ಮುಂಡಗೋಡ ತಾಲೂಕಿನ ನಂದಿಕಟ್ಟಾದಲ್ಲಿ ಶ್ರೀರಾಮಸೇನೆಯ ಕಾರ್ಯಕರ್ತರು, ರಾಮನವಮಿ ಅಂಗವಾಗಿ ಸಮಾಜಿಕ ಕಳಕಳಿಯ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಹುಬ್ಬಳ್ಳಿಯ ಪ್ರತಿಷ್ಠಿತ ಸೆಕ್ಯೂರ್ ಆಸ್ಪತ್ರೆಯ ಸಹಯೋಗದೊಂದಿಗೆ ಉಚಿತ ಆರೋಗ್ಯ ಮತ್ತು ಹೃದಯ ತಪಾಸಣಾ ಶಿಬಿರ ಏರ್ಪಡಿಸಿದ್ದಾರೆ.
ನಾಳೆ ರವಿವಾರ ದಿನಾಂಕ 06.04. 2025 ರಂದು ನಂದಿಕಟ್ಟಾ ಗ್ರಾಮದಲ್ಲಿ ನಡೆಯುವ ಶಿಬಿರದಲ್ಲಿ,ನಾಡಿ ಮಿಡಿತ(ಪಲ್ಸ್), ರಕ್ತದೊತ್ತಡ(ಬಿಪಿ), ಸಕ್ಕರೆ ಖಾಯಿಲೆ(ಶುಗರ್), ಇಸಿಜಿ(ECG)
ಇಖೋ(ECHO) ಆರೋಗ್ಯ ಸೇವೆಗಳನ್ನು ಉಚಿತವಾಗಿ ನೀಡಲಾಗುತ್ತಿದ್ದು, ತಜ್ಞ ವೈದ್ಯರೊಂದಿಗೆ ಸಮಾಲೋಚನೆ ನಡೆಸಬಹುದಾಗಿದೆ.
ಹೀಗಾಗಿ, ಸಾರ್ವಜನಿಕರು ಶಿಬಿರದ ಸದುಪಯೋಗ ಪಡೆದುಕೊಳ್ಳಲು ನಂದಿಕಟ್ಟಾ, ಉಗ್ಗಿನಕೇರಿ, ಕೆಂದಲಗೇರಿ ಬಸಾಪುರ ಹಾಗೂ ಹುಲಿಹೊಂಡ ಗ್ರಾಮಗಳ ಸಾರ್ವಜನಿಕರಿಗೆ ಕೋರಲಾಗಿದೆ.