ಹುಬ್ಬಳ್ಳಿ: ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಮುಂಡಗೋಡ ತಾಲೂಕಿನ ಅರಶಿಣಗೇರಿ ಗ್ರಾಮದ ವ್ಯಕ್ತಿಯನ್ನು ಹುಬ್ಬಳ್ಳಿ ಸಮೀಪದ ಹಳ್ಯಾಳ ಗ್ರಾಮದಲ್ಲಿ ಭೀಕರ ಕೊಲೆ ಮಾಡಲಾಗಿದೆ.

ತಲೆ ಮೇಲೆ ಪಾಟಿ ಗಲ್ಲು ಎತ್ತಿ ಹಾಕಿ ಕೊಲೆ ಮಾಡಲಾಗಿದ್ದು, ಅರಶಿಣಗೇರಿಯ ಶರೀಫ್ ಸಾಬ್ ಮಾಬುಸಾಬ್ ಕಮಡೊಳ್ಳಿ ಎಂಬುವವನನ್ನು ಭೀಕರವಾಗಿ ಕೊಂದು ಹಾಕಲಾಗಿದೆ.

ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ ಆರೋಪಿಯನ್ನು ಶಶಿಧರ ಚೆನ್ನೋಜಿ ಅಂತಾ ತಿಳಿದು ಬಂದಿದೆ. ಹಳ್ಯಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹೊಸ ಕೊಠಡಿಯಲ್ಲಿ ಕೊಲೆ ಮಾಡಲಾಗಿದೆ.

ಅಂದಹಾಗೆ, ಶರೀಫ್ ಸಾಬ್ ಕಮಡೊಳ್ಳಿ ಮುಂಡಗೋಡ ತಾಲೂಕಿನ ಅರಷಣಗೇರಿ ಗ್ರಾಮದ ನಿವಾಸಿ, ಸದ್ಯ ಹುಬ್ಬಳ್ಳಿ ತಾಲೂಕಿನ ಹಳ್ಯಾಳ ಗ್ರಾಮದಲ್ಲಿಯೇ ನೆಲೆಸಿದ್ದ ಎನ್ನಲಾಗಿದೆ. ಮೊನ್ನೆಯಷ್ಟೆ ಚುನಾವಣೆಯ ಸಲುವಾಗಿ ಅರಶಿಣಗೇರಿ ಗ್ರಾಮಕ್ಕೆ ಬಂದು ಮತ ಚಲಾಯಿಸಿ ಹೋಗಿದ್ದ ಎನ್ನಲಾಗಿದೆ.

ಹುಬ್ಬಳ್ಳಿ ಗ್ರಾಮಾಂತರ ಠಾಣಾ ಪೊಲೀಸರು ಘಟನಾ ಸ್ಥಳಕ್ಕೆ ಬೇಟಿ ನೀಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

error: Content is protected !!