ಮುಂಡಗೋಡ ತಾಲೂಕಿನ ನಂದಿಕಟ್ಟಾದಲ್ಲಿ ಶ್ರೀರಾಮ‌ಸೇನೆಯ ಕಾರ್ಯಕರ್ತರು, ರಾಮನವಮಿ ಅಂಗವಾಗಿ ಸಮಾಜಿಕ ಕಳಕಳಿಯ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಹುಬ್ಬಳ್ಳಿಯ ಪ್ರತಿಷ್ಠಿತ ಸೆಕ್ಯೂರ್ ಆಸ್ಪತ್ರೆಯ ಸಹಯೋಗದೊಂದಿಗೆ ಉಚಿತ ಆರೋಗ್ಯ ಮತ್ತು ಹೃದಯ ತಪಾಸಣಾ ಶಿಬಿರ ಏರ್ಪಡಿಸಿದ್ದರು.

ಶ್ರೀರಾಮರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಕಾರ್ಯಕ್ರಮದಲ್ಲಿ ಹಲವು ಸಾಧಕರಿಗೆ ಸನ್ಮಾನ ಮಾಡಲಾಯಿತು.

ನಂತರ ಗ್ರಾಮದ ಈಶ್ವರ ದೇವಸ್ಥಾನದಲ್ಲಿ ಉಚಿತ ಆರೋಗ್ಯ, ಹೃದಯ ತಪಾಸಣೆ ನಡೆಸಲಾಯಿತು. ನೂರಾರು ಜನರ ಆರೋಗ್ಯ ತಪಾಸಣೆ ಮಾಡಿಸಿಕೊಂಡರು‌.

ಈ ವೇಳೆ ನಂದಿಕಟ್ಟಾ ಗ್ರಾಮ ಪಂಚಾಯತಿ ಸದಸ್ಯ ಸಂತೋಷ ಭೋಸಲೆ, ಸದಸ್ಯರಾದ ರಮೇಶ ನೇಮಣ್ಣವರ್, ಉದಯ ಕವಟೆ, ಸುನಿಲ್ ಬಸವಣ್ಣಪ್ಪ ಕೊಟ್ಟಗೂಣಸಿ, 108 ಅಂಬ್ಯುಲೆನ್ಸ್ ತಂತ್ರಜ್ಞ ಧನರಾಜ್,

ಮಂಜು ಕವಟೆ, ಕೇದಾರಿ ಮುಗಳಿ, ಶ್ರೀರಾಮ ಸೇನಾ ನಂದಿಕಟ್ಟಾ ಅಧ್ಯಕ್ಷ ಸಂಜಯ್ ಭೋಸ್ಲೆ . ಉಪಾಧ್ಯಕ್ಷ ಮಹಾಂತೇಶ್ ಹರಿಜನ, ಲಚ್ಚಪ್ಪ ದುರಮುರ್ಗಿ, ನಂದನ್ ಪಾಟೀಲ್, ಪಕ್ಕಿರೇಶ್ ಮಳಲಿ, ಆನಂದ್ ಪಾಟೀಲ್, ಸಂದೀಪ್ ಬೋಸಲೆ, ಅಭಿ, ಚೇತನ್, ಕೃಷ್ಣಾ, ಶಿವಾನಂದ, ಪಕ್ಕೀರೇಶ್, ಸಚಿನ್ ಪಾಟೀಲ್, ಗಣೇಶ್ ಭೋಸ್ಲೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.

error: Content is protected !!