ್ಯ ಸಭೆಯಲ್ಲಿ ಗಾಂಧಿನಗರ ಸ್ಲಂ ಬೋರ್ಡ್ ಎಂದು ಘೋಷಿಸಿದ ಅಧಿಸೂಚನೆ ವಿರುದ್ಧ ದಾಖಲಿಸಿದ ದೂರಿನ ಬಗ್ಗೆ ಯಾವುದೇ ಮಾನ್ಯತೆ ನೀಡ ಬಾರದು ಹಾಗೂ ಹಾಲಿ ಈಗಿನ ಅಧಿಸೂಚನೆಯನ್ನು ಮುಂದು ವರಿಸುವಂತೆ ನಿರ್ಣಾಯಿಸಿ ಠರಾವು ಮಾಡಲಾಗಿದೆ. ಹೀಗಾಗಿ ಯಾವುದೇ ಕಾರಣಕ್ಕೂ ಸ್ಲಂ ಬೋರ್ಡ್ ಅಧಿಸೂಚನೆಯನ್ನು ರದ್ದು ಪಡಿಸಬಾರದು ಎಂದು 128 ಪುಟದ ದಾಖಲೆಯೊಂದಿಗೆ ತನಿಖಾ ತಂಡಕ್ಕೆ ಮನವಿ ಸಲ್ಲಿಸಿದ್ದಾರೆ.
ಈ ವೇಳೆ ಪ.ಪಂ ಸದಸ್ಯ ಅಶೋಕ ಚಲವಾದಿ, ಬಸವರಾಜ ಹಳ್ಳಮ್ಮನವರ, ಮೌನೇಶ ಕೊರವರ, ರಾಜು ಬಾಬರ, ರಾಮು ಕೊರವರ, ಪ್ರವೀಣ ಮಡಿವಾಳ, ಕಲ್ಲಪ್ಪ ಸೇರಿದಂತೆ ಮುಂತಾದವರಿದ್ದರು.