ಶುಂಠಿ ಹೊಲದಲ್ಲಿ ಕೂಲಿ ಕೆಲಸಕ್ಕೆ ಹೋಗಿದ್ದ ಕೂಲಿ ಕಾರ್ಮಿಕನೋರ್ವ ವಿದ್ಯುತ್ ಗೆ ಬಲಿಯಾಗಿ, ಮತ್ತೋರ್ವ ಗಂಭೀರ ಗಾಯಗೊಂಡ ಘಟನೆ, ಮುಂಡಗೋಡ ತಾಲೂಕಿನ ಓಣಿಕೇರಿ ಗ್ರಾಮದಲ್ಲಿ ನಡೆದಿದೆ.
ಅಂದಹಾಗೆ, ಹಾನಗಲ್ ತಾಲೂಕಿನ ಬಾಳಂಬೀಡ ಗ್ರಾಮದ ಬಸವರಾಜ್ ಚಂದ್ರಪ್ಪ ಹರಿಜನ್ (22) ವಿದ್ಯುತ್ ದುರಂತದಲ್ಲಿ ಜೀವ ಕಳೆದುಕೊಂಡ ನತದೃಷ್ಟನಾಗಿದ್ದಾನೆ. ಹರೀಶ್ ರಾಮಣ್ಣ ಹರಿಜನ್ ಗಾಯಗೊಂಡವನಾಗಿದ್ದಾನೆ
ಪಾಳಾ ಗ್ರಾಮದ ಮೂಕಪ್ಪ ಹರಿಜನ್ ಎಂಬಾತ, ಓಣಿಕೇರಿ ಗ್ರಾಮದಲ್ಲಿ ಬೇರೋಬ್ಬರ ಜಮೀನನ್ನು ಲಾವಣಿ ಮೇಲೆ ಪಡೆದು ಶುಂಠಿ ಕೃಷಿ ಮಾಡುತ್ತಿದ್ದಾರೆ. ಹೀಗಾಗಿ, ಇಂದು ಶುಂಠಿ ಕೀಳಲು ಹಾನಗಲ್ ತಾಲೂಕ್ ಬಾಳಂಬಿಡ್ ಗ್ರಾಮದ ಕೂಲಿ ಕಾರ್ಮಿಕರನ್ನು ಕರೆತಂದಿದ್ದರು. ಕಾರ್ಮಿಕರು ಮಧ್ಯಾಹ್ನ ಊಟದ ಸಮಯಕ್ಕೆ ಪಕ್ಕದ ಮಾರುತಿ ಹರಿಜನ ಎಂಬುವವರ ಜಮೀನಿನಲ್ಲಿ ಮರದ ಕೆಳಗೆ ಕುಳಿತು ಊಟ ಮಾಡಲು ತೆರಳುತ್ತಿದ್ದರು.
ಈ ವೇಳೆ ಅಲ್ಲೆ ಹಾದು ಹೋಗಿದ್ದ ವಿದ್ಯುತ್ ವೈಯರ್ ತುಳಿದು ಕೂಲಿ ಕಾರ್ಮಿಕ ಸ್ಥಳದಲ್ಲೇ ಮೃರಪಟ್ಟಿದ್ದಾನೆ. ಇದೇ ವೇಳೆ ಮತ್ತೋರ್ವ ಕೂಲಿ ಕಾರ್ಮಿಕ ಹರೀಶ್ ರಾಮಣ್ಣ ಹರಿಜನ್ ಗಾಯಗೊಂಡಿದ್ದು ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಗೆ ರವಾನಿಸಲಾಗಿದೆ.
ಸದ್ಯ ಸ್ಥಳಕ್ಕೆ ಮುಂಡಗೋಡ ಕ್ರೈಂ ಪಿಎಸ್ಐ ಹನ್ಮಂತ್ ಗುಡುಗುಂಟಿ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಮುಂದಿನ ಕ್ರಮ ಕೈಗೊಂಡಿದ್ದಾರೆ.