ಮಳೆಗಾಳಿಗೆ ರಸ್ತೆ ಮೇಲೆ ಬಿದ್ದ ಬೃಹತ್ ಮಾವಿನ ಮರ, ಶಿರಸಿ-ಹುಬ್ಬಳ್ಳಿ ರಸ್ತೆ ಸಂಪೂರ್ಣ ಸ್ಥಗಿತ..!


ಮುಂಡಗೋಡ ತಾಲೂಕಿನ ಕೆಲವು ಕಡೆ ಸಂಜೆ ಭಾರಿ ಮಳೆ ಗಾಳಿಗೆ ಅವಾಂತರಗಳು ಸೃಷ್ಠಿಯಾಗಿವೆ. ಭಾರೀ ಮಳೆ ಗಾಳಿಗೆ ಶಿರಸಿ ರಸ್ತೆಯ ಸಾಲಗಾಂವ್ ಸಮೀಪ ಬೃಹತ್ ಮಾವಿನ ಮರ ರಸ್ತೆ ಮೇಲೆ ಬಿದ್ದಿದೆ. ಪರಿಣಾಮ ರಸ್ತೆ ಸಂಚಾರ ಕಳೆದ ಒಂದು ಗಂಟೆಯಿಂದ ಸ್ಥಗಿತಗೊಂಡಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ..

ಮಳೆ ಗಾಳಿಗೆ ರಸ್ತೆ ಮೇಲೆಯೇ ಧರೆಗುರುಳಿರೋ ಮರದ ತೆರವು ಮಾಡಬೇಕಿದೆ. ರಸ್ತೆ ಸಂಚಾರ ಸುಗಮಗೊಳಿಸವೇಕಿದೆ ಅಂತಾ ವಾಹನ ಸವಾರರು ಪರದಾಡುತ್ತಿದ್ದಾರೆ.

error: Content is protected !!