ಮುಂಡಗೋಡ ಪಟ್ಟಣದ ಸರ್ವೆ ನಂಬರ್ 186 ರ ಗಾಂಧಿ ನಗರ ಪ್ರದೇಶವನ್ನು ಸುಳ್ಳು ಹಾಗೂ ತಪ್ಪು ಮಾಹಿತಿ ನೀಡಿ, ಸ್ಲಂ ಅಂತಾ ಘೋಷಣೆ ಮಾಡಿದ್ದಾರೆ ಎಂದು ಆರೋಪಿಸಿ ಮುಂಡಗೋಡ ಪಟ್ಟಣ ಪಂಚಾಯತ್ ಹಾಗೂ ಸ್ಲಂ ಬೋರ್ಡ್ ಬೆಳಗಾವಿ ವಿರುದ್ಧ ಗಾಂಧಿನಗರದ ನಿವಾಸಿಗಳು ಇಂದು ಶನಿವಾರ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ.
ಗಾಂಧಿನಗರವನ್ನು ಸ್ಲಂ ಬೋರ್ಡ್ ಅಂತಾ ಮಾಡಿರುವುದನ್ನು ಕೂಡಲೇ ತಿದ್ದುಪಡಿ ಮಾಡಬೇಕು ಅಂತ ಆಗ್ರಹಿಸಿ, ಗಾಂಧಿನಗರ ನಿವಾಸಿಗಳು, ಬೆಳಿಗ್ಗೆ 11 ಗಂಟೆಗೆ ಗಾಂಧಿನಗರದಿಂದ ಪಟ್ಟಣ ಪಂಚಾಯತಿವರೆಗೂ ಶಾಂತಿಯುತವಾಗಿ ಪ್ರತಿಭಟನಾ ಮೆರವಣಿಗೆ ಮೂಲಕ ಬಂದು, ಪಟ್ಟಣ ಪಂಚಾಯತಿ ಎದುರು ಪ್ರತಿಭಟನೆ ನಡೆಸಲಿದ್ದಾರೆ. ಹಾಗಂತ ಮುಂಡಗೋಡ ಗಾಂಧಿನಗರ ಅಭಿವೃದ್ಧಿ ಸಮಿತಿ ಸದಸ್ಯರು ತಿಳಿಸಿದ್ದಾರೆ.