ಹೃದಯಾಘಾತದಿಂದ ಹುನಗುಂದದ ಮತ್ತೋರ್ವ ಯುವಕ ಸಾವು, ಒಂದೇ ದಿನ ಇಬ್ಬರು ಯುವಕರ ಸಾವು..! ಗ್ರಾಮದಲ್ಲಿ ಸೂತಕದ ಛಾಯೆ..!!

ಮುಂಡಗೋಡ ತಾಲೂಕಿನ ಹುನಗುಂದ ಗ್ರಾಮಕ್ಕೆ ಈ ಅಮವಾಸ್ಯೆ ಅಕ್ಷರಶಃ ಕರಾಳ ಅಮವಾಸ್ಯೆ ಆದಂತಾಗಿದೆ. ಇವತ್ತೊಂದೇ ದಿನ ಗ್ರಾಮದ ಇಬ್ಬರು ಯುವಕರು ಪ್ರಾಣ ಕಳೆದುಕೊಂಡಿದ್ದಾರೆ. ನಿನ್ನೆ ತುಮಕೂರು ಸಮೀಪ ಯುವಕನೋರ್ವ ಆಕಸ್ಮಿಕವಾಗಿ ಸಾವನ್ನಪ್ಪಿದ್ದರೆ, ಆತನ ಶವಸಂಸ್ಕಾರಕ್ಕೆ ಬಂದು ಹೆಂಡತಿ ಮನೆಗೆ ತೆರಳಿದ್ದ ಮತ್ತೋರ್ವ ಯುವಕ ಹೃದಯಾಘಾತದಿಂದ ಸಂಜೆ ಮೃತಪಟ್ಟಿದ್ದಾನೆ. ಹೀಗಾಗಿ, ಹುನಗುಂದ ಗ್ರಾಮದಲ್ಲಿ ಅಕ್ಷರಶಃ ಸೂತಕದ ವಾತಾವರಣ ನಿರ್ಮಾಣವಾಗಿದೆ.

ಇಂದು ಮೃತಪಟ್ಟ ಗಂಗಾಧರ್ ಬಗಡಗೇರಿ

ಗಂಗಾಧರ ಸಂಗಪ್ಪ ಬಗಡಗೇರಿ(38) ಇವತ್ತು ಸಂಜೆ ಹೃದಯಾಘಾತದಿಂದ ಮೃತಪಟ್ಟಿದ್ದಾನೆ. ಈತ ನಿನ್ನೆಯಷ್ಟೇ ಮೃತಪಟ್ಟಿದ್ದ ಹುನಗುಂದ ಗ್ರಾಮದ ಸ್ನೇಹಿತ ರಾಜು ನಾಗಪ್ಪ ಕುಸುಗಲ್ ಅಂತ್ಯ ಸಂಸ್ಕಾರಕ್ಕಾಗಿ ಬುಧವಾರ ಬೆಳಿಗ್ಗೆ ಹುನಗುಂದ ಗ್ರಾಮಕ್ಕೆ ಬಂದಿದ್ದ. ಅಂತ್ಯ ಸಂಸ್ಕಾರ ಮುಗಿಸಿ ಹುಬ್ಬಳ್ಳಿ ಸಮೀಪದ ಶೆರೆವಾಡ ಗ್ರಾಮಕ್ಕೆ ತೆರಳಿದ್ದ. ಸಂಜೆ ಏಕಾಏಕಿ ಹೃದಯಾಘಾತದಿಂದ ಮೃತಪಟ್ಟಿದ್ದಾನೆ.

ನಿನ್ನೆ ಮೃತಪಟ್ಟ ರಾಜು ಕುಸುಗಲ್

ಇನ್ನು, ಮೃತ ಯುವಕನ ಪಾರ್ಥೀವ ಶರೀರವನ್ನು ಹುನಗುಂದ ಗ್ರಾಮಕ್ಕೆ ತರಲಾಗಿದ್ದು, ನಾಳೆ ಗುರುವಾರ ಹುನಗುಂದ ಗ್ರಾಮದಲ್ಲಿ ಶವ ಸಂಸ್ಕಾರ ನಡೆಯಲಿದೆ. ಈ ಒಂದೇ ವಾರದಲ್ಲಿ ಹುನಗುಂದ ಗ್ರಾಮದಲ್ಲಿ ಮೂವರು ಯುವಕರು ಸಾವನ್ನಪ್ಪಿದ್ದು ಗ್ರಾಮದಲ್ಲಿ ಸೂತಕದ ವಾತಾವರಣ ನಿರ್ಮಾಣವಾಗಿದೆ.

error: Content is protected !!